ಕೈ ತುಂಬಾ ಸಾಲ ಮಾಡಿಕೊಂಡಿದ್ದ ಆರೋಪಿ 6 ತಿಂಗಳಿಂದ ವೃದ್ಧ ದಂಪತಿ ಮನೆಗೆ ಬರುತ್ತಿದ್ದ; ಡಿಸಿಪಿ ಹರೀಶ್ ಪಾಂಡೆ ಮಾಹಿತಿ

| Updated By: sandhya thejappa

Updated on: Aug 24, 2021 | 2:14 PM

ವರಮಹಾಲಕ್ಷ್ಮೀ ಹಬ್ಬದ ದಿನ ವೃದ್ಧ ದಂಪತಿ ಕೊಲೆ ಆಗಿತ್ತು. ಅವರ ಮನೆಗೆ ಬರುವವರನ್ನು, ಅಕ್ಕಪಕ್ಕದಲ್ಲಿ ಓಡಾಡುವರನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಕೊಲೆ ಆರೋಪಿಗಳ ಬಗ್ಗೆ ಕೆಲ ಮಾಹಿತಿ ಸಿಕ್ಕಿತ್ತು.

ಕೈ ತುಂಬಾ ಸಾಲ ಮಾಡಿಕೊಂಡಿದ್ದ ಆರೋಪಿ 6 ತಿಂಗಳಿಂದ ವೃದ್ಧ ದಂಪತಿ ಮನೆಗೆ ಬರುತ್ತಿದ್ದ; ಡಿಸಿಪಿ ಹರೀಶ್ ಪಾಂಡೆ ಮಾಹಿತಿ
ಕೊಲೆಗೀಡಾದ ದಂಪತಿ
Follow us on

ಬೆಂಗಳೂರು: ಆಗಸ್ಟ್ 20ರಂದು ಕುಮಾರಸ್ವಾಮಿ ಲೇಔಟ್​ನಲ್ಲಿ ದಂಪತಿ ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 12 ವರ್ಷದ ಹಿಂದೆ ದಂಪತಿಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದವರೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಕೊಲೆಗೈದು ಚಿನ್ನವನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಗಳಿಂದ 193 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಡಿಸಿಪಿ ಹರೀಶ್ ಪಾಂಡೆ ಪ್ರಕರಣವನ್ನು ಬೇಧಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದ ದಿನ ವೃದ್ಧ ದಂಪತಿ ಕೊಲೆ ಆಗಿತ್ತು. ಅವರ ಮನೆಗೆ ಬರುವವರನ್ನು, ಅಕ್ಕಪಕ್ಕದಲ್ಲಿ ಓಡಾಡುವರನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಕೊಲೆ ಆರೋಪಿಗಳ ಬಗ್ಗೆ ಕೆಲ ಮಾಹಿತಿ ಸಿಕ್ಕಿತ್ತು. ಕೂಡಲೇ ನಾರಾಯಣಸ್ವಾಮಿ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. ಈ ವೇಳೆ ಕೊಲೆ ಮಾಡಿರುವ ಬಗ್ಗೆ ಮತ್ತು ಚಿನ್ನಾಭರಣ ದೋಚಿರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

ನಾರಾಯಣಸ್ವಾಮಿ ಕಳೆದ 10 ವರ್ಷಗಳ ಹಿಂದೆ ವೃದ್ಧ ದಂಪತಿ ಮನೆಯಲ್ಲಿ ಬಾಡಿಗೆಗೆ ಇದ್ದ. ಇದಾದ ಬಳಿಕ ಬೇರೆ ಕಡೆ ಬಾಡಿಗೆ ಮನೆ ಮಾಡಿಕೊಂಡಿದ್ದ. ನಾರಾಯಣಸ್ವಾಮಿ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸುವ ಸಲುವಾಗಿ ವೃದ್ಧ ದಂಪತಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಅದರಂತೆ 6 ತಿಂಗಳಿಂದ ವೃದ್ಧ ದಂಪತಿ ಮನೆಗೆ ಬರೋದು ಹೋಗುವುದು ಮಾಡುತ್ತಿದ್ದ. ವರಮಹಾಲಕ್ಷ್ಮೀ ಹಬ್ಬದ ದಿನ ಬಂದು, ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ತನ್ನ ಮೂವರು ಸ್ನೇಹಿತರ ಜೊತೆಗೂಡಿಸಿಕೊಂಡು ಕೊಲೆ ಮಾಡಿದ್ದ. ಸದ್ಯ ನಾಲ್ವರನ್ನು ಅರೆಸ್ಟ್ ಮಾಡಿದ್ದು, ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಮುಂದಿನ ತನಿಖೆ ಕೈಗೊಂಡಿದ್ದೇವೆ ಅಂತ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಕೊಲೆಯಾದ ವೃದ್ಧ ದಂಪತಿ
ನಗರವೇ ಬೆಚ್ಚಿಬೀಳುವಂತಹ ಘಟನೆ ಆಗಸ್ಟ್ 20ರಂದು ನಡೆದಿತ್ತು. ಹಾಡಹಗಲೇ ವೃದ್ಧ ದಂಪತಿಯನ್ನು ನಾಲ್ವರು ಕೊಲೆ ಮಾಡಿದ್ದರು. ಕಳೆದ 20 ವರ್ಷಗಳಿಂದ ಕಾಶಿನಗರದಲ್ಲಿ ವಾಸವಿದ್ದ ಬಿಎಂಟಿಸಿ ನಿವೃತ್ತ ಉದ್ಯೋಗಿ ಶಾಂತರಾಜು(65) ಮತ್ತು ಪ್ರೇಮಲತಾ(62) ಕೊಲೆಯಾದ ದಂಪತಿ. ಕುತ್ತಿಗೆ ಕೊಯ್ದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಚಿನ್ನಾಭರಣ, ಹಣ ದೋಚುವ ಉದ್ದೇಶದಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಒಂದು ಮನೆಯಲ್ಲಿ ತಾವಿದ್ದು, 2 ಮನೆ ಬಾಡಿಗೆಗೆ ನೀಡಿದ್ದ ಈ ದಂಪತಿಗೆ ಮಕ್ಕಳಿರಲಿಲ್ಲ. ಆದರೆ ಸಾಕು ಮಗಳು ಇರುವುದಾಗಿ ನೆರೆಹೊರೆಯವರು ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ

ಕುಮಾರಸ್ವಾಮಿ ಲೇಔಟ್​ನಲ್ಲಿ ದಂಪತಿ ಕೊಲೆ ಕೇಸ್; ಮನೆ ಬಾಡಿಗೆಗಿದ್ದ ನಾಲ್ವರು ಅರೆಸ್ಟ್

ಮೊಮ್ಮಗಳಿಗೆ ಮೇಕೆ ಗುಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ವೃದ್ಧನ ಕೊಲೆ; ಹರಕೆಯ ಮೇಕೆ ವಿಚಾರಕ್ಕೆ ವ್ಯಕ್ತಿ ಬಲಿ

(DCP Harish Pandey has provided some information about murder of elderly couple)

Published On - 2:11 pm, Tue, 24 August 21