Bengaluru: ಮತ್ತೆ ಹೆಚ್ಚಿದ ಕೊರೊನಾ ಪ್ರಕರಣಗಳು; ಯಶವಂತಪುರದ 72 ಫ್ಲಾಟ್ ಸೀಲ್​ಡೌನ್

| Updated By: ganapathi bhat

Updated on: Jul 31, 2021 | 5:37 PM

Covid19 Third Wave: ಧಾರವಾಡ, ದೆಹಲಿಗೆ ಪ್ರಯಾಣ ಮಾಡಿ ವಾಪಸ್ ಆದವರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. 16 ಮಂದಿಯಲ್ಲಿ ಕೊವಿಡ್ ಪತ್ತೆಯಾಗಿರುವುದರಿಂದ ಕೊರೋನಾ ಕ್ಲಸ್ಟರ್ ಎಂದು ಗುರುತಿಸಿ ಸಂಪೂರ್ಣ ಎ ಬ್ಲಾಕ್ 72 ಮನೆಗಳು ಸೀಲ್ ಡೌನ್ ಮಾಡಲಾಗಿದೆ.

Bengaluru: ಮತ್ತೆ ಹೆಚ್ಚಿದ ಕೊರೊನಾ ಪ್ರಕರಣಗಳು; ಯಶವಂತಪುರದ 72 ಫ್ಲಾಟ್ ಸೀಲ್​ಡೌನ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಗರದ ಯಶವಂತಪುರದಲ್ಲಿರುವ ಅಪಾರ್ಟ್‌ಮೆಂಟ್​ನಲ್ಲಿ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅಪಾರ್ಟ್‌ಮೆಂಟ್‌ನ ಎ ಬ್ಲಾಕ್ ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ. ಅಪಾರ್ಟ್​ಮೆಂಟ್​ನ ಎ ಬ್ಲಾಕ್‌ನಲ್ಲಿ ಒಟ್ಟು 72 ಮನೆಗಳಿದ್ದು, 72 ಫ್ಲ್ಯಾಟ್​ ಕೂಡ ಸೀಲ್‌ಡೌನ್ ಮಾಡಲಾಗಿದೆ.

ಧಾರವಾಡ, ದೆಹಲಿಗೆ ಪ್ರಯಾಣ ಮಾಡಿ ವಾಪಸ್ ಆದವರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. 16 ಮಂದಿಯಲ್ಲಿ ಕೊವಿಡ್ ಪತ್ತೆಯಾಗಿರುವುದರಿಂದ ಕೊರೋನಾ ಕ್ಲಸ್ಟರ್ ಎಂದು ಗುರುತಿಸಿ ಸಂಪೂರ್ಣ ಎ ಬ್ಲಾಕ್ 72 ಮನೆಗಳು ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ 3ನೇ ಅಲೆಯ ಆತಂಕ ಶುರುವಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಬೆಂಗಳೂರಿನ ಮಹದೇವಪುರದಲ್ಲಿರುವ ಅಪಾರ್ಟ್‌ಮೆಂಟ್ ಗೇಟ್ ಕ್ಲೋಸ್ ಮಾಡಲಾಗಿದೆ. ಸೋಂಕಿತರಿರುವ ಅಪಾರ್ಟ್‌ಮೆಂಟ್‌ನ ಗೇಟ್ ಕ್ಲೋಸ್ ಮಾಡಲಾಗಿದೆ. ಜೊತೆಗೆ, ಕೊರೊನಾ ಸೋಂಕಿತರಿರುವ ಫ್ಲ್ಯಾಟ್‌ ಕೂಡ ಕ್ಲೋಸ್ ಮಾಡಲಾಗಿದೆ.

ಕರ್ಫ್ಯೂ ಜಾರಿ ಸಾಧ್ಯತೆ
ಐದು ಕೇಸ್ಗಳು ಪತ್ತೆಯಾಗುವ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗುತ್ತದೆ. 10 ಕೇಸ್​ಗಳು ಪತ್ತೆಯಾಗುವ ಸ್ಟ್ರೀಟ್, ರಸ್ತೆಗಳನ್ನೇ ಸೀಲ್ ಡೌನ್ ಮಾಡುತ್ತೇವೆ. ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ. ಮಾರ್ಕೆಟ್​ಗಳಿಗೆ ಹೋಗಿ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಸರ್ಕಾರಕ್ಕೆ ನಮ್ಮ ವರದಿ ನೀಡಲಾಗಿದೆ. ಸೋಂಕಿತರ ಸಂಖ್ಯೆ ಏರಿಕೆಯಾದರೆ ಸರ್ಕಾರದ ಹಂತದಲ್ಲಿ ಕರ್ಫ್ಯೂಗಳನ್ನ ಜಾರಿ ಮಾಡುವ ಸಾಧ್ಯತೆಯಿದೆ. ಜೊತೆಗೆ ಬೇರೆ ರೀತಿಯ ಕ್ರಮಕ್ಕೂ ಮುಂದಾಗಬಹುದು. ಅದನ್ನು ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಇಂದು (ಜುಲೈ 31) ಹೇಳಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ! ಒಂದೇ ಮನೆಯಲ್ಲಿ ಮೂರು ಸೋಂಕಿತರು ಪತ್ತೆಯಾದರೆ ಮನೆ ಸೀಲ್ ಡೌನ್; ಬಿಬಿಎಂಪಿ ನಿರ್ಧಾರ

(Covid19 Corona Cases in Bengaluru Apartment 72 Flat Sealdown)