ಬೆಂಗಳೂರಿನಲ್ಲಿ ಡೆಂಘೀ, ಚಿಕನ್ ಗುನ್ಯಾ ಹಾವಳಿ; ವಾರಕ್ಕೆ 80 ಕೇಸ್ ಪತ್ತೆ
ರಾಜ್ಯದಲ್ಲಿ ಕೊರೊನಾಕ್ಕಿಂತ ಹೆಚ್ಚು ಡೆಂಘಿ ಜ್ವರ ಹಾಗೂ ಚಿಕನ್ ಗುನ್ಯಾ ಹಾವಳಿ ಇಡುತ್ತಿದ್ದು, ಮಾರ್ಚ್ ನಿಂದ ನಿರಂತರವಾಗಿ ರಾಜ್ಯದಲ್ಲಿ ಢೇಂಘಿ ಜ್ವರ ಏರಿಕೆಯಾಗ್ತಿದೆ.
ಬೆಂಗಳೂರು: ನಗರದಲ್ಲಿ ಎಲೆಕ್ಷನ್ ರಣಕಣ ರಂಗೇರಿದೆ. ಮತ್ತೊಂದೆಡೆ ಕೊರೊನಾ ಕೇಸ್ ಏರಿಕೆಯ ಆತಂಕದ ನಡುವೆ ಈಗ ರಾಜ್ಯದಲ್ಲಿ ಡೆಂಘೀ ಜ್ವರ ಹೆಚ್ಚಾಗಿದ್ದು ಬಿಸಿಲಿನ ತಾಪಮಾನದ ನಡುವೆ ಡೆಂಘಿ ಜ್ವರ ಸದ್ದಿಲ್ಲದೆ ಜನರ ಜೀವ ಹಿಂಡಲು ಮುಂದಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತಾಪಮಾನದಲ್ಲಿ ಬದಲಾವಣೆ ಎದುರಾಗಿದೆ. ತಾಪಮಾನ ಎರಿಕೆಯ ನಡುವೆ ಕೊರೊನಾ ಹಾಗೂ ಡೆಂಘೀ ಜ್ವರ ಹೆಚ್ಚಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಡೆಂಘಿ ಜ್ವರ ಏರಿಕೆಯಾಗ್ತಿದೆ. ಸದ್ಯ ರಾಜ್ಯದಲ್ಲಿ ಕೊರೊನಾಕ್ಕಿಂತ ಹೆಚ್ಚು ಡೆಂಘಿ ಜ್ವರ ಹಾಗೂ ಚಿಕನ್ ಗುನ್ಯಾ ಹಾವಳಿ ಇಡುತ್ತಿದ್ದು, ಮಾರ್ಚ್ ನಿಂದ ನಿರಂತರವಾಗಿ ರಾಜ್ಯದಲ್ಲಿ ಢೇಂಘಿ ಜ್ವರ ಏರಿಕೆಯಾಗ್ತಿದೆ. ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ ಬಿಬಿಎಂಪಿ ಹಾಗೂ ರಾಜ್ಯದಲ್ಲಿ ಕಳೆದ 20 ದಿನಗಳಲ್ಲಿ 246 ಡೆಂಘಿ ಕೇಸ್ ಪತ್ತೆಯಾಗಿದ್ದು 15% ರಿಂದ 20% ರಷ್ಟು ಡೆಂಘಿ ಕೇಸ್ಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಮೆಕ್ಯಾನಿಕಲ್ ವಿದ್ಯಾರ್ಥಿಯ ಬರ್ಬರ ಹತ್ಯೆ
ಕಳೆದ ಒಂದು ವಾರದಲ್ಲಿ ಅಂದ್ರೆ ಎಪ್ರಿಲ್ 17-23ರವರೆಗೆ ಒಟ್ಟು 82 ಡೆಂಘಿ ಕೇಸ್ ಪತ್ತೆಯಾಗಿದ್ರೆ ಇದರಲ್ಲಿ ಸಿಂಹಪಾಲು ಬೆಂಗಳೂರಿನಲ್ಲಿ 49 ಕೇಸ್ ಪತ್ತೆಯಾಗಿದೆ. ಇನ್ನು ಎಪ್ರಿಲ್ 10 ರಿಂದ 16 ರವೆರೆಗೆ ರಾಜ್ಯದಲ್ಲಿ 94 ಕೇಸ್ ಪತ್ತೆಯಾಗಿದ್ರೆ ಎಪ್ರಿಲ್ 3 ರಿಂದ 9 ರವರೆಗೆ 80 ಕೇಸ್ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಒಂದೆಡೆ ರಾಜ್ಯದಲ್ಲಿ ನಿರಂತರವಾಗಿ ಕೊರೊನಾ ಕೇಸ್ ಏರಿಕೆಯಾಗ್ತಿದ್ದು ಇದರ ನಡುವೆ ಕಳೆದೊಂದು ತಿಂಗಳಿನಿಂದ ಡೇಂಜರ್ ಡೆಂಘೀ ಸವಾರಿ ಕೇಸ್ ಏರಿಕೆಯಾಗಿದೆ. ಇದು ಆರೋಗ್ಯ ಇಲಾಖೆಗೆ ಟೆನ್ಷನ್ ತಂದಿದೆ.
ಇನ್ನು ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಕೇಸ್ ಹೆಚ್ಚುತ್ತಿದ್ದು ಹೊರ ರೋಗಿಗಳ ವಿಭಾಗದಲ್ಲಿ ಶೇ 15-20 % ರಷ್ಟು ಏರಿಕೆ ಕಂಡಿದೆ. ಈ ಹಿನ್ನಲೆ ವೈದ್ಯರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದು ಗುಣಲಕ್ಷಣಗಳಿರುವರಿಗೆ ಟೆಸ್ಟಿಂಗ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆದಷ್ಟು ಶುಚಿತ್ವ ಕಾಪಾಡಿಕೊಳ್ಳುವ ಅಗತ್ಯವಿದೆ.
ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9 ಬೆಂಗಳೂರು
ಬೆಂಗಳೂರಿನ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:09 am, Sat, 29 April 23