Dunki BO Collection Day 1: ಡಲ್ ಆಯ್ತು ‘ಡಂಕಿ’ ಕಲೆಕ್ಷನ್; ಶಾರುಖ್ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
‘ಡಂಕಿ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಚಿತ್ರದಲ್ಲಿ ಯಾವುದೇ ಆ್ಯಕ್ಷನ್ ಇಲ್ಲ. ಈ ಕಾರಣದಿಂದ ಒಂದು ವರ್ಗದ ಜನರಿಗೆ ಸಿನಿಮಾ ಇಷ್ಟ ಆಗಿಲ್ಲ.
ಈ ವರ್ಷ ರಿಲೀಸ್ ಆದ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದವು. ಮೊದಲ ದಿನ ಎರಡೂ ಚಿತ್ರಗಳು ದಾಖಲೆ ಬರೆದಿದ್ದವು. ಈ ವರ್ಷ ಅವರ ನಟನೆಯ ಮೂರನೇ ಸಿನಿಮಾ ‘ಡಂಕಿ’ ರಿಲೀಸ್ ಆಗಿದೆ. ಇದು ಪಕ್ಕಾ ಕ್ಲಾಸ್ ಶೈಲಿಯಲ್ಲಿ ಮೂಡಿ ಬಂದಿದೆ. ಈ ಸಿನಿಮಾ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಶಾರುಖ್ ಸಿನಿಮಾ ಮೊದಲ ದಿನ 30 ಕೋಟಿ ರೂಪಾಯಿಗೆ ಖುಷಿಪಟ್ಟುಕೊಂಡಿದೆ.
ಸ್ಟಾರ್ ಹೀರೋ, ಬಿಗ್ ಬಜೆಟ್ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚಿರುತ್ತದೆ. ‘ಡಂಕಿ’ ಸಿನಿಮಾ ಬಗ್ಗೆಯೂ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಚಿತ್ರದಲ್ಲಿ ಯಾವುದೇ ಆ್ಯಕ್ಷನ್ ಇಲ್ಲ. ಈ ಕಾರಣದಿಂದ ಒಂದು ವರ್ಗದ ಜನರಿಗೆ ಸಿನಿಮಾ ಇಷ್ಟ ಆಗಿಲ್ಲ. ಈ ಕಾರಣದಿಂದಲೇ ಮೊದಲ ದಿನದ ಗಳಿಕೆ ಕೊಂಚ ಡಲ್ ಆಗಿದೆ ಎಂದು ಕೆಲವರು ಊಹಿಸಿದ್ದಾರೆ. ಈ ಸಿನಿಮಾ ಮೊದಲ ದಿನ 30 ಕೋಟಿ ರೂಪಾಯಿ ಮಾತ್ರ ಗಳಿಕೆ ಮಾಡಿದೆ. ಕ್ರಿಸ್ಮಸ್ ರಜೆ ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಸಹಕಾರಿ ಆಗಬಹುದು.
‘ಜವಾನ್’ ಸಿನಿಮಾ ಮೊದಲ ದಿನ 75 ಕೋಟಿ ರೂಪಾಯಿ ಬಾಚಿಕೊಂಡಿತ್ತು. ದೊಡ್ಡ ಮಟ್ಟದಲ್ಲಿ ಫ್ಲಾಪ್ ಆದ ‘ಆದಿಪುರುಷ್’ ಚಿತ್ರ ಕೂಡ ಮೊದಲ ದಿನ 36 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆದರೆ, ಈ ಚಿತ್ರಗಳಂತೆ ಪರ್ಫಾರ್ಮ್ ಮಾಡಲು ‘ಡಂಕಿ’ ಸಿನಿಮಾ ಬಳಿ ಸಾಧ್ಯವಾಗಿಲ್ಲ. ಆದರೆ, ಈ ಮೊದಲು ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (15.81 ಕೋಟಿ ರೂಪಾಯಿ), ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (11.1 ಕೋಟಿ ರೂಪಾಯಿ), ‘ಡ್ರೀಮ್ ಗರ್ಲ್ 2’ (10.69 ಕೋಟಿ ರೂಪಾಯಿ) ಚಿತ್ರಗಳಿಗೆ ಹೋಲಿಕೆ ಮಾಡಿದರೆ ‘ಡಂಕಿ’ ಮೊದಲ ದಿನ ಉತ್ತಮ ಗಳಿಕೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರು ಅಥವಾ ಹೈದರಾಬಾದ್: ‘ಸಲಾರ್’ ಎಲ್ಲಿ ನೋಡ್ತಾರೆ ರಾಜಮೌಳಿ? ಗೊಂದಲಕ್ಕೆ ಕಾರಣವೇನು?
ಇಂದು (ಡಿಸೆಂಬರ್ 22) ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ‘ಡಂಕಿ’ ಚಿತ್ರಕ್ಕೆ ಭರ್ಜರಿ ಸ್ಪರ್ಧೆ ನೀಡಲಿದೆ. ‘ಸಲಾರ್’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಈ ಚಿತ್ರ ಹಿಂದಿ ಮಂದಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ