ಧಾರ್ಮಿಕ ದತ್ತಿ ಇಲಾಖೆ ಆದೇಶಕ್ಕೆ ಡೋಂಟ್ ಕೇರ್; ಆದೇಶ ಮಾಡಿ 5 ತಿಂಗಳು ಕಳೆದರೂ ತಸ್ತೀಕ್ ನೀಡದ ವಕ್ಫ್ ಇಲಾಖೆ
ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ನೇರವಾಗಿ ವಕ್ಫ್ ಇಲಾಖೆ ಹಣ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಈವರೆಗೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಜಾರಿಯಾಗಿಲ್ಲ. ಆದೇಶ ಮಾಡಿ 5 ತಿಂಗಳು ಕಳೆದರು ವಕ್ಫ್ ಇಲಾಖೆ ಪಾಲನೆ ಮಾಡುತ್ತಿಲ್ಲ.
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ಹಣ ಹಿಂದೂ ದೇವಸ್ಥಾನಗಳಿಗೆ ಮಾತ್ರ ಮೀಸಲು ಎಂಬ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರದ ಅನುಷ್ಟಾನದಿಂದ ಹಿಂದೂಯೇತರ ಧಾರ್ಮಿಕ ಕೇಂದ್ರಗಳು ಕಂಗಾಲಾಗಿವೆ. ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ನೀಡುತ್ತಿದ್ದ ತಸ್ತೀಕ್‌ಗೆ ಕೊಕ್ಕೆ ನೀಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಪ್ರತಿ ವರ್ಷ ನೀಡಲಾಗುತ್ತಿದ್ದ 48,000 ರೂ. ಹಣವನ್ನು ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ನೀಡಬಾರದು ಎಂಬ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಹಿಂದೂಯೇತರ ಧಾರ್ಮಿಕ ಕೇಂದ್ರಗಳ ತಸ್ತೀಕ್‌ಗೆ ಜೂನ್ ನಿಂದಲೇ ಕತ್ತರಿ ಹಾಕಲಾಗಿದೆ. ಮಸೀದಿ, ದರ್ಗಾಗಳಿಗೆ ನೀಡಲಾಗುತ್ತಿದ್ದ ಧಾರ್ಮಿಕ ದತ್ತಿ ಇಲಾಖೆ ಹಣ ಜೂನ್ ನಿಂದಲೇ ಸ್ಥಗಿತಗೊಂಡಿದೆ.
ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ನೇರವಾಗಿ ವಕ್ಫ್ ಇಲಾಖೆ ಹಣ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಈವರೆಗೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಜಾರಿಯಾಗಿಲ್ಲ. ಆದೇಶ ಮಾಡಿ 5 ತಿಂಗಳು ಕಳೆದರು ವಕ್ಫ್ ಇಲಾಖೆ ಪಾಲನೆ ಮಾಡುತ್ತಿಲ್ಲ. ಕಳೆದ ಐದು ತಿಂಗಳಿಂದ ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ಹಣ ಸಿಕ್ಕಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ತಸ್ತೀಕ್ ಹೆಚ್ಚಳ ಮಾಡಲಾಗಿತ್ತು.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಣ ಅನ್ಯ ಪ್ರಾರ್ಥನಾ ಕೇಂದ್ರಗಳ ಬಳಕೆಗೆ ತಡೆಯೊಡ್ಡಿ ಆದೇಶ ಕಳೆದ ಐದು ತಿಂಗಳ ಹಿಂದೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಹಣವನ್ನು ಅನ್ಯ ಪ್ರಾರ್ಥನಾ ಕೇಂದ್ರಗಳ ಬಳಕೆಗೆ ತಡೆ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ತಸ್ತೀಕ್ ಮತ್ತು ವರ್ಷಾಸನ ಅನುದಾನವನ್ನು ಹಿಂದೂಯೇತರ ಸಂಸ್ಥೆಗಳಿಗೆ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯವ್ಯಯದಲ್ಲಿಯೇ ಪ್ರತಿವರ್ಷ ಬಿಡುಗಡೆ ಮಾಡುತ್ತಿರುವುದಕ್ಕೆ ರಾಜ್ಯ ಮತ್ತು ಧಾರ್ಮಿಕ ಪರಿಷತ್ನ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಹಿಂದೂಯೇತರ ಸಂಸ್ಥೆಗಳಿಗೆ ಅನುದಾನವನ್ನು ಸಂಬಂಧಿಸಿದ ಹಿಂದುಳಿದ ವರ್ಗಗಳ ಅಥವಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮುಖಾಂತರವೇ ಮಂಜೂರು ಮಾಡಲು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಹೀಗಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಮೂಲಕ ರಾಜ್ಯದ ಹಿಂದೂಯೇತರ ಸಂಸ್ಥೆಗಳಿಗೆ ಮಂಜೂರು ಮಾಡುತ್ತಿರುವ ತಸ್ತೀಕ್, ವರ್ಷಾಸನ ಹಾಗೂ ಇತರೇ ಅನುದಾನವನ್ನು ತಕ್ಷಣದಿಂದಲೇ ತಡೆ ಹಿಡಿಯುವಂತೆ ಆದೇಶಿಸಲಾಗಿತ್ತು.
ಇದನ್ನೂ ಓದಿ: ಹಿಂದೂ ದೇಗುಲಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ ತಡೆಹಿಡಿಯಲು ಕೋಟ ಶ್ರೀನಿವಾಸ ಪೂಜಾರಿ ಆದೇಶ