IAS vs IPS: ಡಿ. ರೂಪಾ ಪ್ರತಿದೂರು, ಇನ್ನೂ ಸಾಕಷ್ಟು ದಾಖಲೆಗಳು ಸಲ್ಲಿಸುವೆ: ಮುಖ್ಯ ಕಾರ್ಯದರ್ಶಿ ಜೊತೆ 35 ನಿಮಿಷ ಚರ್ಚೆ

| Updated By: ಆಯೇಷಾ ಬಾನು

Updated on: Feb 20, 2023 | 5:38 PM

ಡಿ.ರೂಪಾ ಕೂಡ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದಾರೆ. ಸುಮಾರು 35 ನಿಮಿಷಗಳ ಕಾಲ ಚರ್ಚೆ ನಡೆದಿ ದಾಖಲೆ ಸಮೇತ ದೂರು ನೀಡಿದ್ದಾರೆ.

ಬೆಂಗಳೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರಿಗೆ ದೂರು ನೀಡಿದ ಬೆನ್ನಲ್ಲೇ ಐಪಿಸಿ ಅಧಿಕಾರಿ ರೂಪಾ ಕೂಡ ಪ್ರತಿದೂರು ದಾಖಲಿಸಿದ್ದಾರೆ. ವಿಧಾನಸೌಧದಲ್ಲಿರುವ ಸಿಎಸ್​ ಕಚೇರಿಯಲ್ಲಿ ವಂದಿತಾ ಶರ್ಮಾರನ್ನು ಭೇಟಿಯಾದ ಡಿ.ರೂಪಾ, ರೋಹಿಣಿ ಸಿಂಧೂರಿ ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದಾರೆ. ಹಾಗೂ ಸುಮಾರು 35 ನಿಮಿಷ ಸಿಎಸ್​ ಜೊತೆ ಚರ್ಚಿಸಿ ವಾಪಸ್​ ಆಗಿದ್ದಾರೆ. ಈ ವೇಳೆ ಅವರು ರೋಹಿಣಿ ಸಿಂಧೂರಿ ವಿರುದ್ಧ ಇನ್ನೂ ಸಾಕಷ್ಟು ದಾಖಲೆಗಳು ಇವೆ. ಎಲ್ಲಾ ದಾಖಲೆಗಳನ್ನು ನಿಮಗೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಡಿ. ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವೆ ನಡೆಯುತ್ತಿರುವ ಜಗಳ ತಾರಕಕ್ಕೇರುತ್ತಿದೆ. ಇಂದು ಬೆಳಗ್ಗೆ ರೋಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿ 15 ನಿಮಿಷಗಳ ಕಾಲ ಚರ್ಚೆ ನಡೆಸಿ ಮೂರು ಪುಟಗಳ ದೂರು ನೀಡಿದ್ದರು. ಇದರ ಬೆನ್ಲಲ್ಲೇ ಡಿ.ರೂಪಾ ಕೂಡ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದಾರೆ. ಸುಮಾರು 35 ನಿಮಿಷಗಳ ಕಾಲ ಚರ್ಚೆ ನಡೆದಿ ದಾಖಲೆ ಸಮೇತ ದೂರು ನೀಡಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಸಿಎಸ್​​-ಡಿಐಜಿಗೆ 3 ಪುಟಗಳ ದೂರು ಸಲ್ಲಿಸಿ, 15 ನಿಮಿಷ ಮಾತುಕತೆ ನಡೆಸಿದ ರೋಹಿಣಿ ಸಿಂಧೂರಿ ಹೇಳಿದ್ದೇನು?

ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ರೂಪಾ, ಇದು ಬಿಟ್ಟು ನನ್ನ ಬಳಿ ಸಾಕಷ್ಟು ದಾಖಲೆಗಳಿವೆ ನಿಮಗೆ ಒದಗಿಸುತ್ತೇನೆ. ಐಎಎಸ್‌ ರೋಹಿಣಿ ಸಿಂಧೂರಿಯಿಂದ ನಾನು ಒಬ್ಬಳೇ ನೊಂದಿಲ್ಲ. ನನ್ನ ರೀತಿಯೇ ಸಾಕಷ್ಟು ಮಹಿಳಾ ಅಧಿಕಾರಿಗಳು ನೊಂದಿದ್ದಾರೆ. ರೋಹಿಣಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಿಎಸ್‌ಗೆ ಒತ್ತಾಯಿಸಿದ್ದೇನೆ. ಇಬ್ಬರ ದೂರಿನ ಬಗ್ಗೆ ತನಿಖೆ ನಡೆಸುತ್ತೇನೆಂದು ಸಿಎಸ್‌ ಭರವಸೆ ನೀಡಿದ್ದಾರೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:29 pm, Mon, 20 February 23