ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 21 ಮಂದಿ ಸಾವು: ಸಚಿವ ಸುನಿಲ್ ಕುಮಾರ್

"ಬೆಟ್ಟಿಯಾದಲ್ಲಿ 10 ಜನರು ಮತ್ತು ಗೋಪಾಲ್‌ಗಂಜ್‌ನಲ್ಲಿ 11 ಜನರು ಸೇರಿದಂತೆ ಒಟ್ಟು 21 ಜನರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ" ಎಂದು ರಾಜ್ಯ ಸಚಿವ ಸುನಿಲ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ.

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 21 ಮಂದಿ ಸಾವು: ಸಚಿವ ಸುನಿಲ್ ಕುಮಾರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 05, 2021 | 3:16 PM

ಪಟನಾ: ಬಿಹಾರದಲ್ಲಿ(Bihar ) ನಕಲಿ ಮದ್ಯ ಸೇವಿಸಿ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸಚಿವ ಸುನಿಲ್ ಕುಮಾರ್ ಶುಕ್ರವಾರ ಹೇಳಿದ್ದಾರೆ. “ಬೆಟ್ಟಿಯಾದಲ್ಲಿ 10 ಜನರು ಮತ್ತು ಗೋಪಾಲ್‌ಗಂಜ್‌ನಲ್ಲಿ 11 ಜನರು ಸೇರಿದಂತೆ ಒಟ್ಟು 21 ಜನರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ” ಎಂದು ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ. ಬೆಟ್ಟಿಯಾದಲ್ಲಿ ನಕಲಿ ಮದ್ಯ ಸೇವಿಸಿ ಮತ್ತಿಬ್ಬರು ಮೃತಪಟ್ಟಿರುವ ಶಂಕೆ ಇದೆ ಎಂದು ಅವರು ಮಾಹಿತಿ ನೀಡಿದರು. ಆದಾಗ್ಯೂ, ಅವರ ಮರಣೋತ್ತರ ಪರೀಕ್ಷೆಯ ವರದಿಗಳು ಇನ್ನೂ ಕಾಯುತ್ತಿರುವ ಕಾರಣ ಅದನ್ನು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ. ಬೆಟ್ಟಿಯಾದಲ್ಲಿ ಇನ್ನೂ ಎರಡು ಸಾವುಗಳು ನಕಲಿ ಮದ್ಯ ಸೇವನೆಯಿಂದಾಗಿದೆ  ಎಂಬುದರ ಬಗ್ಗೆ ಶಂಕೆ ಇದ್ದು ಅವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವವರ ಸ್ಥಿತಿ ಸ್ಥಿರವಾಗಿದೆ,’’ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದಲ್ಲಿ ಮದ್ಯ ನಿಷೇಧವಿದ್ದರೂ ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ವರದಿಯಾಗಿವೆ. ಈ ಹಿಂದೆ ಬೆಟ್ಟಿಯಾ ಮತ್ತು ಗೋಪಾಲ್‌ಗಂಜ್‌ನಲ್ಲಿ ಮೃತರ ಕುಟುಂಬಗಳನ್ನು ಭೇಟಿ ಮಾಡಿದ್ದ ಬಿಹಾರ ಸಚಿವ ಜನಕ್ ಚಮರ್, ಘಟನೆ ದುರದೃಷ್ಟಕರ ಎಂದು ಹೇಳಿದ್ದಾರೆ. ನಕಲಿ ಮದ್ಯದ ನೆಪದಲ್ಲಿ ಷಡ್ಯಂತ್ರ ಕಾಣಬಹುದು. ಅದನ್ನು ಸೇವಿಸುವವರು ಬಡವರು. ಕ್ರಮ ಕೈಗೊಂಡಾಗ ಅಥವಾ ದಾಳಿ ಮಾಡಿದಾಗ ದುರ್ಬಲರನ್ನು ಬಂಧಿಸಲಾಗುತ್ತದೆ. ದುರ್ಬಲರನ್ನು ಸೆರೆ ಹಿಡಿಯಲಾಗುತ್ತದೆ ಮತ್ತು ದುರ್ಬಲರು ಸಾಯುತ್ತಾರೆ ಇದು ದುರದೃಷ್ಟಕರ! ಎಂದಿದ್ದಾರೆ ಚಮರ್.

ನಾವು ಪ್ರತಿ ದುಃಖಿತ ಕುಟುಂಬವನ್ನು ಭೇಟಿ ಮಾಡಿದ್ದೇವೆ, ಸತ್ತವರನ್ನು ಮರಳಿ ತರಲು ಸಾಧ್ಯವಿಲ್ಲ ಆದರೆ ಜನರು ಆಸ್ಪತ್ರೆಗಳಲ್ಲಿ ಜೀವಕ್ಕಾಗಿ ಹೋರಾಡುತ್ತಿರುವವರಿಗಾಗಿ ಪ್ರಾರ್ಥಿಸುತ್ತಿದ್ದಾರೆ, ನಾನು ಡಿಎಂ, ಎಸ್ಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಇಂತಹ ಸಂಗತಿಗಳು ನಡೆಯುತ್ತಿವೆ, ಪೊಲೀಸರ ಭಯ ಕಾಣುತ್ತಿಲ್ಲ” ಎಂದು ಚಮರ್ ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್ ಕೂಡ ಈ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮದ್ಯ ನಿಷೇಧ ಕಾನೂನು “ಸಂಪೂರ್ಣ ವೈಫಲ್ಯ” ಎಂದು ಬಣ್ಣಿಸಿದ್ದರು.

ಇದನ್ನೂ ಓದಿ: ಕುದುರೆ ರೇಸ್​ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರದ ಆದೇಶ; ಕೊವಿಡ್ ಕಾರ್ಯವಿಧಾನ ಪಾಲಿಸುವಂತೆ ಷರತ್ತು