ಬೆಂಗಳೂರು: ನಗರದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಕಿಡಿಗೇಡಿಗಳು ಜೆರಾಕ್ಸ್ ನೋಟ್ ನೀಡಿ ಜನರಿಗೆ ಯಾಮಾರಿಸುತ್ತಿದ್ದಾರೆ. ಕಾಟನ್ಪೇಟೆಯಲ್ಲಿ ಜೆರಾಕ್ಸ್ ಮಾಡಿದ ನೋಟು ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯರು ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೊರಗಿನಿಂದ ಬೆಂಗಳೂರಿಗೆ ಬಂದ ಕಿಡಿಗೇಡಿಗಳು ನೋಟನ್ನು ಜೆರಾಕ್ಸ್ ಮಾಡಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕಿಡಿಗೇಡಿಗಳು ಜೆರಾಕ್ಸ್ ಮಾಡಿದ 100 ರೂ. ನೋಟು ಕೊಟ್ಟು ಯಾಮಾರಿದ್ದಾರೆ. ಸಣ್ಣ ಹೋಟೆಲ್, ಬೀಡ ಅಂಗಡಿ, ಜನರಲ್ ಸ್ಟೋರ್ ಹೀಗೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ನೋಟುಗಳನ್ನ ನೀಡಿದ್ದಾರೆ. ಹೊರಗಿನಿಂದ ಬಂದು ಲಾಡ್ಜ್ನಲ್ಲಿ ಉಳಿದುಕೊಂಡವರು ಈ ಕೃತ್ಯ ಎಸಗಿರಬುದು ಎಂಬ ಅನುಮಾನವಿದೆ. ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ ಮಾಡಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ. ಘಟನೆ ಸಂಬಂಧ ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಿಜಬಣ್ಣ ಬಯಲಾಗಬೇಕಿದೆ.
ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರ ಸೆರೆ
ಈ ಹಿಂದೆಯೂ ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು. ನಿಷೇಧಿತ ನೋಟು ಬದಲಾವಣೆ ಮಾಡುತ್ತೇವೆಂದು ಹೇಳಿ ಆರೋಪಿಗಳು ಮೋಸ ಮಾಡುತ್ತಿದ್ದರು. ನಿಷೇಧಿತ 1,000 ರೂ. ಮುಖಬೆಲೆಯ ನೋಟುಗಳ ಜೆರಾಕ್ಸ್ ಮಾಡಿ ವಂಚಿಸುತ್ತಿದ್ದರು. 5 ಕೋಟಿ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ
Confession : ಅಭಿಜ್ಞಾನ ; ಪ್ರಗತಿ ಮತ್ತು ಪರಿಪೂರ್ಣತೆಗಳಿಗೆ ಅನಂತತೆಯಲ್ಲಿ ಯಾವ ಅರ್ಥವೂ ಇಲ್ಲ ದಿಕ್ಕೂ ಇಲ್ಲ