ಬೆಂಗಳೂರು: ಬಡವರ ಹಸಿವು ನೀಗಿಸಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ (Indira Canteen) ತೆರೆಯಲಾಗಿತ್ತು. ಈ ಕ್ಯಾಂಟೀನ್ ಬಡವರಿಗೆ, ನಿರ್ಗತಕರಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಕ್ಯಾಂಟೀನ್ಗೆ ಇಡಲಾಗಿದೆ. ಆದರೆ ಈ ಹೆಸರನ್ನು ಬದಲಿಸುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T Ravi) ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಮನವಿ ಮಾಡಿದ್ದಾರೆ.
ಟ್ವೀಟ್ ಮೂಲಕ ಮನವಿ ಮಾಡಿದ ಸಿ.ಟಿ.ರವಿ, ಇಂದಿರಾ ಕ್ಯಾಂಟೀನ್ ಹೆಸರನ್ನು ‘ಅನ್ನಪೂರ್ಣೇಶ್ವರಿ’ ಕ್ಯಾಂಟೀನ್ ಎಂದು ಬದಲಿಸಲು ತಿಳಿಸಿದ್ದಾರೆ. ಶೀಘ್ರದಲ್ಲೇ ಕ್ಯಾಂಟೀನ್ ಹೆಸರನ್ನು ಮರುನಾಮಕರಣ ಮಾಡುವಂತೆ ಆಗ್ರಹಿಸಿದ್ದಾರೆ.
Request Chief Minister Sri @BSBommai to rename Indira Canteens across Karnataka as “Annapoorneshwari Canteen” at the earliest.
Don’t see any reason why Kannadigas should be reminded of the dark days of Emergency while they are having food.
— C T Ravi ?? ಸಿ ಟಿ ರವಿ (@CTRavi_BJP) August 7, 2021
ಗಂಭೀರ ಆರೋಪ ಮಾಡಿದ್ದ ಸಿ.ಟಿ.ರವಿ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಒಂದು ಕ್ಯಾಂಟೀನ್ಗೆ ಒಂದು ಕೋಟಿ ಖರ್ಚು ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಮೂಲಕ ಕಾಂಗ್ರೆಸ್ನವರು ಕೊಳ್ಳೆಹೊಡೆದಿದ್ದಾರೆ ಎಂದು ಸಚಿವ ಸಿ.ಟಿ.ರವಿ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು. ಕಾಂಗ್ರೆಸ್ ದುಡ್ಡಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಸಿದರೆ ಯಾವ ಹೆಸರನ್ನಾದರೂ ಇಟ್ಟುಕೊಳ್ಳಲಿ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹೆಸರಿಡಲಿ. ಆದರೆ ಇಂದಿರಾ ಕ್ಯಾಂಟೀನ್ಗೆ ಸರ್ಕಾರದ ಹಣ ಖರ್ಚಾಗುತ್ತಿದೆ. ಇಂದಿರಾ ಕ್ಯಾಂಟೀನ್ ಉಸ್ತುವಾರಿ ಯಾರ ಬೀಗರಿಗೆ ಕೊಟ್ಟಿದ್ದಾರೆ, ಆ ಬೀಗರು ಎಷ್ಟು ಹಣ ಲೂಟಿ ಮಾಡಿದ್ದಾರೆ ಅಂತ ಗೊತ್ತಿದೆ ಎಂದು ಕಿಡಿಕಾರಿದ್ದರು.
2019ರಲ್ಲೇ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸುವಂತೆ ಸಿ.ಟಿ.ರವಿ ಆಗ್ರಹಿಸಿದ್ದರು. ಇಂದಿರಾ ಕ್ಯಾಂಟೀನ್ಗೆ ಸರ್ಕಾರದ ಹಣ ಖರ್ಚಾಗುತ್ತಿದೆ. ಹಾಗಾಗಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಅಂತ ಹೆಸರಿಡಲಿ ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ
ಬೆಂಗಳೂರಿನಲ್ಲಿ ಅನಗತ್ಯವಾಗಿ ಹೊರಗೆ ಬಂದ್ರೆ ಕಠಿಣ ಕ್ರಮ; ಕಮಲ್ ಪಂತ್ ವಾರ್ನಿಂಗ್
(CT Ravi has appealed to CM Bommai to change the name of Indira Canteen)