ನಂದಿಪೂಜೆ ಬಳಿಕವೇ ಜಂಬೂಸವಾರಿಗೆ ಮುನ್ನುಡಿ: ಈ ಪೂಜೆಯ ಹಿಂದಿದೆ ರಾಜರ ಕಾಲದ ಇತಿಹಾಸ

ರಾಜರ ಕಾಲದಲ್ಲಿಯೂ ನಂದಿ ಧ್ವಜ ತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆ ಕರೆದೊಯ್ದು, ಅಂಬಾ ವಿಲಾಸ ಅರಮನೆಯಲ್ಲಿ ಸತ್ಕರಿಸಿ ಬಳಿಕ ತಂಡವನ್ನು ಅರಮನೆಯ ಬಲರಾಮ ದ್ವಾರದ ಬಳಿಗೆ ಕರೆದೊಯ್ಯುತ್ತಾರೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ‌ ನೀಡಲಾಗುತ್ತಿತ್ತು. ಈಗಲೂ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ನಂದಿಪೂಜೆ ಬಳಿಕವೇ ಜಂಬೂಸವಾರಿಗೆ ಮುನ್ನುಡಿ: ಈ ಪೂಜೆಯ ಹಿಂದಿದೆ ರಾಜರ ಕಾಲದ ಇತಿಹಾಸ
ನಂದಿಪೂಜೆ
Follow us
TV9 Web
| Updated By: ಆಯೇಷಾ ಬಾನು

Updated on:Oct 24, 2023 | 3:33 PM

ಮೈಸೂರು, ಅ.24: ಮೈಸೂರು ದಸರಾದ (Mysuru Dasara) ಕೇಂದ್ರ ಬಿಂದು, ಪ್ರಮುಖ ಆಕರ್ಷಣೆ ಅಂದ್ರೆ ಅದು ಜಂಬೂ ಸವಾರಿ (Jamboo Savari). ಇಂದು ವಿಜಯದಶಮಿಯಂದು ಜಂಬೂಸವಾರಿ ನಡೆಯಲಿದೆ. ಆದರೆ ಈ ಜಂಬೂಸವಾರಿಗೂ ಮುನ್ನ ನಂದಿಧ್ವಜಕ್ಕೆ ಪೂಜೆ ನಡೆಯುತ್ತೆ (Nandi Dhwaja Pooje). ನಂದಿಧ್ವಜಕ್ಕೆ ಪೂಜೆ ನಡೆದ ಬಳಿಕವೇ ಮೆರವಣಿಗೆಗೆ ಚಾಲನೆ ನೀಡಲಾಗುತ್ತೆ. ನಂದಿ ಪೂಜೆಗೆ ತನ್ನದೇ ಆದ ಮಹತ್ವ, ಇತಿಹಾಸವಿದೆ. ಸುಮಾರು 33 ಅಡಿ ಎತ್ತರದ, 150 ಕೆಜಿ ತೂಕದ ನಂದಿ ಧ್ವಜವನ್ನು ಎತ್ತಿ ಹೆಜ್ಜೆ ಹಾಕುವುದು ಸುಲಭದ ಮಾತಲ್ಲ. ಬನ್ನಿ ನಂದಿಧ್ವಜ ಪೂಜೆಯ ಇತಿಹಾಸ, ಅದರ ಹಿಂದಿನ ಉದ್ದೇಶ ತಿಳಿಯೋಣ.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ1.46ರಿಂದ 2.48ರ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ್ದಾರೆ. ಸಂಜೆ 4.40ರಿಂದ 5 ಗಂಟೆ ನಡುವೆ ಸಲ್ಲುವ ಶುಭ ಲಗ್ನದಲ್ಲಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ನಂದಿ ಪೂಜೆ ಇತಿಹಾಸ

ರಾಜ ಮಹಾರಾಜರ ಕಾಲದಿಂದಲೂ ಈ ನಂದಿ ಧ್ವಜ ಕುಣಿತವಿದೆ. ಮೈಸೂರಿನಲ್ಲಿ ರಾಜಾ ಒಡೆಯರ್‌ ಅವರು ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅಂದರೆ 1799ರಲ್ಲಿ ಒಡೆಯರು ತಮ್ಮ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡರು. ನಂತರ ದಸರಾ ಆಚರಣೆಗಳು ಮೈಸೂರಿನಲ್ಲಿ ನಡೆದವು. ಜಂಬೂ ಸವಾರಿ ಆರಂಭಕ್ಕೂ ಮುನ್ನ ಶುಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ಸಿಲುತ್ತದೆ. ಈ ಮೂಲಕ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೊದಲೇ ನಂದಿ ಧ್ವಜಕ್ಕೆ ಪೂಜೆ ಮಾಡಲಾಗುತ್ತೆ. ಈ ಮೂಲಕ ನಂದಿ ಧ್ವಜಕ್ಕೂ ತನ್ನದೇ ಆದ ವಿಶಿಷ್ಟ್ಯವಿದೆ.

ಇದನ್ನೂ ಓದಿ: Jamboo Savari 2023: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ, ಸತತ 4ನೇ ಬಾರಿ ಅಂಬಾರಿ ಹೊರಲಿದ್ದಾನೆ ಅಭಿಮನ್ಯು

33 ಅಡಿ ಎತ್ತರದ 150 ಕೆ.ಜಿ ತೂಕವಿರುವ ನಂದಿ ಕಂಬ

ಅರಮನೆಯ ಮುಂಭಾಗದ ಬಲ ರಾಮ ಗೇಟ್​​​ನ ಸಮೀಪ ಇರುವ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಜಂಬೂ ಸವಾರಿಯ ದಿನ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ದಸರಾ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ‌33 ಅಡಿ ಎತ್ತರವಿರುವ 150 ಕೆ.ಜಿ ತೂಕವಿರುವ ನಂದಿ ಕಂಬದಲ್ಲಿ 10 ವರ್ಣಗಳ ಧ್ವಜವಿದೆ. ಇದರ ಮೇಲೆ ಪಂಚ ಕಳಶವಿದೆ.

ಉಡಿಗಾಲ ಮಹದೇವಪ್ಪ ನೇತೃತ್ವದಲ್ಲಿ ಈ ನಂದಿ ಧ್ವಜ ಕುಣಿತ ನಡೆಯುತ್ತದೆ. ವಿಜಯ ದಶಮಿಯಂದು ಶಿವನ‌ ಲಾಂಛನ ಎಂದು ಕರೆಯಲ್ಪಡುವ ನಂದಿ ಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದ ಬಳಿಕ ಜಂಬೂ ಸವಾರಿಗೆ ಚಾಲನೆ‌ ನೀಡುತ್ತಾರೆ. ರಾಜರ ಕಾಲದಲ್ಲಿಯೂ ನಂದಿ ಧ್ವಜ ತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆ ಕರೆದೊಯ್ದು, ಅಂಬಾ ವಿಲಾಸ ಅರಮನೆಯಲ್ಲಿ ಸತ್ಕರಿಸಿ ಬಳಿಕ ತಂಡವನ್ನು ಅರಮನೆಯ ಬಲರಾಮ ದ್ವಾರದ ಬಳಿಗೆ ಕರೆದೊಯ್ಯುತ್ತಾರೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ‌ ನೀಡಲಾಗುತ್ತಿತ್ತು. ಈಗಲೂ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ನಂದಿ ಧ್ವಜವನ್ನು ಗಟ್ಟಿಮುಟ್ಟಾದ ಉದ್ದನೆಯ ಬಿದಿರಿನ ಬೊಂಬಿಗೆ ಬೆಳ್ಳಿ ಕಟ್ಟನ್ನು (ಬಳೆ) ಒಂದರ ಮೇಲೊಂದರಂತೆ ಜೋಡಿಸಿರುತ್ತಾರೆ. ಅಂತೆಯೇ ನಂದಿ ಧ್ವಜ ಹೊತ್ತು ಕುಣಿಯುವಾಗ ಶಬ್ದ ಬರುವಂತೆ ಮಾಡಲು ಈ ಬಳೆಗಳ ಟೊಳ್ಳಿನೊಳಗೆ ಚಿಕ್ಕ ಕಲ್ಲು ಅಥವಾ ಹುಣಸೆ ಬೀಜ ತುಂಬಲಾಗುತ್ತದೆ. ಕಂಬದಲ್ಲಿನ ಪೀಠದಲ್ಲಿ ನಂದಿ ವಿಗ್ರಹವಿದ್ದು, ಪೀಠದ ಮೇಲೆಯೇ ಇರುವ ಈ ಬಳೆಗಳಿಗೆ ಗಗ್ಗರ, ಹರಡೆ, ಗಗ್ಗ ಎಂಬ ಹೆಸರಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:30 pm, Tue, 24 October 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್