Video: ಮತ್ತಿ ಮರದಲ್ಲಿ ರಕ್ತದಂಥ ದ್ರವ: ಪವಾಡವೆಂದು ಕೈ ಮುಗಿದ ಜನ

ಮರದ ತೊಗಟೆ ತೆಗೆದಾಗ ಕೆಂಪು ರಕ್ತದ ಮಾದರಿಯ ದ್ರವ ಸುರಿದಿದ್ದು ಇದನ್ನು ದೇವರ ಪವಾಡವಿರಬಹುದು ಎಂದು ಜನ ಕೈ ಮುಗಿದಿದ್ದಾರೆ.

Video: ಮತ್ತಿ ಮರದಲ್ಲಿ ರಕ್ತದಂಥ ದ್ರವ: ಪವಾಡವೆಂದು ಕೈ ಮುಗಿದ ಜನ
ಕರಿ ಮತ್ತಿ ಮರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 30, 2022 | 12:06 PM

ಬೆಂಗಳೂರು: ನಗರದ ಮಾಗಡಿ ರೋಡ್ ಜಿಟಿ ಮಾಲ್ ಬಳಿ ಮರದ ತೊಗಟೆ ತೆಗೆದಾಗ ಕೆಂಪು ರಕ್ತದ ಮಾದರಿಯ ದ್ರವ ಸುರಿದಿದ್ದು ಇದನ್ನು ದೇವರ ಪವಾಡವಿರಬಹುದು ಎಂದು ಜನ ಕೈ ಮುಗಿದು ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದಾರೆ. ‘ಟಿವಿ9 ಕನ್ನಡ’ ವೆಬ್​ಸೈಟ್​ನ ಓದುಗರೊಬ್ಬರು ಈ ವಿಡಿಯೊ ತುಣುಕನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಕಳಿಸಿಕೊಟ್ಟಿದ್ದಾರೆ. ಈ ಮರವು ಎಲೆಗಳನ್ನು ಉದುರಿಸಿಕೊಂಡಿರುವ ಕಾರಣ ಅದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ತಜ್ಞರು ಈ ವಿದ್ಯಮಾನದ ಬಗ್ಗೆ ಬೆಳಕು ಚೆಲ್ಲಬೇಕಿದೆ.

‘ಮರವು ಹಲವು ಕಾರಣಗಳಿಂದ ರಕ್ತದಂಥ ಕೆಂಪ್ರ ದ್ರವ ಸ್ರವಿಸುತ್ತದೆ. ಮರದ ಎಲೆಗಳು ಕಾಣಿಸುತ್ತಿಲ್ಲ. ಹೀಗಾಗಿ ಇದನ್ನು ಇಂಥದ್ದೇ ಮರ ಎಂದು ಹೇಳಲು ಆಗುತ್ತಿಲ್ಲ. ಆದರೆ ಮರದ ಆರೈಕೆ ವಿಚಾರದಲ್ಲಿ ಸಾಕಷ್ಟು ತಪ್ಪುಗಳಾಗಿವೆ. ಬುಡದ ಸುತ್ತಲೂ ಸಾಕಷ್ಟು ಜಾಗ ಬಿಡಬೇಕಿತ್ತು’ ಎಂದು ಬೆಂಗಳೂರಿನಲ್ಲಿ ಮರಗಳನ್ನು ಉಳಿಸುವ ಕುರಿತು ನಡೆಯುವ ಹಲವು ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ವಿಜಯ್ ನಿಶಾಂತ್ ‘ಟಿವಿ9’ಗೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ನಿಡಗುಂದಿ: ಗಣಿ ಗ್ರಾಮದ ಸೋಮೇಶ್ವರ ಜಾತ್ರೆಯಲ್ಲಿ ಬಿಂಗಿ ಪವಾಡವೇ ಪ್ರಮುಖ ಆಕರ್ಷಣೆ, ಇಲ್ಲಿವೆ ಚಿತ್ರಗಳು