ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ, ಚಾರ್ಜ್ ಎಷ್ಟು?

ನಗರದಲ್ಲಿರೋ ಪ್ರಮುಖ ಮೆಟ್ರೋ ನಿಲ್ದಾಣಗಳ ಬಳಿ ಆಟೋ ಸ್ಟಾಂಡ್ ನಿರ್ಮಿಸಿ ಕೊಡೋದಕ್ಕೆ ಆಟೋ ಚಾಲಕರ ಸಾರಿಗೆ ಸಚಿವರ ಬಳಿ ಮನವಿ ಸಲ್ಲಿಸಿದ್ದಾರೆ.

ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ, ಚಾರ್ಜ್ ಎಷ್ಟು?
ಸಾಂದರ್ಭಿಕ ಚಿತ್ರ
Follow us
Kiran Surya
| Updated By: ಆಯೇಷಾ ಬಾನು

Updated on:Jul 31, 2023 | 7:11 AM

ಬೆಂಗಳೂರು, ಜುಲೈ 31: ಕಳೆದ ಕೆಲ ವರ್ಷಗಳಿಂದ ನಗರದಲ್ಲಿ ಕ್ಯಾಬ್, ಟ್ಯಾಕ್ಸಿಗಳ ಸಂಖ್ಯೆ ಲೆಕ್ಕಕ್ಕೂ ಸಿಗದಂತೆ ಹೆಚ್ಚಿದೆ. ಇದ್ರಿಂದಾಗಿ ಆಟೋ ಓಡಿಸುತ್ತಿರುವವರಿಗೆ ಆರ್ಥಿಕ ಹೊಡೆತ ಬಿದ್ದಿದೆ. ಎಷ್ಟೇ ಸರ್ಕಸ್ ಮಾಡಿದ್ರೂ ಆದಾಯ ಮಾತ್ರ ಹೆಚ್ಚಾಗ್ತಿಲ್ಲ ಅಂತ ಕೊರಗುತ್ತಿದ್ದ ಆಟೋ ಚಾಲಕರ(Auto) ನೋವು ಈಗ ಸರ್ಕಾರದ ಕಿವಿ ಮುಟ್ಟಿದೆ. ಆಟೋ ಚಾಲಕರ ನೋವಿಗೆ ಸ್ಪಂದಿಸೋ ನಿಟ್ಟಿನಲ್ಲಿ ಸರ್ಕಾರ(Karnataka Government) ಹೊಸ ಐಡಿಯಾ ರೂಪಿಸ್ತಿದೆ.

ಮೆಟ್ರೋ ನಿಲ್ದಾಣಗಳ ಬಳಿ ತಲೆಯೆತ್ತಲಿವೆ ಆಟೋ ನಿಲ್ದಾಣಗಳು

ಐಟಿ ಕ್ಯಾಪಿಟಲ್ ಎಂದೇ ಖ್ಯಾತಿ ಹೊಂದಿರೋ ನಮ್ಮ ನಗರದಲ್ಲಿ ಬರೊಬ್ಬರಿ 2 ಲಕ್ಷ 10 ಸಾವಿರಕ್ಕೂ ಅಧಿಕ ಆಟೋಗಳಿವೆ. ಇವುಗಳನ್ನು ಬಳಸುತ್ತಿದ್ದ ಜನರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ನಗರದಲ್ಲಿರೋ 80 ಸಾವಿರಕ್ಕೂ ಅಧಿಕ ಓಲಾ ಹಾಗು ಊಬರ್ ಕ್ಯಾಬ್‌ಗಳು ಆಟೋ ಬಳಸುತ್ತಿದ್ದ ಗ್ರಾಹಕರನ್ನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದ್ರಿಂದ ವ್ಯಾಪಾರದಲ್ಲಿ ನಷ್ಟ ಎದುರಿಸುತ್ತಿರೋ ಆಟೋ ಚಾಲಕರ ಮನವಿ ಈಗ ಸಾರಿಗೆ ಸಚಿವರ ಗಮನಕ್ಕೆ ತರಲಾಗಿದೆ, ನಗರದಲ್ಲಿರೋ ಪ್ರಮುಖ ಮೆಟ್ರೋ ನಿಲ್ದಾಣಗಳ ಬಳಿ ಆಟೋ ಸ್ಟಾಂಡ್ ನಿರ್ಮಿಸಿ ಕೊಡೋದಕ್ಕೆ ಮನವಿಯನ್ನು ಅವರ ಮುಂದಿಡಲಾಗಿದೆ.

ಇದನ್ನೂ ಓದಿ: ಜೂನ್ ತಿಂಗಳ ವಿದ್ಯುತ್ ಬಿಲ್​ನಲ್ಲಿ ಗೊಂದಲ: ಕ್ಯಾಶ್​ಬ್ಯಾಕ್ ಮಾಡಲಾಗುವುದು ಎಂದ ಕೆ.ಜೆ.ಜಾರ್ಜ್

ದೇಶದಲ್ಲೇ 2ನೇ ಅತಿ ಹೆಚ್ಚಿನ ಮೆಟ್ರೋ ರೈಲು ಸಂಪರ್ಕ ಇರೋದು ನಮ್ಮ ನಗರದಲ್ಲಿ. ಹೀಗಿರೋವಾಗ ಇದರ ಸದುಪಯೋಗ ಆಟೋ ಚಾಲಕರಿಗೆ ಲಭಿಸುವಂತಾಗಬೇಕು ಅನ್ನೋದು ಸಾರಿಗೆ ಸಚಿವರ ಪ್ಲಾನ್ ಆಗಿತ್ತು. ಇದೇ ಕಾರಣದಿಂದ ನಗರದಲ್ಲಿರೋ ಬಹುತೇಕ ಎಲ್ಲ ಪ್ರಮುಖ ಮೆಟ್ರೋ ನಿಲ್ದಾಣಗಳ ಬಳಿ ಆಟೋ ಸ್ಟಾಂಡ್ ನಿರ್ಮಿಸಿಕೊಡಲು ಚಿಂತನೆ ನಡೆಸಲಾಗ್ತಿದೆ. ಸರ್ಕಾರ ಅಥವಾ ಬಿಬಿಎಂಪಿ ವತಿಯಿಂದ ಸುಮಾರು 10ರಿಂದ 20 ಆಟೋಗಳನ್ನು ನಿಲ್ಲಿಸುವಷ್ಟು ಜಾಗದಲ್ಲಿ ಸ್ಟಾಂಡ್ ನಿರ್ಮಿಸಲು ಯೋಜನೆ ರೂಪಿಸಲಾಗೋ ಮುನ್ಸೂಚನೆ ಈಗಾಗಲೇ ಲಭಿಸಿದೆ. ಇನ್ನು ಮೊದಲ ಎರಡು ಕಿಲೋಮೀಟರ್‌ಗಳಿಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ. ಜೊತೆಗೆ 10 ರೂ. ಇತರೆ ಚಾರ್ಜಸ್​ಗೆ ಎಂದು ದರ ನಿಗದಿಪಡಿಸಲು ಚಿಂತನೆ ನಡೆದಿದೆ.

ಕಳೆದ 8 -10 ವರ್ಷಗಳ ಹಿಂದೆ ಪ್ರೀಪೇಯ್ಡ್ ಆಟೋ ಸ್ಟಾಂಡ್‌ಗಳು ನಗರದಲ್ಲಿ ತಲೆಯೆತ್ತಿತ್ತು. ಎಲ್ಲಿಂದ ಎಲ್ಲಿಗೇ ಹೋಗಬೇಕಿದ್ರೂ ಮೊದಲೇ ನಿಗದಿಪಡಿಸಿರೋ ಮೊತ್ತವನ್ನು ನೀಡಿ ಪ್ರಯಾಣ ಬೆಳೆಸಬಹುದಾಗಿತ್ತು. ಆಟೋ ಚಾಲಕರು ವಸೂಲಿ ಮಾಡ್ತಾರೆ ಅನ್ನೋ ಆರೋಪ ತಳ್ಳಿಹಾಕಲು ಈ ಯೋಜನೆಯನ್ನು ಚಾಲ್ತಿಗೆ ತರಲಾಗಿತ್ತು. ಆದ್ರೆ, ಇವುಗಳ ಸದ್ಬಳಕೆ ಆಗದೇ ಇವು ಮೂಲೆಗುಂಪಾಗಿದ್ದು ಈ ಪದ್ದತಿಯನ್ನು ವಾಪಸ್ ತರಲು ಚಿಂತನೆ ನಡೆಸಲಾಗಿದೆ. ಪ್ರಮುಖ ಮೆಟ್ರೋ ನಿಲ್ದಾಣಗಳ ಬಳಿ ಪ್ರಿಪೇಯ್ಡ್ ಹಾಗೂ ಸಾಮಾನ್ಯ ಆಟೋ ಸ್ಟಾಂಡ್‌ಗಳನ್ನು ನಿರ್ಮಿಸುವುದರಿಂದ ಆಟೋ ಚಾಲಕರಿಗೆ ಎಷ್ಟು ಅನುಕೂಲವಾಗುತ್ತೋ, ಅಷ್ಟೇ ಅನುಕೂಲ ಪ್ರಯಾಣಿಕರಿಗೂ ಆಗುತ್ತೆ ಅನ್ನೋದ್ರಲ್ಲಿ ಸಂಶಯವಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:10 am, Mon, 31 July 23