ಬೆಂಗಳೂರು, ಅಕ್ಟೋಬರ್ 17: ದಸರಾ ಹಬ್ಬ ಆರಂಭವಾಗುತ್ತಿದ್ದಂತೆಯೇ ಹೂವಿನ ದರದಲ್ಲಿ (Flower Rate) ಭಾರೀ ಏರಿಕೆ ಕಂಡುಬಂದಿದೆ. ಕಳೆದ ಕೆಲವು ತಿಂಗಳಿನಿಂದ ಪಾತಳಕ್ಕೆ ಇಳಿದಿದ್ದ ಹೂವಿನ ದರ ದಸರಾ ಹಬ್ಬಗೆ (Dasara Festival) ಏಕಾಏಕಿ ಏರಿಕೆಯಾಗಿದೆ. ಪ್ರತಿ ಕೆಜಿ ಹೂವಿನ ದರ ನೂರರಿಂದ ಇನ್ನೂರು ರೂಪಾಯಿ ವರೆಗೆ ಹೆಚ್ಚಳವಾಗಿದೆ. ಮಲ್ಲಿಗೆ ಮಗ್ಗು, ಸೇವಂತಿಗೆ, ಕನಕಾಂಬರ ಗ್ರಾಹಕರ ಜೇಬು ಸುಡುತ್ತಿದೆ. ಎರಡು ದಿನಗಳ ಹಿಂದೆ ಕೆಜಿ ಕನಕಾಂಬರ ಹೂವಿನ ದರ 600ರಿಂದ 700 ರೂ. ಇತ್ತು. ಮಂಗಳವಾರ ಏಕಾಏಕಿ ಸಾವಿರ ರೂಪಾಯಿ ಗಡಿ ದಾಟಿದೆ.
ಸೇವಂತಿಗೆ ಬಿಡಿ ಹೂವು 5 ರೂ.ನಿಂದ 10 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಮಂಗಳವಾರ 80 ರಿಂದ 100 ರೂ.ಗೆ ಮಾರಾಟವಾಗುತ್ತಿದೆ. ಬುಧವಾರದಿಂದ ಹೂವಿನ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಮಲ್ಲಿಗೆ ಹೂವು ಕೆಜಿಗೆ 400 ರಿಂದ 500 ರೂ. ಇದ್ದುದು ಈಗ 600 ರಿಂದ 700 ರೂ. ಆಗಿದೆ. ನವರಾತ್ರಿ ಹಬ್ಬದ ಕಾರಣ ವ್ಯಾಪಾರಸ್ಥರು ಹೂವಿನ ಬೆಲೆ ಏರಿಕೆ ಮಾಡಿದ್ದಾರೆ.
ಸದ್ಯ ಕನಕಾಂಬರದ ಬೆಲೆ ಕೆಜಿಗೆ 600 – 700 ರೂ. ಇದ್ದರೆ, ಮಲ್ಲಿಗೆ ಕೆಜಿಗೆ 500 – 600 ರೂ, ಸೇವಂತಿಗೆ 80 ರಿಂದ 200 ರೂ, ಚಂಡೂ ಹೂ 40- 60 ರೂ, ಕಣಗಿಲೆ – 200 ರೂ, ದುಂಡು ಮಲ್ಲಿಗೆ – 500 ರೂ, ಕಾಕಾಡ – 400 ರೂ, ಆಮ್ರ ಮಲ್ಲಿಗೆ – 400 ರೂ (ಒಂದು ಮಾರಿಗೆ 100) ಇದೆ.
ಬಿಳಿ ಸೇವಂತಿಗೆ ಕೆಜಿಗೆ – 250 ರೂ, ಹಳದಿ ಸೇವಂತಿಗೆ 200 ರೂ, ಕೆಂಪು ಸೇವಂತಿಗೆ 200 ರೂ ಇದ್ದು, ಪರ್ಪಲ್ ಸೇವಂತಿಗೆ 200 ರೂ, ತುಳುಸಿ ಮಾರಿಗೆ 80 ರೂ, ದವನ ಒಂದು ಕಟ್ ಗೆ 100 ರೂ, ಮಾವಿನ ಎಲೆ ಒಂದು ಕಟ್ಗೆ 80 ರೂ. ಇದೆ.
ಇದನ್ನೂ ಓದಿ: ಕಾರಿನಡಿಯಲ್ಲಿತ್ತು ಕಾಳಿಂಗ ಸರ್ಪ! 80 ಕಿಮೀ ಪ್ರಯಾಣಿಸಿ ಬೆಚ್ಚಿ ಬಿದ್ದ ಸವಾರರು ಆಮೇಲೆ ಮಾಡಿದ್ದೇನು?
ಪ್ರತಿ ವರ್ಷ ಹಬ್ಬದ ಸೀಸನ್ನಲ್ಲಿ ಹೂವಿನ ದರ ಹೆಚ್ಚಾಗುತ್ತದೆ. ಆದರೆ, ಈ ವರ್ಷ ನವರಾತ್ರಿ ಹಬ್ಬದ ಸಂದರ್ಭದಲ್ಲಿ ತುಸು ಹೆಚ್ಚೇ ದುಬಾರಿಯಾಗಿದೆ ಹೂವಿನ ದರ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ