Vasista Credit Cooperative Society: ವಸಿಷ್ಠ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ -ಡಾ.ಶಂಕರ್ ಗುಹಾ ಒತ್ತಾಯ

ಸರ್ಕಾರ ತಕ್ಷಣವೇ ಬ್ಯಾಂಕ್ ಸೂಪರ್ ಸೀಡ್ ಮಾಡಬೇಕು. ಇಂಡಿಪೆಂಡೆಂಟ್ ಸಂಸ್ಥೆಯಿಂದ ವಸಿಷ್ಠ ಸೊಸೈಟಿ ಆಡಿಟ್ ಮಾಡಿಸಬೇಕು ಮತ್ತು ಸಿಬಿಐ ತನಿಖೆ ಆಗಬೇಕು ಎಂದು ಡಾ.ಶಂಕರ್ ಗುಹಾ ಒತ್ತಾಯಿಸಿದ್ದಾರೆ.

Vasista Credit Cooperative Society: ವಸಿಷ್ಠ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ -ಡಾ.ಶಂಕರ್ ಗುಹಾ ಒತ್ತಾಯ
ವಂಚನೆಗೆ ಒಳಗಾದ ಹೂಡಿಕೆದಾರರು ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ
Updated By: ಆಯೇಷಾ ಬಾನು

Updated on: Oct 07, 2021 | 3:49 PM

ಬೆಂಗಳೂರು: ವಸಿಷ್ಠ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ವಂಚನೆ ಪ್ರಕರಣ ಬೆಳಕಿಗೆ ಬಂದು ಸುಮಾರು 6 ತಿಂಗಳಾಯಿತು. ಆದ್ರೆ ಇದುವರೆಗೂ ಯಾವುದೇ ರೀತಿಯ ಪರಿಹಾರ ಸಿಕಿಲ್ಲ. ಈ ಹಿನ್ನೆಲೆಯಲ್ಲಿ ವಂಚನೆಗೆ ಒಳಗಾದ ಹೂಡಿಕೆದಾರರು ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ್ ಗುಹಾ ದ್ವಾರಕನಾಥ್, ಸರ್ಕಾರ ತಕ್ಷಣವೇ ಬ್ಯಾಂಕ್ ಸೂಪರ್ ಸೀಡ್ ಮಾಡಬೇಕು. ಇಂಡಿಪೆಂಡೆಂಟ್ ಸಂಸ್ಥೆಯಿಂದ ವಸಿಷ್ಠ ಸೊಸೈಟಿ ಆಡಿಟ್ ಮಾಡಿಸಬೇಕು ಮತ್ತು ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸೊಸೈಟಿಯಲ್ಲಿ ಠೇವಣಿ ಇಟ್ಟವರಲ್ಲಿ ಬಹುತೇಕರು 70 ವರ್ಷ ಮೇಲ್ಪಟ್ಟವರು. ತಮ್ಮ ಹಣ ವಾಪಸ್‌ ಪಡೆಯಲಾಗದೆ ನಾವು ತೀವ್ರ ಸಂಕಷ್ಟಕ್ಕೆ ಈಡಾಗಿದ್ದೇವೆ. ವಸಿಷ್ಠ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿದೆ. ಬ್ಯಾಂಕ್ನ ಅಧ್ಯಕ್ಷರೇ ತಮ್ಮ ಕುಟುಂಬಕ್ಕೆ 100 ಕೋಟಿಗೂ ಹೆಚ್ಚಿನ ಸಾಲ ನೀಡಲಾಗಿದೆ. ಬ್ಯಾಂಕ್ ಅಧ್ಯಕ್ಷರ ಮಗನ ಹೆಸರಲ್ಲೇ ಅನೇಕ ರೀತಿಯ ಲೋನ್ ಗಳನ್ನ ನೀಡಲಾಗಿದೆ. ನೂರಾರು ಕೋಟಿ ಲೋನ್ ನೀಡಿದ್ರು, ಯಾವುದೇ ದಾಖಲೆಗಳನ್ನು ಪಡೆದಿಲ್ಲ. ಹನುಮಂತ ನಗರ ಬ್ಯಾಂಕ್ ಕಟ್ಟಡದಲ್ಲೆ ಇರೋ ಚಿಕ್ಕ ಪ್ರಿಂಟಿಂಗ್ ಕಚೇರಿಗೆ ಸುಮಾರು 37 ಕೋಟಿ ಲೋನ್ ನೀಡಲಾಗಿದೆ ಎಂದು ಆರೋಪಿಸದ್ದಾರೆ.

ಸುಮಾರು 450 ಕೋಟಿ ರೂಪಾಯಿಯ ಈ ಹಗರಣಕ್ಕೆ ದಿನಾಂಕ 30/9/2021 ರಂದು ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿಯವರಿಂದ ಸೊಸೈಟಿಯ ಅಧ್ಯಕ್ಷರನ್ನು ಸೇರಿಸಿ ವ್ಯವಸ್ಥಾಪಕ ಮಂಡಳಿಯ ಎಲ್ಲಾ ಸದಸ್ಯರಿಗೂ ನೋಟಿಸ್ ಜಾರಿಗೊಳಿಸಲಾಗಿದೆ.

ಈ ನೋಟಿಸಿನ ಸೆಕ್ಷನ್ ನಂ .21 ರಲ್ಲಿ ಉಲ್ಲೇಖಿಸಿರುವಂತೆ ಕೋಟ್ಯಂತರ ರೂಪಾಯಿಗಳ ಸಾಲದ ಖಾತೆಗಳು ಸಾಲಗಾರ ಅರ್ಜಿಯು ಇಲ್ಲದೆ ಸಾಲ ನೀಡುವುದು, ಸಾಲಗಾರರ ಆಸ್ತಿಯು ಸಹಕಾರಿಯ ಹೆಸರಿಗೆ ಎಂ.ಟಿ.ಡಿ ಆಧಾರವಾಗದೇ ಸಾಲ ನೀಡುವುದು. ಯಾವುದೇ ದಾಖಲಾತಿಗಳಿಲ್ಲದೆ ಸಾಲ ನೀಡಿರುವುದು ವ್ಯವಸ್ಥಾಪಕ ಮಂಡಳಿಯ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಶಂಕರ್ ಗುಹಾ ವಿವರಿಸಿದ್ರು.

ಇದನ್ನೂ ಓದಿ: ‘ಆ​​ ದೃಶ್ಯಕ್ಕಾಗಿ ನಾನು ತುಂಬಾ ಟೇಕ್​ ತೆಗೆದುಕೊಂಡಿದ್ದೆ’; ಧನ್ಯಾ ರಾಮ್​ಕುಮಾರ್​