ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಡಿಕೆಶಿಯಿಂದ ಪಾದಯಾತ್ರೆ: ಸಚಿವ ಅಶ್ವತ್ಥ್ ನಾರಾಯಣ

| Updated By: preethi shettigar

Updated on: Jan 18, 2022 | 6:55 PM

2013 ರಿಂದ 2018 ರವರೆಗೆ ಕಾಂಗ್ರೆಸ್ ಕೈಯ್ಯಲ್ಲಿ ಡಿಪಿಆರ್ ಮಾಡುವುದಕ್ಕೆ ಆಗಿಲ್ಲ. ಈ ಮಾತಿಗೆ ಈಗಲೂ ನಾನು ಬದ್ಧ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಡಿಕೆಶಿಯಿಂದ ಪಾದಯಾತ್ರೆ: ಸಚಿವ ಅಶ್ವತ್ಥ್ ನಾರಾಯಣ
ಸಚಿವ ಅಶ್ವತ್ಥ್ ನಾರಾಯಣ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜಕೀಯ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ಪಾದಯಾತ್ರೆ (Congress padayatra) ಮಾಡುತ್ತಿದೆ. ಮೇಕೆದಾಟು ಯೋಜನೆ (Mekedatu Project) ವಿಚಾರ ಕೋರ್ಟ್‌ನಲ್ಲಿರುವ ಹಿನ್ನೆಲೆ ಕಾಂಗ್ರೆಸ್ ಮೇಕೆದಾಟು ಯೋಜನೆಯ ಬಗ್ಗೆ ಕಾಳಜಿಯೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಡಿ.ಕೆ.ಶಿವಕುಮಾರ್ (DK Shivakumar) ಪಾದಯಾತ್ರೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಡಿಕೆಶಿ ಇಮೇಜ್ ಹೆಚ್ಚಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಅಷ್ಟೇ. ಕಾಂಗ್ರೆಸ್​ನವರ ಕೈಲಿ ಮೇಕೆದಾಟು ಯೋಜನೆ ಮಾಡುವುದಕ್ಕೆ ಸಾಧ್ಯವಿಲ್ಲ. ನೂರು ಬಾರಿ ಬೇಕಾದರೂ ಸವಾಲು ಹಾಕುತ್ತೇನೆ. ಬಿಜೆಪಿ ಮಾತ್ರ ಮೇಕೆದಾಟು ಯೋಜನೆಯನ್ನು ಮಾಡುತ್ತದೆ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ಡಿ.ಕೆ. ಶಿವಕುಮಾರ್​ಗೆ ಎಲ್ಲಾ ರೀತಿಯ ದೌರ್ಬ್ಯಲ್ಯಗಳಿದ್ದಾವೆ. ಅವರ ಹೇಳಿಕೆ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ರಾಮನಗರದಲ್ಲಿ ಕೆಲಸ ಮಾಡಿ ತೋರಿಸಿ. ಕೆಲಸದಿಂದ ಮಾಡಿ ತೋರಿಸಬೇಕು. ನಾನು ಬಹಳ ಕಡಿಮೆ ಸಮಯದಲ್ಲಿ ಮಾತ್ರ ಅಧಿಕಾರದಲ್ಲಿದ್ದೇನೆ. ಇವರು ಬಹಳ ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಆದರೆ 2013 ರಿಂದ 2018 ರವರೆಗೆ ಕಾಂಗ್ರೆಸ್ ಕೈಯ್ಯಲ್ಲಿ ಡಿಪಿಆರ್ ಮಾಡುವುದಕ್ಕೆ ಆಗಿಲ್ಲ. ಈ ಮಾತಿಗೆ ಈಗಲೂ ನಾನು ಬದ್ಧ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆ ಮಾರ್ಗ ಬದಲಾವಣೆ ವಿಚಾರ

ಅವರು ಏನಾದರು ಮಾಡಿಕೊಳ್ಳಲಿ, ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಕಾಂಗ್ರೆಸ್ ಒಂದು ದಿನ ಮಾತ್ರ ಪಾದಯಾತ್ರೆ ಮಾಡುವುದಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇರುವುದು ನನ್ನ ಕ್ಷೇತ್ರದಲ್ಲಿ. ನಮ್ಮ ಕ್ಷೇತ್ರದಲ್ಲಿ ಪಾದಯಾತ್ರೆ ಬಂದರೆ ನಮಗೂ ಸಂತೋಷ, ಸ್ವಾಗತಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

 ಹೆಚ್.ಡಿ.ರೇವಣ್ಣ ಆರೋಪಕ್ಕೆ ತಿರುಗೇಟು

ಒಬ್ಬೊಬ್ಬರಿಗೆ ಒಂದೊಂದು ನಿಯಮ ಮಾಡುವುದಕ್ಕೆ ಸಾಧ್ಯವಿಲ್ಲ. ನೇರವಾಗಿ ವಿವಿಗೆ ಪತ್ರ ಬರೆದಿದ್ದು ನಿಯಮ ಮೀರಿ ಮಾಡಿದ್ದಾರೆ. ಹೆಚ್​.ಡಿ ರೇವಣ್ಣ ಕೇಳುತ್ತಿರುವ ಕೋರ್ಸ್‌ಗಳನ್ನು ನಾವು ಕೊಡುತ್ತಿಲ್ಲ. ರಾಜ್ಯದ ಯಾವುದೇ ಕಾಲೇಜುಗಳಿಗೆ ಈ ಕೋರ್ಸ್‌ಗಳನ್ನು ಕೊಡುತ್ತಿಲ್ಲ. ಮೂಲಸೌಕರ್ಯವಿದ್ದರೆ ಖಾಸಗಿ ಕಾಲೇಜುಗಳಲ್ಲಿ ಅವಕಾಶವಿದೆ. ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಏನು ಬೇಕಾದರೂ ಮಾತನಾಡಲಿ. ಅವರ ಎಲ್ಲ ಹೇಳಿಕೆಗಳಿಗೂ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣದ ಬಗ್ಗೆ ರೇವಣ್ಣಗೆ ಗೊತ್ತಿದೆಯೋ ಇಲ್ವೋ, ಆದರೆ ಒಬ್ಬರಿಗೆ 1 ಕೋರ್ಸ್ ಅಂತ ಕೊಡುತ್ತಾ ಕೂರುವುದಕ್ಕೆ ಆಗಲ್ಲ ಎಂದು ಹೆಚ್.ಡಿ.ರೇವಣ್ಣ ಆರೋಪಕ್ಕೆ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದ್ದಾರೆ.

60 ಸಾವಿರಕ್ಕಿಂತ ಹೆಚ್ಚಿನ ಅಡ್ಮಿಷನ್ ಸರ್ಕಾರಿ ಕಾಲೇಜುಗಳಲ್ಲಿಯೇ ಆಗಿದೆ. ನಾವು ಸರ್ಕಾರಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸುವ ಸಲುವಾಗ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಹೊಳೆ ನರಸಿಪುರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಮಾಸ್ಟರ್ಸ್ ಪುಡ್ ಆ್ಯಂಡ್ ಸೈನ್ಸ್ ಈಗಾಗಲೇ ಮಹಾರಾಣಿ ಕಾಲೇಜಿನಲ್ಲಿದೆ. ಯಾವುದೇ ಹೊಸ ಕೋರ್ಸ್ ಪ್ರಾರಂಭ ಮಾಡುವುದಕ್ಕೆ ಎರಡು ವರ್ಷದಿಂದ ನಾವು ಮುಂದಾಗಿಲ್ಲ. 600 ಕೋಟಿಯಷ್ಟು ರೂ. ಬೇರೆ ಬೇರೆ ಕಾಲೇಜುಗಳಿಗೆ ಅನುದಾನ ನೀಡಬೇಕಿದೆ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದಾರೆ.

ಹೆಚ್​ಡಿಕೆ ನೀಡಿದ್ದನ್ನು ಸಚಿವ ಅಶ್ವತ್ಥ್ ನಾರಾಯಣ ರದ್ದುಮಾಡಿದ್ದಾರೆ ಎಂಬ ಆರೋಪ

ಹೊಳೆನರಸೀಪುರ ಕ್ಷೇತ್ರ ವ್ಯಾಪ್ತಿಯಲ್ಲಿ 8 ಪದವಿ ಕಾಲೇಜುಗಳಿವೆ. 430 ಕಾಲೇಜುಗಳ ಪೈಕಿ 8 ಪದವಿ ಕಾಲೇಜು ಒಂದೇ ಕ್ಷೇತ್ರದಲ್ಲಿವೆ. 6 ಪಿಜಿ ಕಾಲೇಜುಗಳು ಕೂಡ ಹೊಳೆನರಸೀಪುರದಲ್ಲಿಯೇ ಇವೆ. 3 ಪಾಲಿಟೆಕ್ನಿಕ್, ಒಂದು ಇಂಜಿನಿಯರಿಂಗ್ ಕಾಲೇಜು ಕೂಡ ಇದೆ. 8 ಪದವಿ ಕಾಲೇಜುಗಳಿಗೆ 65.40 ಕೋಟಿ ರೂ. ಅನುದಾನ ನೀಡಿದ್ದೇವೆ. ಪಾಲಿಟೆಕ್ನಿಕ್ ಕಾಲೇಜಿಗೆ 84 ಕೋಟಿ ಅನುದಾನವನ್ನು ನೀಡಿದ್ದೇವೆ. ಹೊಳೆನರಸೀಪುರ ಕ್ಷೇತ್ರವೊಂದಕ್ಕೆ ಶೇಕಡಾ 5ರಷ್ಟು ನೀಡಲಾಗಿದೆ. ಶೇ. 5ರಷ್ಟು ಒಂದೇ ಕ್ಷೇತ್ರಕ್ಕೆ ನೀಡಲಾಗಿದೆ. ಇಷ್ಟೆಲ್ಲಾ ಇದ್ದರೂ ಯಾವುದೂ ನೋಡದೆ ನಾವು ಸ್ಪಂದಿಸುತ್ತಿದ್ದೇವೆ. ಹೊಳೆನರಸೀಪುರ ಕ್ಷೇತ್ರಕ್ಕೆ ಎಲ್ಲ ರೀತಿಯಲ್ಲೂ ಸ್ಪಂದಿಸುತ್ತಿದ್ದೇವೆ ಎಂದು ಬೆಂಗಳೂರಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ನೈಟ್ ಕರ್ಫ್ಯೂ ಅವಧಿ ಕಡಿತ ಮಾಡುವಂತೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣಗೆ ಮನವಿ ಸಲ್ಲಿಕೆ

ನೈಟ್ ಕರ್ಫ್ಯೂ ಅವಧಿ ಕಡಿತ ಮಾಡುವಂತೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಪದಾಧಿಕಾರಿಗಳು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಮನವಿ ಮಾಡಿದ್ದಾರೆ. ವೀಕೆಂಡ್ ಕರ್ಫ್ಯೂ ರದ್ದುಗೊಳಿಸುವಂತೆಯೂ ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಶಾಸಕರಾಗಿ ಡಿಕೆಶಿ, ಸಂಸದರಾಗಿ ಡಿಕೆ ಸುರೇಶ್ ಏನು ಕೆಲಸ ಮಾಡಿದ್ದಾರೆ: ಸಚಿವ ಅಶ್ವತ್ಥ ನಾರಾಯಣ ಪ್ರಶ್ನೆ

ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಭಾವನೆ, ಧ್ವನಿಗೆ ಶಕ್ತಿಯಾದ ವಾಹಿನಿ ಟಿವಿ 9: ಸಚಿವ ಅಶ್ವತ್ಥ ನಾರಾಯಣ್

Published On - 5:20 pm, Tue, 18 January 22