ಆಸ್ಕರ್ ವಿಜೇತ ‘ಪ್ಯಾರಸೈಟ್’ ಸಿನಿಮಾದ ನಟ ಅನುಮಾನಾಸ್ಪದ ಸಾವು
Lee Sun-kyu: ಆಸ್ಕರ್ ವಿಜೇತ ‘ಪ್ಯಾರಸೈಟ್’ ಸಿನಿಮಾದ ನಟ ಲೀ ಸನ್ ಕ್ಯೂನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಅತ್ಯುತ್ತಮ ಸಿನಿಮಾ, ಅತ್ಯುತ್ತಮ ವಿದೇಶಿ ಸಿನಿಮಾ, ಅತ್ಯುತ್ತಮ ಚಿತ್ರಕತೆ, ಅತ್ಯುತ್ತಮ ನಿರ್ದೇಶಕ ವಿಭಾಗಗಳಲ್ಲಿ ಆಸ್ಕರ್ (2020)(Oscar) ಗೆದ್ದಿದ್ದ ಕೊರಿಯನ್ ಸಿನಿಮಾ ‘ಪ್ಯಾರಸೈಟ್’ನಲ್ಲಿ ನಟಿಸಿದ್ದ ದಕ್ಷಿಣ ಕೊರಿಯಾದ ನಟ ಲೀ ಸನ್ ಕ್ಯೂನ್ (Lee Sun-kyun) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ಅವರು ಮಾದಕ ವಸ್ತು ಸೇವನೆ ಆರೋಪಕ್ಕೆ ಒಳಗಾಗಿದ್ದು, ಹಲವು ತಿಂಗಳಿನಿಂದ ವಿಚಾರಣೆ ಎದುರಿಸುತ್ತಿದ್ದರು. ಇದರ ನಡುವೆಯೇ ಅವರು ಸಾವನ್ನಪ್ಪಿರುವುದು ಅನುಮಾನಗಳಿಗೆ ಕಾರಣವಾಗಿದೆ.
ವರದಿಗಳ ಪ್ರಕಾರ ಲೀ ಸನ್ ಕ್ಯೂನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅನುಮಾನಿಸಲಾಗುತ್ತಿದೆ. ಲೀ ಸನ್ ಕ್ಯೂನ್ ತಮ್ಮ ನಿವಾಸದಲ್ಲಿ ನೋಟ್ ಒಂದನ್ನು ಬರೆದಿಟ್ಟು ಕಾರಿನಲ್ಲಿ ತೆರಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಲೀ ಸನ್ ಕ್ಯೂನ್ ವಿರುದ್ಧ ಮಾದಕ ವಸ್ತು ಸೇವನೆ ಪ್ರಕರಣ ದಾಖಲಿಸಲಾಗಿತ್ತು. ಸಿಯೋಲ್ನ ಬಾರ್ ಒಂದರಲ್ಲಿ ವೇಯಟರ್ ಜೊತೆ ಮಾದಕ ವಸ್ತು ಸೇವಿಸಿದ್ದಾರೆ ಎನ್ನಲಾಗಿತ್ತು. ಆದರೆ ತಾವು ಮಾದಕ ವಸ್ತು ಸೇವಿಸಿಲ್ಲವೆಂದು ಲೀ ಸನ್ ಕ್ಯೂನ್ ಹೇಳಿದ್ದರು. ಬಾರ್ನ ವೇಟ್ರೆಸ್ ನೀಡಿದ ಡ್ರಿಂಕ್ಸ್ ಸೇವಿಸಿದೆ, ಅದು ಮಾದಕ ವಸ್ತು ಎಂಬುದು ನನಗೆ ಗೊತ್ತಿರಲಿಲ್ಲ ಎಂದಿದ್ದರು. ಆದರೆ ಆ ಮಹಿಳೆಯರು, ಲೀ ನನ್ನ ನಿವಾಸಕ್ಕೆ ಬಂದು ಹಲವು ಬಾರಿ ಗಾಂಜಾ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:Toxic: ಆಸ್ಕರ್ ಪ್ರಶಸ್ತಿ ಮೇಲೆ ಯಶ್ ಕಣ್ಣು? ‘ಟಾಕ್ಸಿಕ್’ ಸಿನಿಮಾ ಹಿಂದಿನ ಲೆಕ್ಕಾಚಾರ ಹೀಗಿದೆ..
ಆದರೆ ಮಹಿಳೆಯರ ಆರೋಪಗಳನ್ನು ತಳ್ಳಿ ಹಾಕಿದ್ದ ಲೀ, ನಾನು ಮಂಪರು ಪರೀಕ್ಷೆಗೆ ಸಿದ್ಧ ಎಂದು ಹೇಳಿದ್ದರು. ಲೀಯ ಮಾದಕ ವಸ್ತು ಸೇವನಾ ಪರೀಕ್ಷೆಯನ್ನು ನಡೆಸಲಾಗಿ ಅದರಲ್ಲಿ ನಿರ್ದಿಷ್ಟ ಫಲಿತಾಂಶ ಬಂದಿರಲಿಲ್ಲ. ಹಾಗಾಗಿ ಲೀ ಅನ್ನು ವಿಚಾರಣೆ ಮಾಡಲಾಗುತ್ತಿತ್ತು. ಮೂರು ಬಾರಿ ಲೀ ಅನ್ನು ವಿಚಾರಣೆ ಮಾಡಲಾಗಿತ್ತು. ಸಾಯುವ 19 ಗಂಟೆ ಮುಂಚೆ ಸಹ ಲೀ ವಿಚಾರಣೆ ಎದುರಿಸಿದ್ದರು.
ಲೀ ಸಾವಿನ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಇಲಾಖೆ, ‘‘ತನಿಖೆಯ ನಡುವೆ ಲೀ ಸಾವನ್ನಪ್ಪಿರುವುದು ಖೇದಕರ, ಆದರೆ ಅವರ ಒಪ್ಪಿಗೆ ಪಡೆದುಕೊಂಡೇ ನಾವು ಅವರನ್ನು ವಿಚಾರಣೆಗೆ ಒಳಪಡಿಸಿದ್ದೆವು’’ ಎಂದಿದ್ದಾರೆ. ಆದರೆ ಲೀ ಸಾವಿನ ಬಳಿಕ ಪೊಲೀಸರ ಬಗ್ಗೆ ಟೀಕೆಗಳು ಎದ್ದಿವೆ. ‘ಸೆಲೆಬ್ರಿಟಿಗಳು ಸಹ ಮನುಷ್ಯರೆ’ ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ