ಬೆಂಗಳೂರು, ಜುಲೈ 30: 40 ವರ್ಷದ ಮಕ್ಕಳ ಹಳೆಯ ಪಾರ್ಕ್ (park) ಒಂದು ಸದ್ಯ ಚರಂಡಿ ನೀರಿನಿಂದ ಗಬ್ಬುನಾರುತ್ತಿದೆ. ಗಾಂಧಿ ಭವನ್ ಎದುರಿಗೆ ಇರುವ ಶಿವಾನಂದ್ ಪಾರ್ಕ್ ಇದೀಗ ಸಂಪೂರ್ಣ ಹಾಳಾಗಿದ್ದು, ಮಕ್ಕಳಿಗೆ ಆಟವಾಡಲು ಪಾರ್ಕ್ ಇಲ್ಲದೇ ಬೇಸತ್ತಿದ್ದಾರೆ. ಈ ಕುರಿತಾಗಿ ಸ್ಥಳೀಯ ಎಂಎಲ್ಎ ರಿಸ್ವಾನ್ ಹರ್ಷದ್ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಪಾರ್ಕ್ ಸರಿಮಾಡಿ ಕೊಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಾನಂದ್ ಪಾರ್ಕ್ನಲ್ಲಿ ಸಾರಾಯಿ ಬಾಟೆಲ್, ಬಿಯರ್ ಬಾಟೆಲ್, ಕಸ ಎಲ್ಲವನ್ನ ಎಸೆದಿದ್ದು, ಗಬ್ಬುನಾರುತ್ತಿದೆ. ಅಕ್ಕಪಕ್ಕದ ಸ್ಥಳೀಯರಿಗೆ ಇನ್ನಿಲ್ಲದ ಸಮಸ್ಯೆ ಕೂಡ ಉಂಟಾಗಿದೆ. ಇಷ್ಟೇಲ್ಲಾ ಅದ್ವಾನ ಹಿಡಿದಿರುವ ಮಕ್ಕಳ ಪಾರ್ಕ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಇದನ್ನೂ ಓದಿ: ದಾವಣಗೆರೆ: ಮದ್ಯವರ್ಜನ ಶಿಬಿರದಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಭಜನೆ
ಪಾರ್ಕ್ನಲ್ಲಿ ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರು ಬಂಡಿ ಎಲ್ಲವೂ ಇತ್ತು. ಆದರೆ ಪಾರ್ಕ್ ಹೈಟೆಕ್ ಮಾಡುತ್ತೇವೆ ಅಂತ ಹೇಳಿ ಅಲ್ಲಿದ್ದ ಎಲ್ಲಾ ಆಟದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮೂರು ವರ್ಷವಾದರೂ ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್, ಕಾರಿಗೆ ಡಿಕ್ಕಿಯಾಗಿ ಆಸ್ಪತ್ರೆ ಸೇರಿದ ಸವಾರರು
ಇನ್ನೂ ಇದೇ ಪಾರ್ಕ್ನ 300 ಮೀಟರ್ಸ್ ಅಂತರದಲ್ಲೇ ಸಿಎಂ ಸಿದ್ಧರಾಮಯ್ಯ ಮನೆ ಇದೆ. ಪ್ರತಿದಿನ ಇದೇ ರಸ್ತೆಯಲ್ಲಿ ಎಂಎಲ್ಎ ಹಾಗೂ ಎಂಪಿಗಳು ಓಡಾಡುತ್ತಾರೆ. ಈ ಪಾರ್ಕ್ ಎದುರಿಗೆ ಮಧು ಬಂಗಾರಪ್ಪ ಅವರ ಆಫೀಸ್ ಕೂಡ ಇದೆ. ಪಾರ್ಕ್ನ ಅವ್ಯವಸ್ಥೆ ಕಂಡರೂ ಕಾಣದಂತಿರುವುದು ಏಕೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.