Crime News: ತರಕಾರಿ ಅಂಗಡಿಯಲ್ಲಿ ಹಣ ಎಗರಿಸಲು ಯತ್ನ; ಕಳ್ಳನನ್ನು ಹಿಡಿದು ಥಳಿಸಿದ ಅಂಗಡಿ ಮಾಲೀಕ

| Updated By: ganapathi bhat

Updated on: Nov 05, 2021 | 5:19 PM

ತರಕಾರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಕಳ್ಳರ ಪೈಕಿ ಒಬ್ಬಾತ ಸೆರೆ ಸಿಕ್ಕಿದ್ದಾನೆ. ಮತ್ತೊಬ್ಬ ಕಳ್ಳ ತಪ್ಪಿಸಿಕೊಂಡಿರುವುದು ತಿಳಿದುಬಂದಿದೆ. ನಂತರ, ಸ್ಥಳಕ್ಕೆ ಬನಶಂಕರಿ ಠಾಣೆಯ ಪೋಲಿಸರು ಭೇಟಿ ನೀಡಿದ್ದಾರೆ.

Crime News: ತರಕಾರಿ ಅಂಗಡಿಯಲ್ಲಿ ಹಣ ಎಗರಿಸಲು ಯತ್ನ; ಕಳ್ಳನನ್ನು ಹಿಡಿದು ಥಳಿಸಿದ ಅಂಗಡಿ ಮಾಲೀಕ
ಬನಶಂಕರಿ ಠಾಣೆ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಲಾಗಿದೆ
Follow us on

ಬೆಂಗಳೂರು: ತರಕಾರಿ ಮಳಿಗೆಯಲ್ಲಿ ಹಣ ಎಗರಿಸಲು ಯತ್ನಿಸಿದವನಿಗೆ ಅಂಗಡಿ ಮಾಲೀಕ, ಸಾರ್ವಜನಿಕರು ಸೇರಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಬೆಂಗಳೂರಿನ ಯಡಿಯೂರಿನ ಶಾಸ್ತ್ರಿನಗರದಲ್ಲಿ ನಡೆದಿದೆ. 8 ಕೆಜಿ ಈರುಳ್ಳಿ ಬೇಕು ಎಂದು ತರಕಾರಿ ಅಂಗಡಿಗೆ ಇಬ್ಬರು ಕಳ್ಳರು ಬಂದಿದ್ದರು. ಈ ನಡುವೆ, ಅಂಗಡಿಯಾತ ಈರುಳ್ಳಿ ತೂಕ ಮಾಡುತ್ತಿದ್ದಾಗ ಒಬ್ಬ ಕಳ್ಳ ಕ್ಯಾಷ್​ಬಾಕ್ಸ್​ಗೆ ಕೈಹಾಕಿದ್ದ. ತಕ್ಷಣ ಆತನನ್ನು ತರಕಾರಿ ಮಳಿಗೆ ಮಾಲೀಕ ಹಿಡಿದುಕೊಂಡಿದ್ದಾರೆ. ಹಣ ಎಗರಿಸಲು ಯತ್ನಿಸಿದವನನ್ನು ಕಂಬಕ್ಕೆ ಕಟ್ಟಿಹಾಕಿ ಗೂಸಾ ಕೊಡಲಾಗಿದೆ.

ತರಕಾರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಕಳ್ಳರ ಪೈಕಿ ಒಬ್ಬಾತ ಸೆರೆ ಸಿಕ್ಕಿದ್ದಾನೆ. ಮತ್ತೊಬ್ಬ ಕಳ್ಳ ತಪ್ಪಿಸಿಕೊಂಡಿರುವುದು ತಿಳಿದುಬಂದಿದೆ. ನಂತರ, ಸ್ಥಳಕ್ಕೆ ಬನಶಂಕರಿ ಠಾಣೆಯ ಪೋಲಿಸರು ಭೇಟಿ ನೀಡಿದ್ದಾರೆ. ಕಳ್ಳನನ್ನು ಬನಶಂಕರಿ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸ್ ಸಿಬ್ಬಂದಿ ಕಳ್ಳನನ್ನು ಆಟೋದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.

ತುಮಕೂರು: ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಪತ್ನಿಯ ಶವ ಪತ್ತೆ
ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಪತ್ನಿಯ ಶವ ಪತ್ತೆಯಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರಾಮದ ಬಿಡಿಪುರದ ಆವಲಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಶೋಭಾ (16) ಎಂಬವರು ಶವವಾಗಿ ಪತ್ತೆ ಆಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಪತಿ ಲಕ್ಷ್ಮೀಪತಿ ವಿರುದ್ಧ ಪತ್ನಿ ಕೊಲೆಗೈದಿರುವ ಆರೋಪ ಕೇಳಿಬಂದಿದೆ.

ಪತಿಯೇ ಕೊಂದು ನೇಣುಬಿಗಿದಿರುವುದಾಗಿ ಆರೋಪ ವ್ಯಕ್ತವಾಗಿದೆ. ಎಸ್​ಎಸ್​ಎಲ್​ಸಿ ಓದುತ್ತಿದ್ದ ಬಾಲಕಿಗೆ ಪೋಷಕರು ವಿವಾಹ ಮಾಡಿದ್ದರು. ಇನ್ನೂ 16 ವರ್ಷದ ಬಾಲಕಿ ದುರ್ಘಟನೆಗೆ ಬಲಿಯಾಗಿದ್ದಾರೆ. ಶೋಭಾ ಪೋಷಕರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಳಗಾವಿ: ಹಾಡಹಗಲೇ ಮಕ್ಕಳ ಅಪಹರಣಕ್ಕೆ ಯತ್ನ
ಬೆಳಗಾವಿಯಲ್ಲಿ ಹಾಡಹಗಲೇ ಮಕ್ಕಳ ಅಪಹರಣಕ್ಕೆ ಯತ್ನ ನಡೆಸಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ಘಟನೆ ನಡೆದಿದೆ. ಚಾಕೋಲೆಟ್ ನೀಡುವುದಾಗಿ ಹೇಳಿ ಮಕ್ಕಳ ಕಿಡ್ನ್ಯಾಪ್‌ಗೆ ಯತ್ನಿಸಲಾಗಿದೆ ಎನ್ನಲಾಗಿದೆ. ಕಾರಿನಲ್ಲಿ ಇಬ್ಬರು ಮಕ್ಕಳನ್ನು ಹತ್ತಿಸಿಕೊಂಡಿದ್ದ ಕಿಡ್ನ್ಯಾಪರ್ಸ್ ಸ್ಥಳೀಯರು ಕೂಗಿಕೊಂಡ ಹಿನ್ನೆಲೆ ಮಕ್ಕಳನ್ನು ಬಿಟ್ಟು ಪರಾರಿ ಆಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ದೇವನಹಳ್ಳಿ: ಪಟಾಕಿ ಕಿಡಿ ಬಿದ್ದು ಲೇಡಿಸ್ ಟೈಲರ್ ಅಂಗಡಿ ಅಗ್ನಿಗಾಹುತಿ
ಪಟಾಕಿ ಕಿಡಿ ಬಿದ್ದು ಲೇಡಿಸ್ ಟೈಲರ್ ಅಂಗಡಿ ಅಗ್ನಿಗಾಹುತಿ ಆದ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ವೇಣುಗೋಪಾಲ್‌ ಎಂಬವರಿಗೆ ಸೇರಿದ ಟೈಲರ್ ಅಂಗಡಿ ಬೆಂಕಿಗಾಹುತಿ ಆಗಿದೆ. ಜೀವನಾಧಾರವಾಗಿದ್ದ ಅಂಗಡಿಯನ್ನು ಕಳೆದುಕೊಂಡು ಅಂಗಡಿ ಮಾಲೀಕ ವೇಣುಗೋಪಾಲ್ ಎಂಬವರು ಕಂಗಾಲಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಡ್ಯಾನ್ಸ್​ ಬಾರ್​​ಗಳಿಗೆ ಲೈಸೆನ್ಸ್​ ಕೊಡಿಸುವುದಾಗಿ ಗೃಹ ಸಚಿವರ ಹೆಸರಲ್ಲಿ ವಂಚನೆ; ಆರೋಪಿ ಸಿಸಿಬಿ ವಶಕ್ಕೆ

ಇದನ್ನೂ ಓದಿ: ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 21 ಮಂದಿ ಸಾವು: ಸಚಿವ ಸುನಿಲ್ ಕುಮಾರ್