ಬೆಂಗಳೂರು: ಕೊವಿಡ್ ಹಿನ್ನೆಲೆ ಹಲವು ಹಬ್ಬ, ಜಾತ್ರೆ ನಿರ್ಬಂಧಿಸಲಾಗಿತ್ತು. ಆದರೆ ಈಗ ಕೊವಿಡ್ ಪ್ರಕರಣ ಇಳಿಕೆಯಾದ ಹಿನ್ನೆಲೆ ಜಾತ್ರೆ ಮತ್ತು ಕಡಲೆಕಾಯಿ ಪರಿಷೆಗೆ ಅವಕಾಶ ಮಾಡಿಕೊಡಲಾಗಿದೆ. ಸದ್ಯ ಜಾತ್ರೆಯ ರೂಪರೇಷೆಯ ಬಗ್ಗೆ ದೇಗುಲದ ವತಿಯಿಂದ ಪ್ರಸ್ತಾವನೆ ಸಲ್ಲಿಕೆ ಆಗಬೇಕು. ಸ್ಥಳೀಯರ ಜತೆ ಚರ್ಚಿಸಿ ಅಧಿಕಾರಿಗಳು ಜಾತ್ರೆ ಮಾಡಲು ಅನುಮತಿ ನೀಡುತ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಅಕ್ರಮ ಕಟ್ಟಡಗಳ ಪಟ್ಟಿ ವಿಚಾರ
ಹೈಕೋರ್ಟ್ ನಿರ್ದೇಶನದಂತೆ ಕೆಲಸ ಮಾಡಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿರುವ ಅಕ್ರಮ ಕಟ್ಟಡಗಳ ಪಟ್ಟಿ ವಿಚಾರದ ಬಗ್ಗೆ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಕೊವಿಡ್ ಕೇಸ್ ಹೆಚ್ಚಳದ ಸುಳಿವು ಸಿಕ್ಕರೆ ಟೆಸ್ಟ್ ಹೆಚ್ಚಳ
ಸೀವೆಜ್‌ನಲ್ಲಿ ಸೋಂಕು ಗುರುತು ಪಡಿಸಲು ಸಾಧ್ಯ. ಕೊವಿಡ್ ಎಲ್ಲಿ ಹೆಚ್ಚಾಗಬಹುದೆಂದು ಅಂದಾಜಿಸಬಹುದು
ನಮ್ಮ ಅಧಿಕಾರಿಗಳೂ ಸಹಕಾರ ನೀಡಲಿದ್ದಾರೆ. ಕೊವಿಡ್ ಕೇಸ್ ಹೆಚ್ಚಳದ ಸುಳಿವು ಸಿಕ್ಕರೆ ಟೆಸ್ಟ್ ಹೆಚ್ಚಳ ಮಾಡುತ್ತೇವೆ. ಯಾವ ಭಾಗದಲ್ಲಿ ಕೊವಿಡ್ ಹೆಚ್ಚಳವಾಗುತ್ತದೆ. ಆ ಭಾಗದಲ್ಲಿ ಕೊವಿಡ್ ಟೆಸ್ಟ್ ಹೆಚ್ಚಳಕ್ಕೆ ಆಧ್ಯತೆ ನೀಡುತ್ತೇವೆ. ಕ್ಲಿಯರ್ ಲೈನ್ ಹಾಗೂ ಲಸಿಕೆ ಚಾಲನೆ ಪಡೆಯಲು ಯಾವಾಗ ಬರುವುದು, ಎಲ್ಲಿ, ಹೇಗೆ ಪಡೆಯಬೇಕು ಎಂಬ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕಿದೆ. ಈವರೆಗೂ ರಾಜ್ಯ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟ ಆದೇಶ ಬಂದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ರಸ್ತೆ ಗುಂಡಿ ಮುಚ್ಚದ ಅಧಿಕಾರಿಗೆ ಅಮಾನತು ಶಿಕ್ಷೆ, ಬಿಬಿಎಂಪಿಯ ಇಇ ಎಂ.ಜಿ.ನಾಗರಾಜು ಅಮಾನತು
ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿ ಮುಚ್ಚಲಾಗಿದೆ: ಗೌರವ್ ಗುಪ್ತಾ ಮಾಹಿತಿ
Published On - 1:45 pm, Wed, 10 November 21