ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಮೋಸ್ಟ್ ಕಾಂಟ್ರುವರ್ಷಿಯಲ್ ವ್ಯಕ್ತಿ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಗೌಡ ರಾಮನಗರ ಜಿಲ್ಲೆಯ ಮಾಗಡಿ ಮೂಲದವರು. ಪೊಲೀಸರ ವಿಚಾರಣೆ ವೇಳೆ ದರ್ಶನ್ ಗೌಡ ಸಚಿವ ಅಶ್ವತ್ಥ್ ಹೆಸರು ಹೇಳಿದ್ದ. ಸಚಿವರ ಹೆಸರು ಹೇಳಿದ ಬಳಿಕ ಸಿಐಡಿಯವರು ಬಿಟ್ಟುಕಳಿಸಿದ್ದಕ್ಕೆ ಕಾಂಗ್ರೆಸ್ನವರು ಸಚಿವ ಅಶ್ವತ್ಥ್, ಸಹೋದರ ಸತೀಶ್ ವಿರುದ್ಧ ಆರೋಪಿಸಿದ್ದರು. ನಿನ್ನೆ ದರ್ಶನ್‌ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಅಧಿಕೃತವಾಗಿ ಬಂಧಿಸಿದ್ದಾರೆ. ಯಲಹಂಕ ನ್ಯೂಟೌನ್ ಕೇಸ್ ಸಂಬಂಧ ದರ್ಶನ್ ಗೌಡ ಅರೆಸ್ಟ್ ಆಗಿದ್ದು, ಹೊಸದಾಗಿ 3 ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೌಡ, ಹರೀಶ್, ಮೋಹನ್‌ನನ್ನು ಬಂಧಿತರು. ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳ ಬಂಧನ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ; ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್ನಲ್ಲಿ ಚಿಕನ್ ಜೊತೆ ಬಂತು ಮಿಕ್ಸರ್ ಬ್ಲೇಡ್
ನಿನ್ನೆ ವಿಚಾರಣೆಗಾಗಿ ನನ್ನ ಮಗನನ್ನು ಕರೆದೊಯ್ದಿದ್ದರು ಎಂದು ಟಿವಿ 9ಗೆ ಬಂಧಿತ ದರ್ಶನ್‌ಗೌಡ ತಂದೆ ವೆಂಕಟೇಶ್ ಮಾಹಿತಿ ನೀಡಿದರು. ಕುಣಿಗಲ್ ಸಮೀಪ ವಶಕ್ಕೆ ಪಡೆದು ಮಗನನ್ನು ಕರೆದೊಯ್ದಿದ್ರು. ವಿಚಾರಣೆ ನಡೆಯಲಿ, ನನ್ನ ಪುತ್ರ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.
ದರ್ಶನ್‌ಗೌಡ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಹಿರಂಗ
ಅಭ್ಯರ್ಥಿಯ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗಿದ್ದು, ಪ್ರಭಾವಿ ಮಂತ್ರಿಯೊಬ್ಬರ ಹೆಸರು ಬಂದಿದೆ. ಬಿಜೆಪಿ ಮಂತ್ರಿಯೊಬ್ಬರ ತಮ್ಮನಿಗೆ 80 ಲಕ್ಷ ನೀಡಿದ್ದ ಬಗ್ಗೆ ಸಿಐಡಿಗೆ ದರ್ಶನ್‌ಗೌಡ ಮಾಹಿತಿ ನೀಡಿದ್ದ. ಮಾಹಿತಿ ಆಧರಿಸಿ ಮಂತ್ರಿ ತಮ್ಮನನ್ನು CID ವಿಚಾರಣೆಗೆ ಕರೆದಿದೆ. ತಕ್ಷಣ ಸಿಐಡಿ ಅಧಿಕಾರಿಗೆ ಕರೆ ಮಾಡಿದ್ದ ಬಿಜೆಪಿ ಪ್ರಭಾವಿ ಸಚಿವ, ಯಾವುದೇ ಕಾರಣಕ್ಕೂ ನನ್ನ ತಮ್ಮನನ್ನು ವಿಚಾರಣೆ ಮಾಡಬೇಡಿ ಎಂದು ಹೇಳಿದ್ದರು. ವಿಚಾರಣೆ ಮಾಡದೇ BJP ಪ್ರಭಾವಿ ಸಚಿವರನ್ನ ಬಿಟ್ಟು ಕಳಿಸಿ ಎಂದಿದ್ದ. ಸಚಿವರ ಫೋನ್ ಬಳಿಕ ರಾತ್ರೋರಾತ್ರಿ ಬಿಟ್ಟುಕಳುಹಿಸಲಾಗಿತ್ತು. ಅಕ್ರಮವಾಗಿ PSI ಪರೀಕ್ಷೆ ಬರೆದಿದ್ದ ದರ್ಶನ್‌ಗೌಡಗೆ ನೋಟಿಸ್ ನೀಡಿ, OMR ಶೀಟ್‌ನಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಸಿಐಡಿಯಿಂದ ವಿಚಾರಣೆ ಮಾಡಲಾಗಿದೆ. ದರ್ಶನ್‌ಗೌಡ ಸೇರಿ 10 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದು, ವಿಚಾರಣೆ ವೇಳೆ 80 ಲಕ್ಷ ರೂ. ನೀಡಿದ್ದ ಬಗ್ಗೆ ಮಾಹಿತಿ ನೀಡಲಾಗಿದೆ. ಸಚಿವರ ತಮ್ಮನಿಗೆ ಹಣ ನೀಡಿದ್ದಾಗಿ ದರ್ಶನ್ ಗೌಡ ಮಾಹಿತಿ ನೀಡಿದ್ದು, ಪಿಎಸ್‌ಐ ಪರೀಕ್ಷೆಯಲ್ಲಿ 4ನೇ ಯಾಂರ್ಕ ಪಡೆದಿದ್ದ.
ಮಗನನ್ನು ಪಿಎಸ್‌ಐ ಮಾಡಲು ಸಾ ಮಿಲ್ ಅಡ ಇಟ್ರಾ ತಂದೆ ವೆಂಕಟೇಶ್
ದರ್ಶನ್ ಗೌಡ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮರೂರು ಗ್ರಾಮದವರಾಗಿದ್ದು, ಮಾಗಡಿ ಎಂಎಲ್ಎಗೆ ದರ್ಶನ್ ಗೌಡ ತಂದೆ ವೆಂಕಟೇಶ್ ಆಪ್ತರು. ಹೀಗಾಗಿ ಜೆಡಿಎಸ್ನಲ್ಲಿ ತಂದೆ ವೆಂಕಟೇಶ್ ಗುರುತಿಸಿಕೊಂಡಿದ್ದರು. ಆರ್ಥಿಕವಾಗಿ ಸದೃಢರಾಗಿದ್ದಾರೆ. ವೆಂಕಟೇಶ್ ಮಾಜಿ ತಾಲೂಕ ಪಂಚಾಯತ ಸದಸ್ಯರಾಗಿದ್ದು, ಸಾ ಮಿಲ್ ಹೊಂದಿದ್ದಾರೆ. ವೆಂಟಕೇಶ್ನ ಇನ್ನೊಬ್ಬ ಮಗ ಸರ್ವೆ ವಿಭಾಗದಲ್ಲಿ ನೌಕರಿ ಮಾಡುತ್ತಿದ್ದಾರೆ. ವೆಂಕಟೇಶನ ಅಳಿಯ ಉತ್ತರಕರ್ನಾಟಕದಲ್ಲಿ ಎಸಿ ಆಗಿದ್ದಾರೆ. ಸಾಕಷ್ಟು ಪೊಲೀಸರು, ಪರಿಚಯಸ್ಥರ ಭೇಟಿ ಮಾಡಿದ್ದ ದರ್ಶನ, ಸಹೋದರಿಯನ್ನು ಎಸಿಯವರಿಗೆ ಮದುವೆ ಮಾಡಿ ಕೊಟ್ಟಿದ್ದೀರಿ. ನನ್ನ ಪಿಎಸ್‌ಐ ಮಾಡಲ್ವಾ ಎಂದು ತಂದೆ ಜೊತೆ ಮುನಿಸುಕೊಂಡಿದ್ದ. ತಂದೆ ಜತೆ ಮುನಿಸಿಕೊಂಡು 10 ದಿನ ದರ್ಶನಗೌಡ ಮನೆಬಿಟ್ಟಿದ್ದ. ಮಗನ ಪಿಎಸ್‌ಐ ಹಠಕ್ಕೆ 50 ಲಕ್ಷಕ್ಕೆ ಸಾ ಮಿಲ್ ಅಡ ಇಟ್ರಾ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:08 am, Mon, 6 June 22