ಆನೇಕಲ್: ಜಪ್ತಿ ಮಾಡಿದ ಲಾರಿಯಲ್ಲಿ ಮಲಗಿದ್ದ ಚಾಲಕ ಅನುಮಾನಾಸ್ಪದ‌ ಸಾವು

| Updated By: Rakesh Nayak Manchi

Updated on: Jan 16, 2024 | 5:38 PM

ಎಲೆಕ್ಟ್ರಾನಿಕ್ ಸಿಟಿ ಬಳಿ ಆರ್​ಟಿಒ ಅಧಿಕಾರಿಗಳು ಡಾಕ್ಯೂಮೆಂಟ್ಸ್ ಲ್ಯಾಪ್ಸ್ ಹಿನ್ನೆಲೆ ಲಾರಿಯೊಂದನ್ನು ಜಪ್ತಿ ಮಾಡಿದ್ದರು. ಈ ಲಾರಿಯನ್ನು ಎಲೆಕ್ಟ್ರಾನಿಕ್ ಆರ್​ಟಿಒ ಕಚೇರಿ ಆವರಣದಲ್ಲಿ ಇಡಲಾಗಿತ್ತು. ಈ ಬಗ್ಗೆ ಬೆಳಗ್ಗೆ ವಿಚಾರಿಸೋಣ ಎಂದು ಮಾಲೀಕ ಹೇಳಿದ್ದರಿಂದ ಇದೇ ಲಾರಿಯಲ್ಲಿ ಚಾಲಕ ಮಲಗಿದ್ದರು. ಆದರೆ, ಬೆಳಗ್ಗೆ ನೋಡುವಾಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಆನೇಕಲ್: ಜಪ್ತಿ ಮಾಡಿದ ಲಾರಿಯಲ್ಲಿ ಮಲಗಿದ್ದ ಚಾಲಕ ಅನುಮಾನಾಸ್ಪದ‌ ಸಾವು
ಎಲೆಕ್ಟ್ರೋನಿಕ್ ಸಿಟಿ RTO ಅಧಿಕಾರಿಗಳು ಜಪ್ತಿ ಮಾಡಿದ ಲಾರಿಯಲ್ಲಿ ಮಲಗಿದ್ದ ಚಾಲಕ ಅನುಮಾನಾಸ್ಪದ‌ ಸಾವು
Follow us on

ಆನೇಕಲ್, ಜ.16: ಜಪ್ತಿ ಮಾಡಿ ಕಚೇರಿ ಆವರಣದಲ್ಲಿ ಇಟ್ಟಿದ್ದ ಲಾರಿಯಲ್ಲಿ ಮಲಗಿದ್ದ ಚಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಬಳಿಯ ಹುಸ್ಕೂರಿನಲ್ಲಿರುವ ಆರ್​ಟಿಒ (RTO) ಕಚೇರಿಯಲ್ಲಿ ನಡೆದಿದೆ. ವಸಂತ್ ಕುಮಾರ್ ಮೃತಪಟ್ಟ ಚಾಲಕ.

ಜನವರಿ 9 ರಂದು ಪೀಣ್ಯ 2ನೇ ಹಂತದಿಂದ ವಸಂತ್ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿ ಬಳಿ ಆರ್​ಟಿಒ ಅಧಿಕಾರಿಗಳು ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಡಾಕ್ಯೂಮೆಂಟ್ಸ್ ಲ್ಯಾಪ್ಸ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ ಇನ್​ಸ್ಪೆಕ್ಟರ್ ಮತ್ತು ಸಿಬ್ಬಂದಿ ಲಾರಿಯನ್ನು ಜಪ್ತಿ ಮಾಡಿ ಎಲೆಕ್ಟ್ರಾನಿಕ್ ಸಿಟಿ ಆರ್​ಟಿಒ ಕಚೇರಿಯಲ್ಲಿಟ್ಟಿದ್ದರು.

ಇದನ್ನೂ ಓದಿ: ಆಸ್ಕರ್ ವಿಜೇತ ‘ಪ್ಯಾರಸೈಟ್’ ಸಿನಿಮಾದ ನಟ ಅನುಮಾನಾಸ್ಪದ ಸಾವು

ಲಾರಿ ಜಪ್ತಿ ಮಾಡಿದ ಬಗ್ಗೆ ಚಾಲಕ ವಸಂತ್ ತನ್ನ ಮಾಲೀಕನಿಗೆ ಮಾಹಿತಿ‌ ನೀಡಿದ್ದಾರೆ. ಈ ವೇಳೆ, ಬೆಳಗ್ಗೆ ನೋಡಿಕೊಳ್ಳೋಣ ಎಂದು ಹೇಳಿದ್ದರು. ಹೀಗಾಗಿ ರಾತ್ರಿ ವಸಂತ್ ಜಪ್ತಿ ಮಾಡಿದ್ದ ಲಾರಿಯಲ್ಲೇ ಮಲಗಿದ್ದರು. ಬೆಳಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂದು ಆರ್​ಟಿಒ ಸಿಬ್ಬಂದಿ ದೂರು ನೀಡಿದ್ದು, ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಯುಡಿಆರ್ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Tue, 16 January 24