AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದುರೆ ರೇಸ್​ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರದ ಆದೇಶ; ಕೊವಿಡ್ ಕಾರ್ಯವಿಧಾನ ಪಾಲಿಸುವಂತೆ ಷರತ್ತು

Horse Race: ರೇಸ್ ಕೋರ್ಸ್​​ಗೆ ಪ್ರವೇಶಿಸುವವರು ಲಸಿಕೆ ಪಡೆದಿರಬೇಕು. ಕಡ್ಡಾಯವಾಗಿ ಲಸಿಕೆ ಪಡೆದಿರಬೇಕೆಂದು ಸರ್ಕಾರ ಷರತ್ತು ವಿಧಿಸಿದೆ. ಸ್ಥಳಾವಕಾಶದ ಸಾಮರ್ಥ್ಯ ಆಧರಿಸಿ ಜನರು ರೇಸ್​ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಕುದುರೆ ರೇಸ್​ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರದ ಆದೇಶ; ಕೊವಿಡ್ ಕಾರ್ಯವಿಧಾನ ಪಾಲಿಸುವಂತೆ ಷರತ್ತು
ಕುದುರೆ ರೇಸ್- ಬೆಂಗಳೂರು ಟರ್ಫ್ ಕ್ಲಬ್
TV9 Web
| Updated By: ganapathi bhat|

Updated on:Nov 05, 2021 | 2:47 PM

Share

ಬೆಂಗಳೂರು: ಕುದುರೆ ರೇಸ್​ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರ ಇಂದು (ನವೆಂಬರ್ 5) ಆದೇಶ ಹೊರಡಿಸಿದೆ. ಕೊವಿಡ್ 19 ಕಾರ್ಯವಿಧಾನ ಪಾಲಿಸುವಂತೆ ಸರ್ಕಾರ ಷರತ್ತು ಹಾಕಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳು ನಿಂತು ಹೋಗಿದ್ದವು. ಇದೀಗ, ಮತ್ತೆ ಜನಜೀವನ ಯಥಾಸ್ಥಿತಿಗೆ ಮರಳಲು ಆರಂಭಿಸಿದೆ. ಶಾಲಾ ಕಾಲೇಜುಗಳು ಆರಂಭವಾಗಿವೆ. ಎಲ್​ಕೆಜಿ, ಯುಕೆಜಿ ಭೌತಿಕ ತರಗತಿ ನಡೆಸುವುದಕ್ಕೂ ಅನುಮತಿ ನೀಡಲಾಗಿದೆ. ಜೊತೆಗೆ ನೈಟ್ ಕರ್ಫ್ಯೂ ಕೂಡ ಹಿಂಪಡೆದು ಆದೇಶ ಹೊರಡಿಸಲಾಗಿದೆ.

ಕುದುರೆ ಓಟದ ಸ್ಪರ್ಧೆಗಳನ್ನು ಮುಂದುವರಿಸುವುದಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ರೇಸ್ ಕೋರ್ಸ್​​ಗೆ ಪ್ರವೇಶಿಸುವವರು ಲಸಿಕೆ ಪಡೆದಿರಬೇಕು. ಕಡ್ಡಾಯವಾಗಿ ಲಸಿಕೆ ಪಡೆದಿರಬೇಕೆಂದು ಸರ್ಕಾರ ಷರತ್ತು ವಿಧಿಸಿದೆ. ಸ್ಥಳಾವಕಾಶದ ಸಾಮರ್ಥ್ಯ ಆಧರಿಸಿ ಜನರು ರೇಸ್​ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ನೈಟ್ ಕರ್ಫ್ಯೂ ಹಿಂಪಡೆದು ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯಾದ್ಯಂತ ವಿಧಿಸಿದ್ದ ನೈಟ್ ಕರ್ಫ್ಯೂ ಹಿಂಪಡೆದು ಸರ್ಕಾರ ಇಂದು (ನವೆಂಬರ್ 5) ಆದೇಶ ಹೊರಡಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ವಿದಿಸಿದ್ದ ಆದೇಶ ವಾಪಸ್​ ಪಡೆಯಲಾಗಿದೆ. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹಾಗೂ ದೇಶಾದ್ಯಂತ ಇಳಿಮುಖವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ.

ನಿನ್ನೆ (ನವೆಂಬರ್ 4) ಎಲ್​ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಭೌತಿಕವಾಗಿ ನಡೆಸುವುದಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ನವೆಂಬರ್ 8 ರಿಂದ ಎಲ್​ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಲಿವೆ. ಇದಕ್ಕೂ ಮೊದಲು ಅಕ್ಟೋಬರ್ 25 ರಂದು ಶಾಲೆ ಪುನಾರಂಭಿಸುವಂತೆ ಆದೇಶ ನೀಡಲಾಗಿತ್ತು. ಈಗಾಗಲೇ ಶಾಲೆ ಕಾಲೇಜುಗಳು ಆಫ್​ಲೈನ್ ವಿಧಾನದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಸಿನಿಮಾ ಹಾಲ್, ಈಜುಕೊಳಗಳಿಗೂ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ್ದ ನೈಟ್ ಕರ್ಫ್ಯೂ ಆದೇಶವನ್ನು ಇಂದು ಹಿಂಪಡೆಯಲಾಗಿದೆ.

ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಬಳಿಕ ಆರ್ಥಿಕ ಚೇತರಿಕೆಯತ್ತ ಅವಳಿ ನಗರದ ರಿಯಲ್ ಎಸ್ಟೇಟ್ ಉದ್ಯಮ

ಇದನ್ನೂ ಓದಿ: LKG, UKG ಆರಂಭಕ್ಕೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್; ನವೆಂಬರ್ 8ರಿಂದ ಭೌತಿಕ ತರಗತಿ ಶುರು

Published On - 2:44 pm, Fri, 5 November 21