ಕಾರಿನಡಿಯಲ್ಲಿತ್ತು ಕಾಳಿಂಗ ಸರ್ಪ! 80 ಕಿಮೀ ಪ್ರಯಾಣಿಸಿ ಬೆಚ್ಚಿ ಬಿದ್ದ ಸವಾರರು ಆಮೇಲೆ ಮಾಡಿದ್ದೇನು?
ಗೋವಾದ ಕ್ಯಾಸಲ್ ರಾಕ್-ದೂಧಸಾಗರ ಪ್ರದೇಶದ ಕಂಡೇವಾಡಿಯ ವ್ಯಕ್ತಿಯೊಬ್ಬರು ಮತ್ತು ಅವರ ಸೋದರಸಂಬಂಧಿಗಳು ಜಗಲ್‌ಪೇಟೆ ಸಮೀಪದ ಮೆಸ್ಟ್ ಬಿರೋಡಾ ಗ್ರಾಮದ ಸಂಬಂಧಿಕರ ಮನೆಗೆ ಬೆಳಿಗ್ಗೆ ಮನೆಯಿಂದ ಹೊರಟಿದ್ದರು. ಕಾಳಿಂಗ ಸರ್ಪವೊಂದು ತಮ್ಮೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ! ಆಮೇಲೇನಾಯ್ತು? ಮುಂದೆ ಓದಿ...
ಜಗಲ್‌ಪೇಟೆ (ಉತ್ತರ ಕನ್ನಡ), ಅಕ್ಟೋಬರ್ 17: ಕಾರಿನಲ್ಲಿ ಕಾಳಿಂಗ ಸರ್ಪ (King Cobra) ಇರುವುದು ಗೊತ್ತೇ ಇಲ್ಲದೆ ಕಿಲೋಮೀಟರುಗಟ್ಟಲೆ ಪ್ರಯಾಣಿಸಿ ದಿಢೀರ್ ಆಗಿ ಹಾವಿರುವುದು ಗೊತ್ತಾದರೆ ಹೇಗಿರಬಹುದು! ಬೆಚ್ಚಿ ಹೌಹೌರುವ ಪರಿಸ್ಥಿತಿ ಸವಾರರದ್ದಾಗಬಹುದಲ್ಲವೇ? ಇಂಥದ್ದೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada Disrtrict) ಜಗಲ್‌ಪೇಟೆ ಬಳಿ ನಡೆದಿರುವುದು ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜಗಲ್‌ಪೇಟೆಯಲ್ಲಿ ಭಾನುವಾರ ಕಾರಿನಲ್ಲಿ ಕಾಳಿಂಗ ಸರ್ಪದ ಜತೆ 80 ಕಿಮೀ ಪ್ರಯಾಣಿಸಿದ ನಾಲ್ವರು ಸಹೋದರ ಸಂಬಂಧಿಗಳು ಆಘಾತಕ್ಕೊಳಗಾಗಿದ್ದಾರೆ. ಪ್ರಯಾಣದ ವೇಳೆ ಕಾರಿನ ಬೂಟ್ ಸ್ಪೇಸ್ನಲ್ಲಿ ಕಾಳಿಂಗ ಸರ್ಪ ಇದ್ದುದು ಅವರ ಅರಿವಿಗೇ ಬಂದಿರಲಿಲ್ಲ.
ಗೋವಾದ ಕ್ಯಾಸಲ್ ರಾಕ್-ದೂಧಸಾಗರ ಪ್ರದೇಶದ ಕಂಡೇವಾಡಿಯ ವ್ಯಕ್ತಿಯೊಬ್ಬರು ಮತ್ತು ಅವರ ಸೋದರಸಂಬಂಧಿಗಳು ಜಗಲ್‌ಪೇಟೆ ಸಮೀಪದ ಮೆಸ್ಟ್ ಬಿರೋಡಾ ಗ್ರಾಮದ ಸಂಬಂಧಿಕರ ಮನೆಗೆ ಬೆಳಿಗ್ಗೆ ಮನೆಯಿಂದ ಹೊರಟಿದ್ದರು. ಕಂಡೇವಾಡಿಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಜಗಲ್‌ಪೇಟೆ ಬಳಿ ದತ್ತಾತ್ರೇಯ ದೇವರ ದರ್ಶನಕ್ಕೆ ಕಾರನ್ನು ನಿಲ್ಲಿಸಿದ್ದರು. ಆಗಲೂ ಕಾಳಿಂಗ ಸರ್ಪವೊಂದು ತಮ್ಮೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ!
ಗಮ್ಯ ಸ್ಥಾನವನ್ನು ತಲುಪಿದ ನಂತರ, ವ್ಯಕ್ತಿ ಮತ್ತು ಅವರ ಸೋದರಸಂಬಂಧಿಗಳು ಕಾರಿನಿಂದ ಇಳಿದು ಬಾಗಿಲು ತೆರೆದಿದ್ದಾರೆ. ಬಳಿಕ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ, ಬೆಕ್ಕೊಂದು ಕಾರಿನ ಸುತ್ತಲೂ ಕೂಗುತ್ತಾ ಸುಳಿಯಲು ಪ್ರಾರಂಭಿಸಿತ್ತು.
ಇದನ್ನೂ ಓದಿ: ಮಂಗಳೂರು: KSRTC ಬಸ್ನಲ್ಲಿ ಕೋಳಿ ಮಾಂಸ ಜಗಳ; ಠಾಣೆಗೆ ಬಸ್ ತೆಗೆದುಕೊಂಡು ಹೋದ ಚಾಲಕ
ಆರಂಭದಲ್ಲಿ, ಮಾತಿನ ಭರಾಟೆಯಲ್ಲಿ ಅವರು ಅದನ್ನು ಗಮನಿಸಲಿಲ್ಲ. ಆದರೆ ನಂತರ ಕಾರಿನಡಿ ಏನೋ ಸದ್ದು ಕೇಳುತ್ತಿದೆ ಎಂದು ನೋಡಿದಾಗ ಹಿಂಬದಿಯ ಚಕ್ರಗಳ ನಡುವೆ ಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಅವರು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲವು ಗಂಟೆಗಳ ನಂತರ, ಅರಣ್ಯ ಇಲಾಖೆಯ ಹಾವು ರಕ್ಷಕರು ಕಾಳಿಂಗ ಸರ್ಪವನ್ನು ಕಾರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹಾವನ್ನು ಸಮೀಪದ ಅರಣ್ಯದಲ್ಲಿ ಬಿಡಲಾಗಿದೆ ಎಂದು ಸ್ಥಳೀಯರ ಹೇಳಿಕೆ ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ