AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

96th Oscars Shortlist: ಆಸ್ಕರ್​ ರೇಸ್​ನಿಂದ ಹೊರಬಿದ್ದ ಭಾರತದ ‘2018’ ಸಿನಿಮಾ; ಮತ್ತೆ ನಿರಾಸೆ

ಕೇರಳದಲ್ಲಿ 2018ರಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಆಧರಿಸಿ ನಿರ್ಮಾಣವಾದ ‘2018’ ಸಿನಿಮಾದಲ್ಲಿ ಟೊವಿನೋ ಥಾಮಸ್​ ನಟಿಸಿದ್ದಾರೆ. ಜೂಡ್​ ಆ್ಯಂಟನಿ ಜೋಸೆಫ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆಸ್ಕರ್​ ಸ್ಪರ್ಧೆಯ ‘ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್​’ ವಿಭಾಗಕ್ಕೆ ಆಯ್ಕೆಯಾಗಲು ಈ ಚಿತ್ರ ವಿಫಲವಾಗಿದೆ.

96th Oscars Shortlist: ಆಸ್ಕರ್​ ರೇಸ್​ನಿಂದ ಹೊರಬಿದ್ದ ಭಾರತದ ‘2018’ ಸಿನಿಮಾ; ಮತ್ತೆ ನಿರಾಸೆ
2018 ಸಿನಿಮಾ
ಮದನ್​ ಕುಮಾರ್​
|

Updated on: Dec 22, 2023 | 11:12 AM

Share

96ನೇ ಆಸ್ಕರ್​ ಪ್ರಶಸ್ತಿ (96th Oscar Awards) ಕಣಕ್ಕೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದ್ದ ‘2018’ ಸಿನಿಮಾ ನಿರಾಸೆ ಮೂಡಿಸಿದೆ. ಮಲಯಾಳಂ ಭಾಷೆಯ ಈ ಸಿನಿಮಾವನ್ನು ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ ವತಿಯಿಂದ ಆಯ್ಕೆ ಮಾಡಿ ಆಸ್ಕರ್​ (Oscars 2024) ಸ್ಪರ್ಧೆಗೆ ಕಳಿಸಲಾಗಿತ್ತು. ಆದರೆ ಅಂತಿಮ ಸುತ್ತಿನ ಸ್ಪರ್ಧೆಗೆ ಎಂಟ್ರಿ ಪಡೆಯಲು ‘2018’ ಸಿನಿಮಾ (2018 Movie) ವಿಫಲವಾಗಿದೆ. ಇದರಿಂದ ಭಾರತೀಯ ಸಿನಿಮಾಪ್ರಿಯರಿಗೆ ಬೇಸರ ಆಗಿದೆ. ಕೇರಳದಲ್ಲಿ 2018ರಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಆಧರಿಸಿ ನಿರ್ಮಾಣವಾದ ಈ ಸಿನಿಮಾದಲ್ಲಿ ಟೊವಿನೋ ಥಾಮಸ್​ ನಟಿಸಿದ್ದಾರೆ. ಜೂಡ್​ ಆ್ಯಂಟನಿ ಜೋಸೆಫ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಆಸ್ಕರ್​ ಸ್ಪರ್ಧೆಯ ‘ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್​’ ವಿಭಾಗಕ್ಕೆ ಬೇರೆ ಬೇರೆ ದೇಶಗಳಿಂದ ಸಿನಿಮಾಗಳನ್ನು ಕಳಿಸಲಾಗುತ್ತದೆ. ಇಷ್ಟು ವರ್ಷಗಳವರೆಗೆ ಭಾರತದಿಂದ ಕಳಿಸಿದ ಯಾವುದೇ ಸಿನಿಮಾ ಕೂಡ ಈ ಕೆಟಗರಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿಯಾದರೂ ಆಸ್ಕರ್​ ಸಿಗಬಹುದು ಎಂದುಕೊಂಡಿದ್ದ ಭಾರತೀಯರಿಗೆ ನಿರಾಸೆ ಆಗಿದೆ. ಸೋಶಿಯಲ್​ ಮೀಡಿಯಾ ಮೂಲಕ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Toxic: ಆಸ್ಕರ್​ ಪ್ರಶಸ್ತಿ ಮೇಲೆ ಯಶ್​ ಕಣ್ಣು? ‘ಟಾಕ್ಸಿಕ್​’ ಸಿನಿಮಾ ಹಿಂದಿನ ಲೆಕ್ಕಾಚಾರ ಹೀಗಿದೆ..

15 ಸಿನಿಮಾಗಳು ಮುಂದಿನ ಸುತ್ತಿಗೆ ಆಯ್ಕೆ ಆಗಿವೆ. ಇವುಗಳ ಪೈಕಿ ಉಕ್ರೇನ್​, ಜರ್ಮನಿ, ಯುನೈಟೆಕ್​ ಕಿಂಗ್​ಡಮ್ ಮುಂತಾದ ದೇಶಗಳ ಸಿನಿಮಾಗಳು ಇವೆ. ಕಳೆದ ವರ್ಷ ಪಾನ್​ ನಳೀನ್​ ನಿರ್ದೇಶನ ಮಾಡಿದ, ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಭಾರತದಿಂದ ಸ್ಪರ್ಧೆಗೆ ಹೋಗಿತ್ತು. ಅದು ಕೂಡ ಅಂತಿಮ ಸುತ್ತಿಗೆ ಆಯ್ಕೆ ಆಗಲಿಲ್ಲ. ಈ ಬಾರಿ ಕೂಡ ಮತ್ತೆ ನಿರಾಸೆ ಉಂಟಾಗಿದೆ. 2001ರಲ್ಲಿ ಆಮಿರ್​ ಖಾನ್​ ನಟನೆಯ ‘ಲಗಾನ್​’ ಸಿನಿಮಾ ಟಾಪ್​ 5 ಸ್ಥಾನದಲ್ಲಿ ನಾಮಿನೇಟ್​ ಆಗಿತ್ತು. ಆದರೆ ಆಸ್ಕರ್​ ಪ್ರಶಸ್ತಿ ಗೆಲ್ಲಲಿಲ್ಲ.

ಇದನ್ನೂ ಓದಿ: ‘ಆಸ್ಕರ್​’ ಮೂಲಕ ‘ದಿ ವ್ಯಾಕ್ಸಿನ್ ವಾರ್​’ ಚಿತ್ರಕ್ಕೆ ವಿಶೇಷ ಗೌರವ; ವಿವೇಕ್​ ಅಗ್ನಿಹೋತ್ರಿ ಗುಡ್​ ನ್ಯೂಸ್​

2024ರ ಜನವರಿಗೆ 23ರಂದು ‘96ನೇ ಆಸ್ಕರ್​ ಪ್ರಶಸ್ತಿ’ಯ ಎಲ್ಲ ವಿಭಾಗಗಳ ನಾಮಿನೇಷನ್​ ಪಟ್ಟಿ ಘೋಷಣೆ ಆಗಲಿದೆ. ಮಾರ್ಚ್​ 10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ‘ಬಾರ್ಬಿ’ ಮತ್ತು ‘ಆಪನ್​ಹೈಪರ್​’ ಸಿನಿಮಾಗಳ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಕಳೆದ ವರ್ಷ ‘ಫಾರ್​ ಯುವರ್​ ಕನ್ಸಿಡರೇಷನ್​’ ಕ್ಯಾಂಪೇನ್​ ಮೂಲಕ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್​ ಪ್ರಶಸ್ತಿ ಗೆದ್ದಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್