Bengaluru Crime: 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್​ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಚರರ ಕೃತ್ಯ

ರೇಣುಕುಮಾರ್  ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದರು. 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್​ ಬರ್ಬರ ಕೊಲೆ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Bengaluru Crime: 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್​ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಚರರ ಕೃತ್ಯ
(ಎಡ ಚಿತ್ರದಲ್ಲಿ) ಶ್ರೀಕಾಂತ್, (ಎಡದಿಂದ ಬಲಕ್ಕೆ) ಪ್ರಶಾಂತ್, (ಕೊನೆಗೆ) ಕೊಲೆಯಾದ ರೇಣುಕುಮಾರ್
ಆಯೇಷಾ ಬಾನು

Updated on: Jun 06, 2023 | 1:16 PM

ಬೆಂಗಳೂರು: ನಗರದ ಮಹದೇವಪುರದಲ್ಲಿ ಮೇ 25ರಂದು ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ರೇಣುಕುಮಾರ್ ಹತ್ಯೆಯ ದೃಶ್ಯ ವೈರಲ್​ ಆಗುತ್ತಿದೆ(Murder). ಸಿಸಿಟಿವಿಯಲ್ಲಿ ರೆಕಾರ್ಡ್​ ಆದ ಹತ್ಯೆಯ ದೃಶ್ಯಗಳು ಎಂತವರನ್ನೂ ಬೆಚ್ಚಿಬೀಳಿಸುವಂತಿವೆ. ರೇಣುಕುಮಾರ್(​Rowdy Sheeter Renukumar)  ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದರು. 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್​ ಬರ್ಬರ ಕೊಲೆ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಧಮ್ಕಿ ಹಾಕಿದ ಎಂಬ ಕಾರಣಕ್ಕೆ ಕೊಲೆ

ಈ ಹಿಂದೆ ಜೈಲಿನಿಂದ ಹೊರಬಂದ ರೇಣುಕುಮಾರ್​​ ತನ್ನ ಸಹಚರರಿಗೆ ಧಮ್ಕಿ ಹಾಕಿದ್ದ. ನಾನು ಜೈಲಿನಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಾಸ್ತಿಯಾಗಿದೆ. ನೀವು ನನ್ನ ಶಿಷ್ಯಂದಿರು, ಇನ್ಮುಂದೆ ಏನು ಮಾಡಬೇಕಾದರೂ ನನ್ನ ಪರ್ಮಿಷನ್​ ತೆಗೆದುಕೊಳ್ಳಬೇಕೆಂದು ಪ್ರಶಾಂತ್, ಶ್ರೀಕಾಂತ್​ಗೆ ಧಮ್ಕಿ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಸಹಕರರು ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದಾರೆ. ಕೇವಲ 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: Bengaluru News: ಪ್ರಿಯಕರನಿಂದ ಪ್ರಿಯತಮೆಯ ಕೊಲೆ,‌ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

ಇನ್ನು ಕೊಲೆಯಾದ ರೇಣುಕುಮಾರ್ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 7ಕ್ಕೂ ಹೆಚ್ಚು ಪ್ರಕರಣಗಳು ಮೃತ ರೇಣುಕುಮಾರ್ ಮೇಲಿತ್ತು. ವಿವಿಧ ಕೇಸ್​ಗಳಲ್ಲಿ ಜೈಲುಪಾಲಾಗಿದ್ದ ರೌಡಿಶೀಟರ್​ ಜೈಲಿನಿಂದ ಹೊರಬಂದು ಸಹಚರರಿಗೆ ಧಮ್ಮಿ ಹಾಕಿ ಈಗ ಕೊಲೆಯಾಗಿದ್ದಾನೆ. ಸದ್ಯ ಮಹದೇವಪುರ ಪೊಲೀಸರು ಪ್ರಶಾಂತ್, ಶ್ರೀಕಾಂತ್, ವಸಂತ್​ನ್ನು​ ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:04 pm, Tue, 6 June 23

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us