ಬೆಂಗಳೂರು: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಏಕಶಿಲಾ ಯೇಸು ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಡಿ. 25 ರಂದು ಕಾಂಗ್ರೆಸ್ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸ್ವಂತ ಹಣದಿಂದ ಜಮೀನು ಖರೀದಿಸಿ ಡಿಕೆಶಿ ಟ್ರಸ್ಟ್ಗೆ ನೀಡಿದ್ದಾರೆ. ಆದ್ರೆ ಇಲ್ಲಿ ಪ್ರತಿಮೆ ನಿರ್ಮಾಣವಾದ್ರೆ, ಮತಾಂತರ ನಡೆಯುತ್ತೆ ಎಂಬ ಭಾವನೆಯಿಂದ ಬಿಜೆಪಿ ನಾಯಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೊಟ್ಟ ಭರವಸೆ ಈಡೇರಿಸುವುದು ನನ್ನ ಕರ್ತವ್ಯ:
ಜೈಲಿನಲ್ಲಿದ್ದ ಕಾರಣ ಹಣ ನೀಡಲು ಆಗಿರಲಿಲ್ಲ:
ಯೇಸುಕ್ರಿಸ್ತನ ಪ್ರತಿಮೆಯನ್ನು ಸೇವಾಮನೋಭಾವದಿಂದ ಮಾಡುತ್ತಿದ್ದೇನೆ. ನನಗೆ ಯಾವುದೇ ರೀತಿಯ ಪ್ರಚಾರದ ಅವಶ್ಯಕತೆಯಿಲ್ಲ. ಈ ಹಿಂದೆಯೇ ನಾನು ಅವರಿಗೆ ಹಣ ನೀಡಬೇಕಾಗಿತ್ತು. ಆದ್ರೆ, ಜೈಲಿನಲ್ಲಿದ್ದ ಕಾರಣ ಹಣವನ್ನು ನೀಡುವುದಕ್ಕೆ ಆಗಿರಲಿಲ್ಲ. ಅದಕ್ಕೆ ಯಾವುದೇ ಪ್ರತಿಫಲ ಬಯಸದೆ ಭೂಮಿ ನೀಡಿದ್ದೇವೆ ಎಂದರು. ಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ ನಿರುದ್ಯೋಗಿಯಾಗಿದ್ದಾರೆ. ಪಾಪ ಅವರು ಅಂಬೇಡ್ಕರ್ ಅವರ ಪುಸ್ತಕವನ್ನು ಸುಡಬೇಕಾಗಿದೆ. ಅವರು ಏನೇನೋ ಮಾತನಾಡುತ್ತಾರೆ, ಅವರಿಗೆ ಒಳ್ಳೆಯದಾಗಲಿ ಎಂದು ಅನಂತಕುಮಾರ ಹೆಗಡೆ ಟ್ವೀಟ್ಗೆ ಡಿಕೆಶಿ ಟಾಂಗ್ ನೀಡಿದ್ದಾರೆ.
ಕ್ರೈಸ್ತರಾಗಿ ಮತಾಂತರ ಹೊಂದಿದವರಿಗೆ ಮಾತ್ರ @INCIndiaದಲ್ಲಿ ಇಟಲಿಯಮ್ಮ ಮಣೆ ಹಾಕುವುದು. ಈ ಸಂಪ್ರದಾಯ ಅರಿಯದ ಆ ಪಕ್ಷದ ಬಾಕಿ ನಾಯಕರು, ಈಗಲಾದರೂ ಆತ್ಮ-ಸಾಕ್ಷಿ ಇದ್ದಲ್ಲಿ ತಮ್ಮ ಗುಲಾಮಿ ಮನೋಭಾವವನ್ನು ತಿರಸ್ಕರಿಸಿ ಆ ಪಕ್ಷದ ವ್ಯವಸ್ಥೆಯನ್ನು ಧಿಕ್ಕರಿಸಿ ಹೊರ ಬರಲಿ! https://t.co/P3UkseF8Tu
— Anantkumar Hegde (@AnantkumarH) December 27, 2019
Published On - 12:42 pm, Fri, 27 December 19