Nisha Narasappa: ನಿಶಾ ನರಸಪ್ಪ ವಿರುದ್ಧ ದಾಖಲಾಗಿದ್ದು 70 ದೂರು; ಅದರಲ್ಲಿ ಅಸಲಿ ಎಷ್ಟು? ನಕಲಿ ಎಷ್ಟು?
ತಮ್ಮ ವಿರುದ್ಧ ಹೇಗೆ ಷಡ್ಯಂತ್ರ ನಡೆದಿದೆ ಎಂಬುದನ್ನು ನಿಶಾ ನರಸಪ್ಪ ತೆರೆದಿಟ್ಟಿದ್ದಾರೆ. ತಮ್ಮ ಜೊತೆ ನಡೆದಿರುವ ಹಣಕಾಸು ವಿವರಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
‘ಎನ್ಎನ್ ಪ್ರೊಡಕ್ಷನ್’ (NN Productions) ಎಂಬ ಕಂಪನಿ ಮೂಲಕ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿರುವ ನಿಶಾ ನರಸಪ್ಪ ಅವರು ಹಲವರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲು ಮಾಡಲಾಗಿತ್ತು. ಒಟ್ಟು 70 ದೂರುಗಳು ಅವರ ವಿರುದ್ಧ ದಾಖಲಾಗಿದ್ದವು. ಈಗ ಜಾಮೀನು ಪಡೆದು ಹೊರಬಂದಿರುವ ನಿಶಾ ನರಸಪ್ಪ (Nisha Narasappa) ಅವರು ಮಾಧ್ಯಮಗಳ ಎದುರಿನಲ್ಲಿ ಕೆಲವು ಅಚ್ಚರಿಯ ವಿಚಾರ ತೆರೆದಿಟ್ಟಿದ್ದಾರೆ. 70 ದೂರುಗಳಲ್ಲಿ ಕೆಲವು ಸುಳ್ಳು ಕೇಸ್ಗಳು (Nisha Narasappa Case) ಎಂದು ಅವರು ಹೇಳಿದ್ದಾರೆ. ಈ ರೀತಿ ಆಗಲು ಕಾರಣ ಏನು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ತಮ್ಮ ವಿರುದ್ಧ ಹೇಗೆ ಷಡ್ಯಂತ್ರ ನಡೆದಿದೆ ಎಂಬುದನ್ನು ನಿಶಾ ತೆರೆದಿಟ್ಟಿದ್ದಾರೆ. ತಮ್ಮ ಜೊತೆ ನಡೆದಿರುವ ಹಣಕಾಸು ವಿವರಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

