AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್​ ಸ್ಪರ್ಶಿಸಿ ಪ್ರಭಾಸ್​ ಅಭಿಮಾನಿ ಸಾವು; ‘ಸಲಾರ್​’ ಬಿಡುಗಡೆ ಖುಷಿಯ ನಡುವೆ ಕಹಿ ಸುದ್ದಿ

ಧರ್ಮಾವರಂನ ರಂಗ ಥಿಯೇಟರ್ ಮುಂಭಾಗದ ಮನೆಯೊಂದರಲ್ಲಿ ಫ್ಲೆಕ್ಸಿ ತೊಳೆಯುತ್ತಿದ್ದಾಗ ಪ್ರಭಾಸ್ ಅವರ ಅಭಿಮಾನಿ ಬಾಲರಾಜು (27) ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಬಾಲರಾಜು ಅವರಿಗೆ ಪ್ರಭಾಸ್​ ಎಂದರೆ ಅಚ್ಚುಮೆಚ್ಚು. ‘ಸಲಾರ್’ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಅವರು ಫ್ಲೆಕ್ಸ್​ ಫ್ರೇಮ್ ಮಾಡಿ ತೊಳೆದಾಗ ಕಬ್ಬಿಣದ ರಾಡ್ ಮನೆಯ ವಿದ್ಯುತ್​ ವೈರ್‌ಗಳಿಗೆ ತಗುಲಿದಾಗ ಅವಘಡ ಸಂಭವಿಸಿದೆ.

ವಿದ್ಯುತ್​ ಸ್ಪರ್ಶಿಸಿ ಪ್ರಭಾಸ್​ ಅಭಿಮಾನಿ ಸಾವು; ‘ಸಲಾರ್​’ ಬಿಡುಗಡೆ ಖುಷಿಯ ನಡುವೆ ಕಹಿ ಸುದ್ದಿ
ಪ್ರಭಾಸ್​
TV9 Web
| Updated By: ಮದನ್​ ಕುಮಾರ್​|

Updated on:Dec 22, 2023 | 12:00 PM

Share

ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ದುರಂತ ನಡೆದಿದೆ. ಪ್ರಭಾಸ್​ ನಟನೆಯ ‘ಸಲಾರ್’ ಸಿನಿಮಾ (Salaar Movie) ಬಿಡುಗಡೆ ವೇಳೆ ವಿದ್ಯುತ್ ಶಾಕ್ ತಗುಲಿ ಅಭಿಮಾನಿಯೊಬ್ಬರು ಸಾವನ್ನಪ್ಪಿದ್ದಾರೆ. ಗುರುವಾರ (ಡಿ.21) ಪಟ್ಟಣದ ರಂಗ ಥಿಯೇಟರ್ ಮುಂಭಾಗದ ಮನೆಯೊಂದರಲ್ಲಿ ಫ್ಲೆಕ್ಸ್​ ತೊಳೆಯುತ್ತಿದ್ದಾಗ ನಾಯಕ ಪ್ರಭಾಸ್ (Prabhas) ಅಭಿಮಾನಿ ಬಾಲರಾಜು (27) ವಿದ್ಯುತ್ ಸ್ಪರ್ಶಿಸಿ (Electrocution) ಮೃತಪಟ್ಟಿದ್ದಾರೆ. ಬಾಲರಾಜು ಅವರು ತಮ್ಮ ನೆಚ್ಚಿನ ನಟ ಪ್ರಭಾಸ್​ ಅಭಿನಯದ ‘ಸಲಾರ್’ ಚಿತ್ರ ನೋಡಲು ಕಾದಿದ್ದರು. ಅವರ ಸ್ನೇಹಿತರು ಫ್ಲೆಕ್ಸ್​ ಫ್ರೇಮ್ ಮಾಡಿ ತೊಳೆದಾಗ ಫ್ರೇಮ್‌ನ ಕಬ್ಬಿಣದ ರಾಡ್ ಮನೆಯ ವಿದ್ಯುತ್​ ವೈರ್‌ಗಳಿಗೆ ತಗುಲಿದಾಗ ಅವಘಡ ಸಂಭವಿಸಿದೆ. ಇದರಲ್ಲಿ ಬಾಲರಾಜು ಸಾವನ್ನಪ್ಪಿದ್ದಾರೆ. ಗಜೇಂದ್ರ ಎಂಬ ಯುವಕ ಗಾಯಗೊಂಡಿದ್ದಾನೆ.

ಇನ್ನು ನಾಲ್ವರು ಯುವಕರು ಅಪಘಾತದಿಂದ ಪಾರಾಗಿದ್ದಾರೆ. ವಿದ್ಯುತ್ ತಂತಿಗಳು ಕಡಿಮೆ ಎತ್ತರದಲ್ಲಿ ಇದ್ದಿದ್ದರಿಂದ ಅವಘಡ ಸಂಭವಿಸಿದೆ ಎಂದು ಬಾಲರಾಜು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಬಾಲರಾಜು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಕನಗಾನಪಲ್ಲಿ ಮಂಡಲದ ಮಾಮಿಲ್ಲಪಲ್ಲಿಯಲ್ಲಿ ಕೆಲ ದಿನಗಳಿಂದ ವಾಸವಾಗಿದ್ದರು. ನಟ ಪ್ರಭಾಸ್ ಅವರ ದೊಡ್ಡ ಅಭಿಮಾನಿ ಈ ಬಾಲರಾಜು. ಮೃತರು ಪತ್ನಿ ಸಿರಿಶಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಧರ್ಮವರಂ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘ಪ್ರಭಾಸ್ ಮಾಸ್ ಕಂಬ್ಯಾಕ್’; ‘ಸಲಾರ್’ ನೋಡಿ ಟ್ವಿಟರ್​ನಲ್ಲಿ ವಿಮರ್ಶೆ ತಿಳಿಸಿದ ಫ್ಯಾನ್ಸ್

ಬಾಲರಾಜು ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ನಿನ್ನೆ ರಾತ್ರಿ ಮೃತನ ಸಂಬಂಧಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ವಿದ್ಯುತ್​ ವೈರ್​ಗಳು ಕಡಿಮೆ ಎತ್ತರದಲ್ಲಿ ಇದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಬಾಲರಾಜು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಅಲ್ಲಿಂದ ಕಳುಹಿಸಿದರು. ಬಾಲರಾಜು ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:55 am, Fri, 22 December 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ