ವಿಧಾನಸೌಧದಲ್ಲಿ ಸಿಎಸ್​​-ಡಿಐಜಿಗೆ 3 ಪುಟಗಳ ದೂರು ಸಲ್ಲಿಸಿ, 15 ನಿಮಿಷ ಮಾತುಕತೆ ನಡೆಸಿದ ರೋಹಿಣಿ ಸಿಂಧೂರಿ ಹೇಳಿದ್ದೇನು?

ರೋಹಿಣಿ ಸಿಂಧೂರಿ 15 ನಿಮಿಷಗಳ ಕಾಲ ಸಿಎಸ್​ ವಂದಿತಾ ಶರ್ಮಾ ಜೊತೆ ಮಾತುಕತೆ ನಡೆಸಿದ್ದಾರೆ. ಈ ಹಿಂದಿನಿಂದಲೂ ರೂಪಾ ನನ್ನ ಟಾರ್ಗೆಟ್​ ಮಾಡ್ತಾ ಬಂದಿದ್ದಾರೆ. ಡಿ.ರೂಪಾ ವೈಯಕ್ತಿಕ ವಿಚಾರವಾಗಿ ತೇಜೋವಧೆ ಮಾಡುತ್ತಿದ್ದಾರೆ.

ವಿಧಾನಸೌಧದಲ್ಲಿ ಸಿಎಸ್​​-ಡಿಐಜಿಗೆ 3 ಪುಟಗಳ ದೂರು ಸಲ್ಲಿಸಿ, 15 ನಿಮಿಷ ಮಾತುಕತೆ ನಡೆಸಿದ ರೋಹಿಣಿ ಸಿಂಧೂರಿ ಹೇಳಿದ್ದೇನು?
ರೋಹಿಣಿ ಸಿಂಧೂರಿ, ಐಎಎಸ್
Follow us
TV9 Web
| Updated By: ಆಯೇಷಾ ಬಾನು

Updated on: Feb 20, 2023 | 3:32 PM

ಬೆಂಗಳೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ಮತ್ತು ಐಪಿಎಸ್​ ಅಧಿಕಾರಿ ಡಿ.ರೂಪಾಗೆ (D Roopa) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೋಟಿಸ್ ನೀಡುವಂತೆ ಸೂಚಿಸಿದ ಬೆನ್ನಲ್ಲೇ ರೋಹಿಣಿ ಸಿಂಧೂರಿ ಸಿಎಸ್​ ವಂದಿತಾ ಶರ್ಮಾರನ್ನು ಭೇಟಿಯಾಗಿ 3 ಪುಟಗಳ ದೂರು ಸಲ್ಲಿಸಿದ್ದಾರೆ. ವಿಧಾನಸೌಧದ ಸಿಎಸ್​ ಕಚೇರಿಯಲ್ಲಿ ಭೇಟಿಯಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ಡಿಜಿ&ಐಜಿಪಿ ಪ್ರವೀಣ್ ಸೂದ್​ ನೇತೃತ್ವದಲ್ಲಿ ಸಮಾಲೋಚನೆ ನಡೆಸಿ ಮಾತುಕತೆ ನಂತರ ಡಿ.ರೂಪಾ ವಿರುದ್ಧ ಸಿಎಸ್​ಗೆ ದೂರು ಸಲ್ಲಿಸಿದ್ದಾರೆ.

15 ನಿಮಿಷ ಸಿಎಸ್​ ವಂದಿತಾ ಶರ್ಮಾ ಜತೆ ಸಿಂಧೂರಿ ಮಾತುಕತೆ

ಇನ್ನು ರೋಹಿಣಿ ಸಿಂಧೂರಿ 15 ನಿಮಿಷಗಳ ಕಾಲ ಸಿಎಸ್​ ವಂದಿತಾ ಶರ್ಮಾ ಜೊತೆ ಮಾತುಕತೆ ನಡೆಸಿದ್ದಾರೆ. ಈ ಹಿಂದಿನಿಂದಲೂ ರೂಪಾ ನನ್ನ ಟಾರ್ಗೆಟ್​ ಮಾಡ್ತಾ ಬಂದಿದ್ದಾರೆ. ಡಿ.ರೂಪಾ ವೈಯಕ್ತಿಕ ವಿಚಾರವಾಗಿ ತೇಜೋವಧೆ ಮಾಡುತ್ತಿದ್ದಾರೆ. ವೈಯಕ್ತಿಕ ಕಾರಣದಿಂದ ನನ್ನ ಮೇಲೆ ಟಾರ್ಗೆಟ್​ ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬಕ್ಕೆ ಸಮಸ್ಯೆ ಆಗ್ತಿದೆ ಎಂದು ಸಿಎಸ್​ ವಂದಿತಾ ಶರ್ಮಾ ಮುಂದೆ ಸಿಂಧೂರಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: IAS Vs IPS | ಅಸಲಿಗೆ ನನ್ನ ಪತ್ನಿಯ ವಿಷಯದಲ್ಲಿ ಮಾತಾಡಲು ಡಿ ರೂಪಾ ಯಾರು? ಸುಧೀರ್ ರೆಡ್ಡಿ, ರೋಹಿಣಿ ಸಿಂಧೂರಿ ಪತಿ

ಸರ್ಕಾರಿ ಅಧಿಕಾರಿಗಳು ಮಾಧ್ಯಮದ ಮುಂದೆ ಮಾತನಾಡಬಾರದು -ರೋಹಿಣಿ ಸಿಂಧೂರಿ

ಸಿಎಸ್​ ವಂದಿತಾ ಶರ್ಮಾ ಅವರೊಂದಿಗಿನ ಚರ್ಚೆ ಬಳಿಕ ಮಾತನಾಡಿದ ರೋಹಿಣಿ ಸಿಂಧೂರಿ, ಸರ್ಕಾರಿ ಅಧಿಕಾರಿಗಳು ಮಾಧ್ಯಮದ ಮುಂದೆ ಮಾತನಾಡಬಾರದು ಎಂಬ ನಿಯಮವಿದೆ. ಡಿ.ರೂಪಾ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಡಿ.ರೂಪಾ ಮೌದ್ಗಿಲ್​ಗೂ, ನನಗೂ ಯಾವುದೇ ಸಂಬಂಧವಿಲ್ಲ. ಡಿ.ರೂಪಾ ಆರೋಪಗಳಿಗೆ ನನ್ನ ಪತಿ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ರೂಪಾ ಅವರ ಸರ್ವಿಸ್ ಬೇರೆ, ನಮ್ಮ ಸರ್ವಿಸ್​ ಬೇರೆ. ನನ್ನ ವಿರುದ್ಧ ಮಾತನಾಡಿರುವ ಬಗ್ಗೆ ಸಿಎಸ್​ಗೆ ಮಾಹಿತಿ ನೀಡಿದ್ದೇನೆ. ದೂರಿನ ಬಗ್ಗೆ ಕಾನೂನು ಕ್ರಮ ಆಗಬೇಕೆಂದು ಮನವಿ ಮಾಡಿದ್ದೇನೆ. ನನ್ನ ಖಾಸಗಿ ಜೀವನ, ವೃತ್ತಿ ಬದುಕಿನ ಬಗ್ಗೆ ರೂಪಾ ಮಾತಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಬಗ್ಗೆ ಮಾಹಿತಿ ಇದೆ. IAS ಅಧಿಕಾರಿಗಳಿಗೆ ನಾನು ಮೆಸೇಜ್​ ಮಾಡಿದ್ದೇನೆಂದು ಆರೋಪ ಮಾಡಿದ್ದಾರೆ. ನಾನು ಯಾರಿಗೆ ಫೋಟೋ, ಮೆಸೇಜ್​ ಕಳುಹಿಸಿದ್ದೇನೆಂದು ಹೇಳಲಿ. ಆ IAS ಅಧಿಕಾರಿಗಳ ಹೆಸರು ಬಹಿರಂಗ ಪಡಿಸಲಿ ಎಂದು ಐಪಿಎಸ್​ ಅಧಿಕಾರಿ ಡಿ.ರೂಪಾಗೆ ರೋಹಿಣಿ ಸಿಂಧೂರಿ ಸವಾಲು ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ