ಬೆಂಗಳೂರಿನ ಎಲ್ಲಾ ಕಟ್ಟಡಗಳಿಗೆ ಬಿಬಿಎಂಪಿಯಿಂದ ನೋಟಿಸ್; ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧಾರ
ಬಿಬಿಎಂಪಿ ನೋಟೀಸ್ ಕೊಟ್ಟ ಏಳು ದಿನದೊಳಗೆ ಕಟ್ಟಡ ನಿರ್ಮಾಣಕ್ಕೆ ಪಡೆದ ಅನುಮತಿ ಪತ್ರ, ಓಸಿ, ಖಾತಾ ಸೇರಿದಂತೆ ಎಲ್ಲಾ ಮಾಹಿತಿಗಳ ದಾಖಲೆಯನ್ನು ಹತ್ತಿರದ ಬಿಬಿಎಂಪಿ ಕಚೇರಿಗೆ ಹೋಗಿ ನೀಡಬೇಕು ಎಂದು ಬಿಬಿಎಂಪಿ ತಿಳಿಸಿದೆ.
ಬೆಂಗಳೂರು: ನಗರದ ಎಲ್ಲಾ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ಈ ನೋಟಿಸ್ಗೆ ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಅಕ್ರಮ ಕಟ್ಟಡಗಳು, ಪ್ಲ್ಯಾನ್ ವೈಲೇಷನ್ ಮಾಡಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಲು ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಲ್ಲಿ ಒಟ್ಟು 23 ಲಕ್ಷ ಕಟ್ಟಡಗಳಿವೆ. ಇದರಲ್ಲಿ ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಕಟ್ಟಡಗಳಿಗೂ ಬಿಬಿಎಂಪಿ ನೋಟಿಸ್ ನೀಡಿದೆ.
ಬಿಬಿಎಂಪಿ ನೋಟೀಸ್ ಕೊಟ್ಟ ಏಳು ದಿನದೊಳಗೆ ಕಟ್ಟಡ ನಿರ್ಮಾಣಕ್ಕೆ ಪಡೆದ ಅನುಮತಿ ಪತ್ರ, ಓಸಿ, ಖಾತಾ ಸೇರಿದಂತೆ ಎಲ್ಲಾ ಮಾಹಿತಿಗಳ ದಾಖಲೆಯನ್ನು ಹತ್ತಿರದ ಬಿಬಿಎಂಪಿ ಕಚೇರಿಗೆ ಹೋಗಿ ನೀಡಬೇಕು ಎಂದು ಬಿಬಿಎಂಪಿ ತಿಳಿಸಿದೆ. ಮಾಹಿತಿ ನೀಡದೆ ಹೋದರೆ ಕಟ್ಟಡಗಳ ವಿರುದ್ಧ, ಅವಶ್ಯಕತೆ ಬಿದ್ದಲ್ಲಿ ತೆರವು ಕಾರ್ಯಚರಣೆ ಆರಂಭವಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆ ಮೂಲಕ ಬೆಂಗಳೂರಿನ ಎಲ್ಲಾ ಕಟ್ಟಡಗಳಿಗೂ ನೋಟೀಸ್ ಕೊಟ್ಟ ಇತಿಹಾಸವನ್ನು ಬಿಬಿಎಂಪಿ ಸೃಷ್ಟಿಸಲಿದೆ. ರಾಜಕಾರಣಿಗಳು, ಸ್ಟಾರ್ ನಟರು ಸೇರಿದಂತೆ ಬೆಂಗಳೂರಿನ ಎಲ್ಲಾ ಕಟ್ಟಡಗಳಿಗೂ ನೋಟೀಸ್ ನೀಡಲು ಯೋಜನೆ ಮಾಡಲಾಗಿದೆ. ಕಟ್ಟಡಗಳ ನಿಖರ ಮಾಹಿತಿ ಪಡೆಯಲು ಬಿಬಿಎಂಪಿ ನೋಟೀಸ್ ಅಸ್ತ್ರ ಪ್ರಯೋಗಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಗೌರವ್ ಗುಪ್ತಾ; ಬಿಬಿಎಂಪಿ ಮುಖ್ಯ ಆಯುಕ್ತರ ನಡೆಗೆ ಹೈಕೋರ್ಟ್ ಅಸಮಾಧಾನ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ತೆರವು ವಿಚಾರವಾಗಿ ಹೈಕೋರ್ಟ್ ಬಿಬಿಎಂಪಿ ಮುಖ್ಯ ಆಯುಕ್ತರ ಖುದ್ದು ಹಾಜರಿಗೆ ಸೂಚನೆ ನೀಡಿತ್ತು. ಆದರೆ ಖುದ್ದು ಹಾಜರಾಗುವ ಬದಲು ವಕೀಲರ ಕಚೇರಿಯಲ್ಲಿ ಗೌರವ್ ಗುಪ್ತಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಕೀಲರ ಕಚೇರಿಯಲ್ಲಿ ಹಾಜರಾಗಿದ್ದನ್ನು ಒಪ್ಪಲು ಸಾಧ್ಯವಿಲ್ಲ. ಅಕ್ರಮ ಕಟ್ಟಡ ತೆರವು ಆದೇಶಗಳನ್ನೂ ಪಾಲಿಸಿಲ್ಲ. ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಕೊಳ್ಳುವ ಎಚ್ಚರಿಕೆ ನೀಡಿದೆ. ಹೀಗಾಗಿ ಇಂದೇ ಖುದ್ದು ಹಾಜರಿಗೆ ಅವಕಾಶಕ್ಕೆ ಹೈಕೋರ್ಟ್ಗೆ ಬಿಬಿಎಂಪಿ ಮುಖ್ಯ ಆಯುಕ್ತರ ಪರ ವಕೀಲರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಕ್ಕಳಿಂದ ಭಿಕ್ಷಾಟನೆ: ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಅನಧಿಕೃತ ಕಟ್ಟಡಗಳ ತೆರವು ವಿಚಾರ; ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ
Published On - 10:21 am, Wed, 27 October 21