ಬೆಂಗಳೂರು: ಕೊರೊನಾ ಮರೆತು ಹಬ್ಬ ಆಚರಣೆ ಮಾಡಬೇಡಿ ಅಂತ ಕೊವಿಡ್ ಸಲಹಾ ಸಮಿತಿ ಅಧ್ಯಕ್ಷ ದೇವಿಶೆಟ್ಟಿ (Devi Shetty) ತಿಳಿಸಿದ್ದಾರೆ. ಕೊವಿಡ್ ಎರಡು ಮೂರು ವರ್ಷ ಇರುತ್ತದೆ. ಕೊವಿಡ್ ಇನ್ನು ಹೋಗಿಲ್ಲ ಎನ್ನುವುದನ್ನು ಮರೆಯಬಾರದು. ದೀಪಾವಳಿ ಹಬ್ಬವನ್ನು ಎಚ್ಚರದಿಂದ ಆಚರಣೆ ಮಾಡಿ. ಮಾಸ್ಕ್ ಹಾಕಿ. ಬಾಯಿ, ಮೂಗು ಮುಚ್ಚಿ ಸುರಕ್ಷತೆ ಕಾಪಾಡಿಕೊಳ್ಳಬೇಕು ಅಂತ ಬೊಮ್ಮಸಂದ್ರದ ಮಜುಂದಾರ್ ಷಾ ಆಸ್ಪತ್ರೆಯಲ್ಲಿ ಮಾತನಾಡಿದ ದೇವಿಶೆಟ್ಟಿ ರಾಜ್ಯದ ಜನರಿಗೆ ಸೂಚನೆ ನೀಡಿದ್ದಾರೆ.
ದೀಪಾವಳಿ ಹಬ್ಬವನ್ನು ಕೊರೊನಾ ಮರೆತು ಆಚರಣೆ ಮಾಡಬೇಡಿ. ಎಲ್ಲಾ ಕುಟುಂಬದವರು ಒಟ್ಟಾಗಿ ಹಬ್ಬ ಆಚರಣೆ ಮಾಡಿ. ಆದರೆ ಗುಂಪಾಗಿ ಸೇರಬೇಡಿ. ಮೂರನೆ ಅಲೆ ಎರಡನೇ ಅಲೆಯಷ್ಟು ಪ್ರಭಾವ ಬೀರುವ ಸಾಧ್ಯತೆ ಇಲ್ಲ. ವೈರಸ್ ಲಕ್ಷಣ ಬದಲಾವಣೆ ಮಾಡುತ್ತದೆ. ರೋಗಿ ಸತ್ತಾಗ ವೈರಸ್ ಸಾಯುತ್ತದೆ. ಹೊಸ ವೈರಸ್ ಹೇಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅಂತ ದೇವಿಶೆಟ್ಟಿ ತಿಳಿಸಿದ್ದಾರೆ.
ಶಾಲೆಯವರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಸಲಹಾ ಸಮಿತಿಯಲ್ಲಿ ಹಲವಾರು ಜನ ಸದಸ್ಯರಿದ್ದಾರೆ ಅವರೆಲ್ಲರ ಸೂಚನೆಗಳನ್ನ ಪಡೆದುಕೊಳ್ಳುತ್ತೇವೆ. ನಮ್ಮ ರಾಜ್ಯದಲ್ಲಿ ಹಲವಾರು ಜನ ತಜ್ಞರು ಇದ್ದಾರೆ. ಅವರ ಸಲಹೆ, ಸೂಚನೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತ ಕೊವಿಡ್ ಸಲಹಾ ಸಮಿತಿ ಅಧ್ಯಕ್ಷ ದೇವಿಶೆಟ್ಟಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ