ದಾವಣಗೆರೆ: ಮದ್ಯವರ್ಜನ ಶಿಬಿರದಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಭಜನೆ
ದಾವಣಗೆರೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಿರುವ 1691ನೇ ಮದ್ಯವರ್ಜನ ಶಿಬಿರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಭಜನೆ ಮಾಡಿದರು.
ದಾವಣಗೆರೆ, ಜುಲೈ 30: ಮದ್ಯವರ್ಜನ ಶಿಬಿರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಎಲ್ಲರೊಂದಿಗೆ ಸೇರಿ ಭಜನೆ ಮಾಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜಗಳೂರು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಿರುವ 1691ನೇ ಮದ್ಯವರ್ಜನ ಶಿಬಿರದಲ್ಲಿ ಶಾಸಕರು ಭಜನೆ ಮಾಡಿದರು. ಕಾರ್ಯಕ್ರಮ ಉದ್ಘಾಟನೆ ಬಳಿಕ ಕೆಲ ಹೊತ್ತು ಜಾನಪದ ಕಲಾವಿದರ ಜೊತೆ ಭಜನೆ ಮಾಡಿದರು.
ಕೆಲ ದಿನಗಳ ಹಿಂದೆ ಇದೇ ಶಿಬಿರದಲ್ಲಿ ಮದ್ಯವೆಸನಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಮದ್ಯಬಿಡುವಂತೆ ಮನವಿ ಮಾಡಿದ್ದರು. ನಾನು ಸಹ 40 ವರ್ಷಗಳ ಕಾಲ ಮದ್ಯದ ದಾಸನಾಗಿದ್ದೆ. ಆದರೆ ಅದೆನ್ನೆಲ್ಲಾ ಬಿಟ್ಟು ಈಗ ನಾಲ್ಕು ವರ್ಷಗಳೇ ಕಳೆದಿವೆ. ನನ್ನ ಇಬ್ಬರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಇಂದು ನಾನು ಜನರ ಆಶಿರ್ವಾದದಿಂದ ಶಾಸಕನಾಗಿದ್ದೇನೆ. ದಯಮಾಡಿ ಮದ್ಯ ಸೇವನೆ ಮಾಡಬೇಡಿ ಎಂದು ಮನವಿ ಮಾಡಿದ್ದರು.
Published On - 2:18 pm, Sun, 30 July 23