ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸ್ವೆಟರ್ ಹರಾಜು ಹಾಕಿ ಪ್ರತಿಭಟನೆ, ನೇರವಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಆಫರ್!

ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸ್ವೆಟರ್ ಹರಾಜು ಹಾಕಿ ಪ್ರತಿಭಟನೆ, ನೇರವಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಆಫರ್!
ಬಿಬಿಎಂಪಿ

ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳೇ ನಡೆದಿಲ್ಲ. ಆದರೆ ಮಕ್ಕಳಿಗೆ ಸ್ಪೆಟರ್ ನೀಡಿದ್ದೇವೆ ಎಂದು ಒಂದು ಮುಕ್ಕಾಲು ಕೋಟಿ ರೂಪಾಯಿ ಹಣವನ್ನು ಪಾಲಿಕೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಖಂಡಿಸಿ ಪಾಲಿಕೆಯ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.

TV9kannada Web Team

| Edited By: sadhu srinath

Aug 24, 2021 | 12:20 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಅಪರೂಪದ ಪ್ರತಿಭಟನೆ ನಡೆದಿದೆ. ಅದೂ ರಾಜಧಾನಿಯ ಕ್ಷೇಮಾಭ್ಯುದಯದ ಹೊಣೆಹೊತ್ತಿರುವ ಬಿಬಿಎಂಪಿಯ ಕೇಂದ್ರ ಕಚೇರಿ ಎದುರು ಇಂತಹ ಪ್ರತಿಭಟನೆ ನಡೆದಿದೆ. ವಿಷಯವೂ ಗಂಭೀರವಾಗಿಯೇ ಇದೆ. ಶಾಲಾ ಮಕ್ಕಳಿಗೆ ವಿತರಿಸುವ ಸ್ವೆಟರ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಇಂದು ಸ್ಪೆಟರ್​ಗಳನ್ನು ಹರಾಜು ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗಿದೆ. ನೂರಾರು ಸ್ಪೆಟರ್ ಗಳನ್ನು ಕಮಿಷನರ್ ಕಚೇರಿ ಮುಂಭಾಗ ಸುರಿದು, ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ, ಹರಾಜು ಹಾಕಲಾಗಿದೆ. ಒಂದು ಸ್ಪೆಟರ್ 50 ಬೆಲೆ ನಿಗದಿ ಮಾಡಿ ಹರಾಜು ಹಾಕಲಾಗಿದೆ.

ನೇರವಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಆಫರ್! ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳೇ ನಡೆದಿಲ್ಲ. ಆದರೆ ಮಕ್ಕಳಿಗೆ ಸ್ಪೆಟರ್ ನೀಡಿದ್ದೇವೆ ಎಂದು ಒಂದು ಮುಕ್ಕಾಲು ಕೋಟಿ ರೂಪಾಯಿ ಹಣವನ್ನು ಪಾಲಿಕೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಖಂಡಿಸಿ ಪಾಲಿಕೆಯ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಇದೇ ವೇಳೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಉಚಿತ ಸ್ಪೆಟರ್ ಎಂದು ಪ್ರತಿಭಟನಾಕಾರರು ಕೂಗು ಹಾಕಿದ್ದಾರೆ.

ಬಿಬಿಎಂಪಿ ಜಾಗವನ್ನೇ ಅಡವಿಟ್ಟು ಬ್ಯಾಂಕ್​ನಲ್ಲಿ ಸಾಲ ಎತ್ತಿ ಭಾರೀ ವಂಚನೆ! ಏನಿದು ಮಹಾವೀರ್ ಜೈನ್ ಆಸ್ಪತ್ರೆಯ ವಂಚನೆ ಪುರಾಣ? (school children sweaters auctioned in front of bbmp office)

Follow us on

Related Stories

Most Read Stories

Click on your DTH Provider to Add TV9 Kannada