
ದೇಶದಲ್ಲಿ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಎಲ್ಲ ಕಡೆ ದೀಪ ಹಾಗೂ ಲೈಟಿಂಗ್ಗಳು ಜಗಮಗಿಸುತ್ತಿದೆ. ಆದರೆ ಇದರಲ್ಲಿ ಬೆಂಗಳೂರು ಯಾಕೋ ಮಂಕಾಗಿದೆ. ಹೇಗೆ ಎಂಬುದನ್ನು ಈ ವೈರಲ್ ಪೋಸ್ಟ್ ನೋಡಿದ್ರೆ ಗೊತ್ತಾಗುತ್ತದೆ. ದೀಪಾವಳಿ ಸಮಯದಲ್ಲಿ ದೆಹಲಿ (Delhi ) ಹಾಗೂ ಬೆಂಗಳೂರಿಗೂ (Bengaluru ) ಇರುವ ವ್ಯತ್ಯಾಸವನ್ನು ಇಲ್ಲಿ ಹೇಳಿದ್ದಾರೆ. ದೆಹಲಿ ದೀಪಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಹೊಳೆಯುತ್ತಿದೆ. ಆದರೆ ಬೆಂಗಳೂರು ಯಾಕೆ ಇಷ್ಟೊಂದು ಮಂಕಾಗಿದೆ. ಈ ಎರಡು ವ್ಯತ್ಯಾಸವನ್ನು ವಿಮಾನದಲ್ಲಿ ಪ್ರಯಾಣಿಸುವಾಗ ಚಿತ್ರೀಕರಿಸಲಾಗಿದೆ. ದೆಹಲಿ ಮತ್ತು ಬೆಂಗಳೂರಿನ ರಾತ್ರಿಯ ನೋಟ ಹೇಗಿದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ದೆಹಲಿ ತುಂಬಾ ಹೊಳೆಯುತ್ತಿದೆ. ಅಲಂಕಾರಿಕ ಬೆಳಕಿನಿಂದ ಪ್ರಕಾಶಮಾನವಾಗಿ ಬೆಳಗುತ್ತಿದೆ. ಆದರೆ ಬೆಂಗಳೂರು ಶಾಂತವಾಗಿರುವಂತೆ ತೋರುತ್ತಿದೆ. ಯಾವುದೇ ಬೆಳಕಿನಿಂದ ಹೊಳೆಯುತ್ತಿಲ್ಲ, ಎಲ್ಲವೂ ನೀರವ ಮೌನವಾಗಿದೆ. ಇದೀಗ ಈ ಪೋಸ್ಟ್ ಹಲವು ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರ ಹಬ್ಬದ ಸಮಯದಲ್ಲೂ ಇಷ್ಟೊಂದು ಶಾಂತವಾಗಿದೆ ಎಂಬ ಪ್ರಶ್ನೆಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಉತ್ತರಿಸಿದ್ದಾರೆ.
ಇದನ್ನೂ ಓದಿ: 20 ನಿಮಿಷಗಳಲ್ಲಿ 14 ಕಿ.ಮೀ ತಲುಪಿದೆ, ದೀಪಾವಳಿಯಿಂದ ಬೆಂಗಳೂರು ಖಾಲಿ ಖಾಲಿ ಎಂದ ಟೆಕ್ಕಿ
ದೆಹಲಿ ನನ್ನ ಹೃದಯ ಗೆದ್ದಿದೆ ಎಂಬ ಶೀರ್ಷಿಕೆಯನ್ನು ಈ ಪೋಸ್ಟ್ನಲ್ಲಿ ಹೇಳಲಾಗಿದೆ. ಈ ವಿಡಿಯೋ 3.1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ಹಲವು ಜನ ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರರು ಈ ವ್ಯತ್ಯಾಸಕ್ಕೆ ಭೌಗೋಳಿಕ ಕಾರಣ ಎಂದು ಹೇಳಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣವು ಮುಖ್ಯ ನಗರದಿಂದ ದೂರದಲ್ಲಿದೆ, ಆದರೆ ದೆಹಲಿಯ ವಿಮಾನ ನಿಲ್ದಾಣವು ಜನನಿಬಿಡ ಪ್ರದೇಶಗಳ ಪಕ್ಕದಲ್ಲಿದೆ. ದು ನೈಸರ್ಗಿಕವಾಗಿ ಪ್ರಕಾಶಮಾನವಾದ ವೈಮಾನಿಕ ನೋಟವನ್ನು ನೀಡುತ್ತದೆ ಎಂದು ಹಲವು ಜನ ಹೇಳಿದ್ದಾರೆ. ದೆಹಲಿಗೆ ಹಬ್ಬಗಳನ್ನು ಹೇಗೆ ಆಚರಣೆ ಮಾಡಬೇಕು ಎಂಬುದು ತಿಳಿದಿದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ದೀಪಾವಳಿಯಂದು ಸಹ ಬೆಂಗಳೂರು ಶಾಂತವಾಗಿರುತ್ತದೆ, ಅದು ನಮಗೆ ಇಷ್ಟ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಆಕಾಶದಿಂದ ದೆಹಲಿಯ ನೋಟವು ಮಾಂತ್ರಿಕವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Mon, 20 October 25