AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಜಂಬೂಸವಾರಿಗೆ ಸ್ತಬ್ಧಚಿತ್ರಗಳ ಮೆರಗು; ಚಂದ್ರಯಾನ, ರಾಯಣ್ಣ ಸೇರಿದಂತೆ 49 ಟ್ಯಾಬ್ಲೋಗಳು ಭಾಗಿ

ರಾಜ್ಯದ ಸಂಸ್ಕೃತಿ ಬಿಂಬಿಸುವ 49 ಸ್ತಬ್ಧಚಿತ್ರಗಳು, 95 ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿವೆ. ಜಂಬೂಸವಾರಿ ಹಾಗೂ ಪಂಜಿನ ಕವಾಯತಿನ ವೆಬ್‌ಕಾಸ್ಟಿಂಗ್‌ ಹಾಗೂ ಲೈವ್‌ ಸ್ಕ್ರೀನಿಂಗ್‌ ಇರಲಿದ್ದು, ದಸರಾ ವೆಬ್‌ಸೈಟ್‌ ಮೂಲಕ ಮೊಬೈಲ್‌ನಲ್ಲೇ ವೀಕ್ಷಿಸಬಹುದು.

ಈ ಬಾರಿ ಜಂಬೂಸವಾರಿಗೆ ಸ್ತಬ್ಧಚಿತ್ರಗಳ ಮೆರಗು; ಚಂದ್ರಯಾನ, ರಾಯಣ್ಣ ಸೇರಿದಂತೆ 49 ಟ್ಯಾಬ್ಲೋಗಳು ಭಾಗಿ
ರಾಮ್​, ಮೈಸೂರು
| Updated By: ಆಯೇಷಾ ಬಾನು|

Updated on:Oct 24, 2023 | 1:37 PM

Share

ಮೈಸೂರು, ಅ.24: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ 49 ಟ್ಯಾಬ್ಲೋಗಳು (Tableau)  ಭಾಗಿಯಾಗಿವೆ. ರಾಜ್ಯದ ಸಂಸ್ಕೃತಿ ಬಿಂಬಿಸುವ 49 ಸ್ತಬ್ಧಚಿತ್ರಗಳು, 95 ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿವೆ. ಜಂಬೂಸವಾರಿ ಹಾಗೂ ಪಂಜಿನ ಕವಾಯತಿನ ವೆಬ್‌ಕಾಸ್ಟಿಂಗ್‌ ಹಾಗೂ ಲೈವ್‌ ಸ್ಕ್ರೀನಿಂಗ್‌ ಇರಲಿದ್ದು, ದಸರಾ ವೆಬ್‌ಸೈಟ್‌ ಮೂಲಕ ಮೊಬೈಲ್‌ನಲ್ಲೇ ವೀಕ್ಷಿಸಬಹುದು.

ದಸರಾ ಟ್ಯಾಬ್ಲೋಗಳ ವಿವರ

  1. ಬಾಗಲಕೋಟೆ-ಬಾದಾಮಿ ಚಾಲುಕ್ಯರ ರಾಜವಂಶ&ಬನಶಂಕರಿ ದೇವಿ ಟ್ಯಾಬ್ಲೋ
  2. ಬಳ್ಳಾರಿ-ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಾಲಯ ಟ್ಯಾಬ್ಲೋ
  3. ಬೆಳಗಾವಿ-ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್​ ಫಾಲ್ಸ್​, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ತಬ್ಧಚಿತ್ರ
  4. ಬೆಂಗಳೂರು ಗ್ರಾಮಾಂತರ-ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ ಟ್ಯಾಬ್ಲೋ
  5. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ-ಚಂದ್ರಯಾನ-3 ಸ್ತಬ್ಧಚಿತ್ರ
  6. ಬೀದರ್-ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ ಟ್ಯಾಬ್ಲೋ
  7. ಚಾಮರಾಜನಗರ-ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು
  8. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ-ಏಕತೆಯಲ್ಲಿ ಅನೇಕತೆ ಸ್ತಬ್ಧಚಿತ್ರ
  9. ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ-ಬೆಟ್ಟದಿಂದ ಬಟ್ಟಲಿಗೆ ಸ್ತಬ್ಧಚಿತ್ರ
  10. ಚಿತ್ರದುರ್ಗ-ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಟ್ಯಾಬ್ಲೋ
  11. ದ.ಕನ್ನಡ-ಪಿಲಕುಳ ಗುತ್ತಿನಮನೆ, ವಿವೇಕಾನಂದ ತಾರಾಲಯ, ಬೀಚ್ ಸರ್ಫಿಂಗ್
  12. ದಾವಣಗೆರೆ-ಸಂತ ಸೇವಾಲಾಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ
  13. ಧಾರವಾಡ-ಧಾರವಾಡ ಪೇಡಾ, ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಟ್ಯಾಬ್ಲೋ
  14. ಗದಗ ಜಿಲ್ಲೆ-ಸಬರಮತಿ ಆಶ್ರಮ ಸ್ತಬ್ಧಚಿತ್ರ ಮೆರವಣಿಗೆ
  15. ಹಾಸನ- ಹಾಸನಾಂಬ ದೇವಾಲಯ, ಹಲ್ಮಡಿ ಈಶ್ವರ ದೇವಸ್ಥಾನ ಟ್ಯಾಬ್ಲೋ
  16. ಹಾವೇರಿ-ಶಂಕನಾದ ಮೊಳಗಿಸುತ್ತಿರುವ ಕನಕದಾಸರು & ಗದ್ದಿಗೆ ಕಾಗಿನೆಲೆ
  17. ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿ ಧಾಮ ಬುದ್ಧನ ಸ್ತೂಪ, ತೊಗರಿ ಕಣಜ, ಸಿಮೆಂಟ್‌ ಕಾರ್ಖಾನೆ
  18. ಕೊಡಗು ಜಿಲ್ಲಾ ಪಂಚಾಯಿತಿ-ಕೊಡಗಿನ ಪ್ರೇಕ್ಷಣೀಯ ಸ್ಥಳ ಸ್ತಬ್ಧಚಿತ್ರ
  19. ಕೋಲಾರ-ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಾಪನೆ
  20. ಕೊಪ್ಪಳ-ಕಿನ್ನಾಳ ಕಲೆ ಹಾಗೂ ಕೈಮಗ್ಗ ಸ್ತಬ್ಧಚಿತ್ರ
  21. ಮಂಡ್ಯ-ಸಾಂಪ್ರದಾಯಿಕ ಉದ್ಯಮ ಆಲೆಮನೆ ಸ್ತಬ್ಧಚಿತ್ರ
  22. ಮೈಸೂರು-ನಾಲ್ವಡಿ ಕೃಷ್ಣರಾಜ ಒಡೆಯರ್​ ಕೊಡುಗೆಗಳ ಸ್ತಬ್ಧಚಿತ್ರ
  23. ರಾಯಚೂರು-ನವರಂಗ ದರ್ವಾಜ ಹಾಗೂ ಆರ್​ಟಿಪಿಎಸ್​ ಟ್ಯಾಬ್ಲೋ
  24. ರಾಮನಗರ-ಚನ್ನಪಟ್ಟಣದ ಚೆಂದದ ಗೊಂಬೆಗಳು ಇತ್ಯಾದಿ ಕಲೆಗಳು
  25. ಶಿವಮೊಗ್ಗ-ಕುವೆಂಪು ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ ಟ್ಯಾಬ್ಲೋ
  26. ತುಮಕೂರು-ಮೂಡಲಪಾಯ ಯಕ್ಷಗಾನ, ತವರು ಸ್ತಬ್ದಚಿತ್ರ
  27. ಉಡುಪಿ-ತ್ಯಾಜ್ಯ ಮುಕ್ತ ಮತ್ಸ್ಯಸ್ನೇಹಿ ಸಮುದ್ರ ಸ್ತಬ್ದಚಿತ್ರ
  28. ಉತ್ತರ ಕನ್ನಡ- ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಂಗಳಿಕ ಸಂರಕ್ಷಣೆ
  29. ವಿಜಯಪುರ-ಜ್ಞಾನ ಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿ
  30. ವಿಜಯನಗರ- ವಿಠಲ ದೇವಸ್ಥಾನ ಸ್ತಬ್ದಚಿತ್ರ
  31. ಯಾದಗಿರಿ-ವೇಣುಗೋಪಾಲಸ್ವಾಮಿ ದೇವಸ್ಥಾನ ಸ್ತಬ್ದಚಿತ್ರ
  32. ಸ್ತಬ್ದಚಿತ್ರ ಉಪಸಮಿತಿ- ಅರಮನೆ ವಾದ್ಯಗೋಷ್ಠಿ ಸ್ತಬ್ದಚಿತ್ರ
  33. ಸ್ತಬ್ದಚಿತ್ರ ಉಪಸಮಿತಿ-ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು ಸೋಮನಾಥಪುರ ದೇಗುಲ
  34. ಸಮಾಜಕಲ್ಯಾಣ ಇಲಾಖೆ-ಸಂವಿಧಾನ ಪೀಠಿಕೆ, ಇಲಾಖೆ ಯೋಜನೆಗಳು
  35. ವಾರ್ತಾ ಮತ್ತು ಪ್ರಚಾರ ಇಲಾಖೆ- ಸರ್ಕಾರದ ಗ್ಯಾರಂಟಿ ಯೋಜನೆಗಳು ಟ್ಯಾಬ್ಲೋ
  36. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಗೃಹಲಕ್ಷ್ಮೀ ಯೋಜನೆ&ಇತರೆ ಯೋಜನೆಗಳು
  37. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ-ವಾಲ್ಮಿಕಿ ಪುತ್ಥಳಿ& ಇಲಾಖೆಯ ಯೋಜನೆ
  38. ಆಹಾರ ಇಲಾಖೆ-ಹಸಿವಿನಿಂದ ಯಾರೂ ಬಳಲಬಾರದು ಅದಕ್ಕಾಗಿ ಅನ್ನಭಾಗ್ಯ
  39. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ-ಶೌರ್ಯ-ನ್ಯಾಯ-ರಕ್ಷೆ ಸ್ತಬ್ದಚಿತ್ರ
  40. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಅಂಗಾಂಗ ದಾನ, STEMI, ಆಶಾಕಿರಣ
  41. ಸಹಕಾರಿ ಹಾಲು ಉತ್ಪಾದಕರ ಮಹಲಾ ಮಂಡಳಿ ನಿಯಮಿತ-ಕ್ಷೀರಭಾಗ್ಯ ಯೋಜನೆ
  42. ಚೆಸ್ಕಾಂ-ಗೃಹಜ್ಯೋತಿ, ಕೃಷಿ ಸೋಲಾರ ಸೆಟ್​, ಗ್ರಾಹಕರ ಸಲಹಾ ಸಮಿತಿ
  43. ವೈದ್ಯಕೀಯ ಕಾಲೇಜು&ಸಂಶೋಧನಾ ಸಂಸ್ಥೆ-ಮೈಸೂರು ವೈದ್ಯಕೀಯ ಮಹಾವಿದ್ಯಾಲಯ
  44. ಪ್ರವಾಸೋದ್ಯಮ ಇಲಾಖೆ-ಲಕ್ಕುಂಡಿ ಬ್ರಹ್ಮ ದೇವಾಲಯ
  45. ಕಾವೇರಿ ನೀರಾವರಿ ನಿಗಮ-ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ
  46. ವಾಕ್​ ಶ್ರವಣ ಸಂಸ್ಥೆ-ವಾಕ್ ಶ್ರವಣ ದೋಷದಿಂದ ಉತ್ತಮ ಜೀವನದೆಡೆಗೆ ಆಯುಷ್​ನ ಕೊಡುಗೆ
  47. ಜಗಜೀವನ ರಾಮ್ ಚರ್ಮ ಕೈಗಾರಿಕ ಅಭಿವೃದ್ಧಿ ನಿಗಮ-ಲಿಡ್​ಕರ್ ಅಪ್ಪಟ ಚರ್ಮ ಉತ್ಪನ್ನಗಳ ಆಗರ ಮತ್ತು ಚರ್ಮ ಕುಶಲಕರ್ಮಿಗಳ ಅಭಿವೃದ್ಧಿ ಆಶಾಕಿರಣ
  48. ಸಮಾಜ ಕಲ್ಯಾಣ ಇಲಾಖೆ-ಭಾರತೀಯ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್,
  49. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ- ಸಂವಿಧಾನ ಪೀಠಿಕೆ ಓದು ಕಡ್ಡಾಯ ಟ್ಯಾಬ್ಲೋಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:31 pm, Tue, 24 October 23

ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್