ಸರ್ಕಾರಿ ಶಾಲಾ ಮಕ್ಕಳಿಗೆ ಸಿಗುತ್ತಾ ಗಂಧದಗುಡಿ ನೋಡುವ ಸೌಭಾಗ್ಯ? ಸಚಿವ ನಾಗೇಶ್‌ಗೆ ಚಕ್ರವರ್ತಿ ಸೂಲಿಬೆಲೆ ಮನವಿ

ಗಂಧದಗುಡಿ ಚಿತ್ರವನ್ನು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ಮಾಡವಂತೆ ಶಿಕ್ಷಣ ಸಚಿವ ನಾಗೇಶ್‌ಗೆ ಚಿಂತಕರು ಹಾಗೂ ಪೋಷಕರಿಂದ ಮನವಿ ಮಾಡಲಾಗಿದೆ. ಈ ಕುರಿತಾಗಿ ಟ್ವೀಟರ್​ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಯಾನ ಶುರು ಮಾಡಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೆ ಸಿಗುತ್ತಾ ಗಂಧದಗುಡಿ ನೋಡುವ ಸೌಭಾಗ್ಯ? ಸಚಿವ ನಾಗೇಶ್‌ಗೆ ಚಕ್ರವರ್ತಿ ಸೂಲಿಬೆಲೆ ಮನವಿ
ಚಿಂತಕ ಚಕ್ರವರ್ತಿ ಸೂಲಿಬೆಲೆ, ಗಂಧದಗುಡಿ ಫೋಸ್ಟರ್
Edited By:

Updated on: Oct 31, 2022 | 5:43 PM

ಬೆಂಗಳೂರು: ದಿ. ನಟ ಪುನೀತ್ ರಾಜ್​ಕುಮಾರ್​ ಕೊನೆಯ ಚಿತ್ರ ಗಂಧದಗುಡಿ (gandhada gudi) ಯನ್ನು ಸರ್ಕಾರಿ ಶಾಲೆಗಳಲ್ಲಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ಮಾಡವಂತೆ ಶಿಕ್ಷಣ ಸಚಿವ ನಾಗೇಶ್‌ಗೆ ಚಿಂತಕರು ಹಾಗೂ ಪೋಷಕರಿಂದ ಮನವಿ ಮಾಡಲಾಗಿದೆ. ಈ ಕುರಿತಾಗಿ ಟ್ವೀಟರ್​ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಯಾನ ಶುರು ಮಾಡಿದ್ದಾರೆ. ಭವಿಷ್ಯದ ಪೀಳಿಗೆಗೆ ಪ್ರಕೃತಿ, ವನ್ಯಜೀವಿಗಳ ಕುರಿತು ಆಸಕ್ತಿ ಹಾಗೂ ಪ್ರೀತಿ ಹುಟ್ಟಿಸುತ್ತದೆ. ಅದನ್ನೇಕೆ ಶಾಲಾ ಮಕ್ಕಳಿಗೆ ತೋರಿಸಬಾರದು ಎಂದು ಟ್ವೀಟ್ ಮಾಡಿದ್ದಾರೆ. ಸರ್ಕಾರವೇ ಎಲ್ಲ ಕಡೆ ಈ ಪ್ರಯತ್ನಕ್ಕೆ ಮುಂದಾದರೆ, ಪುನೀತ್‌ರ ನೆನಪು ಹಾಗೂ ಕಾಡಿನ ಮೇಲಿನ ಗೌರವ ಎರಡು ಶಾಶ್ವತವಾಗಿರುತ್ತೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಗಂಧದಗುಡಿ ಚಿತ್ರದ ಬಗ್ಗೆ ಶಿಕ್ಷಣ ಸಚಿವ ನಾಗೇಶ್‌ ಕೂಡ ಟ್ವೀಟ್​ ಮಾಡಿದ್ದು, ರಾಜ್ಯದ ರಮಣೀಯ ಪ್ರಕೃತಿ ಸೌಂದರ್ಯ, ವನ್ಯ ಮೃಗಗಳು, ನದಿ, ಸಮುದ್ರ, ಜಲಚರಗಳನ್ನು ಕಣ್ಮನ ತುಂಬುವಂತೆ ಚಿತ್ರಿಸಿ, ಮಹತ್ವದ ಸಂದೇಶವನ್ನು ನೀಡುವ ‘ಕರ್ನಾಟಕ ರತ್ನ’, ಯುವ ಜನತೆಯ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಪರಿಸರ ಪ್ರೀತಿಯ ‘ಗಂಧದಗುಡಿ’  ಬಿಡುಗಡೆಯಾಗಿದೆ. ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ವಿಭಿನ್ನವಾಗಿ ಪುನೀತ್ ಸ್ಮರಣೆ ಮಾಡುತ್ತಿರುವ ಮೈಸೂರಿನ ಅಭಿಮಾನಿ

ಇನ್ನು ಮೈಸೂರಿನ ಅಭಿಮಾನಿಗಳು ವಿಭಿನ್ನವಾಗಿ ಪುನೀತ್​ ಸ್ಮರಣೆ ಮಾಡುತ್ತಿದ್ದು, ನೆಚ್ಚಿನ ನಾಯಕ ನಟನಿಗಾಗಿ ಫಿಟ್​ನೆಸ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪುನೀತ್ ರಾಜ್​ಕುಮಾರ್​ ಸ್ಟೈಲ್​ನಲ್ಲಿ ವರ್ಕೌಟ್ ವಿಡಿಯೋ ವೈರಲ್ ಮಾಡಿದ್ದು,​ ಅಪ್ಪು ಮಾಡ್ತಿದ್ದ ವರ್ಕೌಟ್​ ದೇಹದ ಪ್ರತಿ ಭಾಗಕ್ಕೂ ಶಕ್ತಿ ನೀಡುತ್ತೆ. ಆದ್ದರಿಂದಲೇ ಅಪ್ಪು ಯಾವಾಗಲೂ ನಗುಮುಖದಿಂದ ಇರುತ್ತಿದ್ದರು. ಪ್ರತಿದಿನ ಎಲ್ಲರೂ ವ್ಯಾಯಾಮಮಾಡಿ ಖುಷಿಯಾಗಿರಿ ಎಂದು ಪುನೀತ್ ರಾಜ್​ಕುಮಾರ್​ ಅಭಿಮಾನಿ ಅಭಿಯಿಂದ ವಿಭಿನ್ನವಾಗಿ ಜಾಗೃತಿ ಮೂಡಿಸಲಾಯಿತು.

ನಾಳೆ ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ 

ನಾಳೆ ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ ಸೂಪರ್​ ಸ್ಟಾರ್ ರಜಿನಿಕಾಂತ್, ಟಾಲಿವುಡ್ ನಟ ಜ್ಯೂ.ಎನ್​ಟಿಆರ್, ಇನ್ಫೋಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ವಿಶೇಷ ಆಹ್ವಾನಿತರು. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಧಾನಸೌಧದ ಎದುರು ನಾಳೆ ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದ್ದು, ಸಂಜೆ 5ಕ್ಕೆ ‘ಕರ್ನಾಟಕ ರತ್ನ’ ಗೌರವವನ್ನು ಪುನೀತ್ ಪತ್ನಿ ಅಶ್ವಿನಿ ಸ್ವೀಕರಿಸಲಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ರಘುನಾಥ ಮಲ್ಕಾಪುರೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್​, ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ಅಶೋಕ್​, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್​ ಅರ್ಷದ್ ಭಾಗಿಯಾಗಲಿದ್ದಾರೆ. ಗಾಯಕ ವಿಜಯಪ್ರಕಾಶ್​ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:42 pm, Mon, 31 October 22