AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭೆ ಆವರಣದಲ್ಲಿ ಗ್ರೂಫ್‌ ಫೋಟೋಶೂಟ್; ಡಿಕೆಶಿ, ಹೆಚ್​ಡಿಕೆ ಗೈರು, ಫೋಟೋಗೆ ಪೋಸ್ ​ಕೊಟ್ಟ ಸಿದ್ದು, ಬೊಮ್ಮಾಯಿ

ವಿಧಾನಸಭೆ ಆವರಣದಲ್ಲಿ ಗ್ರೂಫ್‌ ಫೋಟೋಶೂಟ್; ಡಿಕೆಶಿ, ಹೆಚ್​ಡಿಕೆ ಗೈರು, ಫೋಟೋಗೆ ಪೋಸ್ ​ಕೊಟ್ಟ ಸಿದ್ದು, ಬೊಮ್ಮಾಯಿ

Rakesh Nayak Manchi
|

Updated on:Feb 20, 2023 | 7:45 PM

Share

ಫೆಬ್ರವರಿ 10ರಿಂದ ಆರಂಭವಾದ ಕರ್ನಾಟಕ ವಿಧಾನಸಭೆಯ ಬಜೆಟ್​​ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸೌಧದ ಆವರಣದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕರು ಫೋಟೋಗೆ ಪೋಸ್ ಕೊಟ್ಟರು.

ಫೆಬ್ರವರಿ 10ರಿಂದ ಆರಂಭವಾದ ಕರ್ನಾಟಕ ವಿಧಾನಸಭೆಯ ಬಜೆಟ್​​ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸೌಧದ ಆವರಣದಲ್ಲಿ ಶಾಸಕರ ಗ್ರೂಪ್ ಫೋಟೋ (Karnataka MLA’s Group Photoshoot) ಶೂಟ್ ನಡೆಯಿತು. 15ನೇ ವಿಧಾನಸಭೆಯ ಕೊನೇಯ ಅಧಿವೇಶನ ಹಿನ್ನಲೆ ನಡೆದ ಫೋಟೋಶೂಟ್‌ನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಭಾಗಿಯಾಗಿದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಫೋಟೋಶೂಟ್​ಗೆ ಗೈರಾದರು.

ಇದನ್ನೂ ಓದಿ: ಸದನದಲ್ಲೂ ಪ್ರತಿಧ್ವನಿಸಿದ ಮಹಿಳಾ ಐಎಎಸ್‌ vs ಐಪಿಎಸ್‌ ವಾರ್‌; ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ

ಮತ್ತಷ್ಟು ವಿಡಿಯೋ ಸ್ಟೋರಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Feb 20, 2023 07:41 PM