ಹಿಂದೂ ದೇಗುಲಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ ತಡೆಹಿಡಿಯಲು ಕೋಟ ಶ್ರೀನಿವಾಸ ಪೂಜಾರಿ ಆದೇಶ
ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾ ಇಲಾಖೆಯ ಜವಾಬ್ದಾರಿಯಲ್ಲಿ ಹಣ ಬಿಡುಗಡೆಗೆ ಕ್ರಮಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
ಬೆಂಗಳೂರು: ಹಿಂದೂ ದೇಗುಲಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ ಆಗುತ್ತಿರುವುದು. ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ತಡೆಹಿಡಿಯಲು ಸೂಚನೆ ನೀಡಲಾಗಿದೆ. ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮಾದಾಯ ದತ್ತಿ ಇಲಾಖೆ ಹಣವು ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಲುಪಿದ್ದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
ತಸ್ತೀಕ್ ರೂಪದಲ್ಲಿ ಅನ್ಯಧರ್ಮದ ಕೇಂದ್ರಗಳಿಗೆ ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮಾದಾಯ ದತ್ತಿ ಇಲಾಖೆ ಹಣ ತಲುಪಿತ್ತು. ಇದಕ್ಕೆ ಹಿಂದೂ ಧಾರ್ಮಿಕ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಿಂದೂ ಧರ್ಮವನ್ನ ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಅನುದಾನ ಬಳಸುತ್ತಿರುವುದನ್ನು ತಡೆಹಿಡಿಯುವಂತೆ ಸೂಚನೆ ನೀಡಲಾಗಿತ್ತು.
ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾ ಇಲಾಖೆಯ ಜವಾಬ್ದಾರಿಯಲ್ಲಿ ಹಣ ಬಿಡುಗಡೆಗೆ ಕ್ರಮಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ಯೆ ಆರೋಪ ವ್ಯಕ್ತವಾಗಿತ್ತು. ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಆರೋಪ ನೀಡಲಾಗಿತ್ತು. ಇತರೆ ಧಾರ್ಮಿಕ ಕೇಂದ್ರಗಳಿಗೆ ಹಣವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ವಿರೋಧ ವ್ಯಕ್ತವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 41 ಮಸೀದಿಗಳು, ಮದರಸಾಗಳ ಮೌಲ್ವಿಗಳಿಗೂ ತಸ್ತಿಕ್ ನೀಡಲು ಆದೇಶ ಕೊಡಲಾಗಿತ್ತು. ಈ ಆದೇಶ ಹಿಂಪಡೆಯಲು ಕೋಟ ಶ್ರೀನಿವಾಸ ಪೂಜಾರಿಗೆ ಮನವಿ ಮಾಡಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ವಿಹೆಚ್ಪಿಯಿಂದ ಮನವಿ ಮಾಡಿದ್ದರು. ಸರ್ಕಾರದ ಆದೇಶ ಕರಾವಳಿಯಲ್ಲಿ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಕಾರಣಿಕ ದೈವ ಕೊರಗಜ್ಜನಿಗೆ ಖಾಸಿಂ ಸಾಹೇಬರ ಪೂಜೆ; 19 ವರ್ಷಗಳಿಂದ ಧಾರ್ಮಿಕ ಸಾಮರಸ್ಯ ಮೆರೆದ ಕೇರಳ ಮೂಲದ ವ್ಯಕ್ತಿ
ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಕೊವಿಡ್ ವಾರಿಯರ್ಗಳೆಂದು ಪರಿಗಣಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ
Published On - 11:46 pm, Wed, 9 June 21