ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಡಿವೋರ್ಸ್ ಆಗಿದೆ -ಕಟೀಲು

|

Updated on: Nov 25, 2019 | 12:29 PM

ಬೆಂಗಳೂರು: ಕುಟುಂಬ ರಾಜಕಾರಣ, ಅನೈತಿಕ ಮೈತ್ರಿಯಿಂದ ರಾಜ್ಯದಲ್ಲಿ ಜೆಡಿಎಸ್​-ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂತು. ಆದ್ರೆ ಕುಮಾರಸ್ವಾಮಿ ಫೈವ್​​ಸ್ಟಾರ್ ಹೋಟೆಲ್​ನಲ್ಲಿ ಮಲಗಿ ಆಡಳಿತ ನಡೆಸಿದ್ರು. ಸರ್ಕಾರಕ್ಕೆ ಸಮಸ್ಯೆ ಬಂದಾಗ ಅವರು ಆಸ್ಪತ್ರೆ ಸೇರಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಗುಡುಗಿದ್ದಾರೆ. ಇವರು ಅನರ್ಹರಲ್ಲ, ರಾಜ್ಯದ ಮುತ್ತುಗಳು:  ರಾಜ್ಯದಲ್ಲಿ ಮೈತ್ರಿ ಸರ್ಕಾರ ಮಲಗಿತ್ತು, ಇದರಿಂದ ಬೇಸತ್ತು 17 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರು ಅನರ್ಹರಲ್ಲ, ಅವರು ರಾಜ್ಯದ ಮುತ್ತುಗಳು ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಟಿ.ಸೋಮಶೇಖರ್ […]

ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಡಿವೋರ್ಸ್ ಆಗಿದೆ -ಕಟೀಲು
Follow us on

ಬೆಂಗಳೂರು: ಕುಟುಂಬ ರಾಜಕಾರಣ, ಅನೈತಿಕ ಮೈತ್ರಿಯಿಂದ ರಾಜ್ಯದಲ್ಲಿ ಜೆಡಿಎಸ್​-ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂತು. ಆದ್ರೆ ಕುಮಾರಸ್ವಾಮಿ ಫೈವ್​​ಸ್ಟಾರ್ ಹೋಟೆಲ್​ನಲ್ಲಿ ಮಲಗಿ ಆಡಳಿತ ನಡೆಸಿದ್ರು. ಸರ್ಕಾರಕ್ಕೆ ಸಮಸ್ಯೆ ಬಂದಾಗ ಅವರು ಆಸ್ಪತ್ರೆ ಸೇರಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಗುಡುಗಿದ್ದಾರೆ.

ಇವರು ಅನರ್ಹರಲ್ಲ, ರಾಜ್ಯದ ಮುತ್ತುಗಳು: 
ರಾಜ್ಯದಲ್ಲಿ ಮೈತ್ರಿ ಸರ್ಕಾರ ಮಲಗಿತ್ತು, ಇದರಿಂದ ಬೇಸತ್ತು 17 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರು ಅನರ್ಹರಲ್ಲ, ಅವರು ರಾಜ್ಯದ ಮುತ್ತುಗಳು ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಟಿ.ಸೋಮಶೇಖರ್ ಪರ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.

ನಮ್ಮಪ್ಪನಾಣೆ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ: 
ನಮ್ಮಪ್ಪನಾಣೆಗೂ ಹೆಚ್​ಡಿಕೆ ಸಿಎಂ ಆಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಈಗ ನಾನು ಇದೇ ಮಾತನ್ನ ಸಿದ್ದರಾಮಯ್ಯಗೆ ಹೇಳುತ್ತೇನೆ. ನಮ್ಮಪ್ಪನಾಣೆ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ. ಈಗ ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಡಿವೋರ್ಸ್ ಆಗಿದೆ. ಇವರಿಬ್ಬರು ಮತ್ತೆ ಒಂದಾಗಲ್ಲ. ಹೀಗಾಗಿ ಮೂರುವರೆ ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುತ್ತೆ ಎಂದು ನಳಿನ್​ ಕುಮಾರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದ್ರು.

Published On - 8:54 pm, Sun, 24 November 19