ದಸರಾ ಕಲಾವಿದರ ಚೆಕ್‌ ಬೌನ್ಸ್‌: ಕಾಂಗ್ರೆಸ್​ಗೆ ಇನ್ನೂ ಬುದ್ಧಿ ಬಂದಿಲ್ಲ ಎಂದ ಬಿಜೆಪಿ​

|

Updated on: Nov 03, 2023 | 3:39 PM

ದಸರಾ ಕಲಾವಿದರಿಂದಲೇ ಕಮಿಷನ್‌ ಕೇಳಿ ರಾಜ್ಯದ ಜನತೆಯಿಂದ ಈಗಾಗಲೇ ಛೀಮಾರಿ ಹಾಕಿಸಿಕೊಂಡಿರುವ ಎಟಿಎಂ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ನಾಡಹಬ್ಬ ದಸರಾದಲ್ಲಿ ನೀಡಿದ ಬಹುಮಾನದ ಚೆಕ್‌ಗಳು ಬೌನ್ಸ್‌ ಆಗಲು ಆರಂಭಿಸಿವೆ ಎಂದರೆ ನಾಡಿಗೆ ಇದಕ್ಕಿಂತ ದೊಡ್ಡ ಅಪಮಾನ ಇನ್ನೇನಿದೆ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿಕಾರಿದೆ.

ದಸರಾ ಕಲಾವಿದರ ಚೆಕ್‌ ಬೌನ್ಸ್‌: ಕಾಂಗ್ರೆಸ್​ಗೆ ಇನ್ನೂ ಬುದ್ಧಿ ಬಂದಿಲ್ಲ ಎಂದ ಬಿಜೆಪಿ​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ನವೆಂಬರ್​​​​ 03: ಲಲಿತಕಲೆ ಹಾಗೂ ಕರಕುಶಲ ಉಪಸಮಿತಿ ಮುಖ್ಯಸ್ಥರ ಎಡವಟ್ಟಿನಿಂದ  ದಸರಾ (Mysuru Dasara) ಕಲಾವಿದರಿಗೆ ನೀಡಿದ ಬಹುಮಾನದ ಚೆಕ್‌ಗಳು ಬೌನ್ಸ್‌ ಆಗಿವೆ. ಇದರಿಂದ ದಸರಾ ಕಲಾವಿದರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಟಿವಿ9 ಕನ್ನಡ ಡಿಜಿಟಲ್​ ವರದಿ ಕೂಡ ಬಿತ್ತರಿಸಿತ್ತು. ಇದನ್ನು ಮರುಟ್ವೀಟ್​ ಮಾಡುವ ಮೂಲಕ ಇದೀಗ ಕಾಂಗ್ರೆಸ್​​ ಸರ್ಕಾರ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.

ದಸರಾ ಕಲಾವಿದರಿಂದಲೇ ಕಮಿಷನ್‌ ಕೇಳಿ ರಾಜ್ಯದ ಜನತೆಯಿಂದ ಈಗಾಗಲೇ ಛೀಮಾರಿ ಹಾಕಿಸಿಕೊಂಡಿರುವ ಎಟಿಎಂ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ನಾಡಹಬ್ಬ ದಸರಾದಲ್ಲಿ ನೀಡಿದ ಬಹುಮಾನದ ಚೆಕ್‌ಗಳು ಬೌನ್ಸ್‌ ಆಗಲು ಆರಂಭಿಸಿವೆ ಎಂದರೆ ನಾಡಿಗೆ ಇದಕ್ಕಿಂತ ದೊಡ್ಡ ಅಪಮಾನ ಇನ್ನೇನಿದೆ ಎಂದು ಹರಿಹಾಯ್ದಿದೆ.

ಬಿಜೆಪಿ ಟ್ವೀಟ್​​

ರಾಜ್ಯ ಕಾಂಗ್ರೆಸ್​ ಸರ್ಕಾರದ ದುರಾಡಳಿತದ ಪರಿಣಾಮ ಬಹುಮಾನ ಪಡೆದವರ ಖಾತೆಯಿಂದಲೇ ಹಣ ಖೋತಾ ಆಗಿದೆ. ಜನರಿಂದಲೇ ದೋಚುವ ಸರ್ಕಾರವಿದು ಎಂಬುದು ನಾಡಹಬ್ಬದಲ್ಲೂ ಸಾಬೀತಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಚಳ್ಳಕೆರೆ ಶಾಸಕ ರಘುಮೂರ್ತಿ ವಿರುದ್ಧ ಬಿಜೆಪಿ ಕಿಡಿ

ತಮ್ಮ ಅಹವಾಲು ನಿವೇದಿಸಿಕೊಳ್ಳಲು ಬಂದ ಸಾರ್ವಜನಿಕರನ್ನು ಎಫ್‌ಐಆರ್‌ ಹಾಕಿಸಿ ಜೈಲಿಗಟ್ಟುವ ದುರಹಂಕಾರವನ್ನು ಚಳ್ಳಕೆರೆ ಶಾಸಕ ರಘುಮೂರ್ತಿ ಮೆರೆದಿದ್ದಾರೆ. ಸುಳ್ಳು ದೂರು ದಾಖಲಿಸಿ ಕಾನೂನು ದುರ್ಬಳಕೆ ಮಾಡಿಕೊಳ್ಳುವ ನಿಮ್ಮ ಶಾಸಕರ ಮೇಲೆ ಕ್ರಮ ಯಾವಾಗ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಅವರೇ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಅಧಿಕಾರಿಗಳ ಎಡವಟ್ಟು: ದಸರಾ ಕಲಾವಿದರಿಗೆ ನೀಡಿದ ಬಹುಮಾನದ ಚೆಕ್ ವಾಪಸ್​​

ಸಿಎಂ ಸಿದ್ದರಾಮಯ್ಯ ಅವರೇ, ಕ್ಷೇತ್ರದ ಮತದಾರರನ್ನು ಈ ರೀತಿ ಕೀಳಾಗಿ ಕಾಣುವ ಶಾಸಕರನ್ನು ಮೊದಲು ನಿಮ್ಮ ಪಕ್ಷದಿಂದ ವಜಾ ಮಾಡಿ. ಇಂತಹ ಸರ್ವಾಧಿಕಾರಿ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಿಡಿಕಾರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.