ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿದ್ದ ಜೋಡಿಗೆ ಬೇಸರ: ಚೌಲ್ಟ್ರಿ ಬಿಟ್ಟು ದೇಗುಲದಲ್ಲಿ 25 ನಿಮಿಷದಲ್ಲಿಯೇ ಮದುವೆ!

ಕೇವಲ 25 ಜನ ಕುಟುಂಬಸ್ಥರು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಜನವರಿಯಲ್ಲಿ ಮದುವೆಗೆ ಕಲ್ಯಾಣಮಂಟಪ ಬುಕ್ ಮಾಡಿದ್ರು. ನಂತರದ ಬೆಳವಣಿಗೆಗಳಿಂದಾಗಿ ಕಲ್ಯಾಣ ಮಂಟಪ ರದ್ದು ಮಾಡಿ, ದೇಗುಲದಲ್ಲಿ ಮದುವೆಯಾಗಿದ್ದಾರೆ.

ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿದ್ದ ಜೋಡಿಗೆ ಬೇಸರ: ಚೌಲ್ಟ್ರಿ ಬಿಟ್ಟು ದೇಗುಲದಲ್ಲಿ 25 ನಿಮಿಷದಲ್ಲಿಯೇ ಮದುವೆ!
ದೇಗುಲದಲ್ಲಿ 25 ನಿಮಿಷದಲ್ಲಿಯೇ ಮದುವೆ!

Updated on: Apr 29, 2021 | 1:14 PM

ಬೆಂಗಳೂರು: ಕೊರೊನಾ ಕ್ರಿಮಿಗೆ ಹೆದರಿಕೊಂಡು ಗಟ್ಟಿಮೇಳವೂ ಈಗ ಜೋರಾಗಿ ಧಾಂ ಧೂಮ್​ ಅಂತಾ ಆಚರಿಸುವಂತಿಲ್ಲ. ಯಾವ ಕ್ಷಣದಲ್ಲಿ ಮಹಾಮಾರಿ ನುಸುಳಿ ಜೀವ ಹಿಂಡಿಬಿಡತ್ತದೋ ಎಂದು ಜನ ಭಯಭೀತರಾಗಿ ಮುಹೂರ್ತ ಘಳಿಗೆಗಷ್ಟೇ ಸೀಮಿತಗೊಂಡು ಮದುವೆ ಶಾಸ್ತ್ರ ಮುಗಿಸುವಂತಾಗಿದೆ. ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿದ್ದ ನವ ಜೋಡಿಗೆ 25 ನಿಮಿಷದಲ್ಲಿಯೇ ಮದ್ವೆಯಾಗುವ ಅನಿವಾರ್ಯತೆ ಎದುರಾಗಿದೆ ಶೇಷಾದ್ರಿಪುರಂನಲ್ಲಿ.

ಜನವರಿಯಲ್ಲಿಯೇ ಮದುವೆಗೆ ಕಲ್ಯಾಣಮಂಟಪ ಬುಕ್ ಮಾಡಿದ್ರು: ರಾಜ್ಯದಲ್ಲಿ ಕೊವಿಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಟಫ್​ ರೂಲ್ಸ್​ನಿಂದಾಗಿ 25 ನಿಮಿಷದಲ್ಲಿಯೇ ಮದುವೆ ಶಾಸ್ತ್ರ ಮುಗಿದಿದೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಪಕ್ಕದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ.

ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿದ್ದ ಜೋಡಿಗೆ ಬೇಸರ

ಕೇವಲ 25 ಜನ ಕುಟುಂಬಸ್ಥರು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಜನವರಿಯಲ್ಲಿ ಮದುವೆಗೆ ಕಲ್ಯಾಣಮಂಟಪ ಬುಕ್ ಮಾಡಿದ್ರು. ನಂತರದ ಬೆಳವಣಿಗೆಗಳಿಂದಾಗಿ ಕಲ್ಯಾಣ ಮಂಟಪ ರದ್ದು ಮಾಡಿ, ದೇಗುಲದಲ್ಲಿ ಮದುವೆಯಾಗಿದ್ದಾರೆ. ಸಹಜವಾಗಿಯೇ ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿಕೊಂಡಿದ್ದ ನವ ಜೋಡಿಗೆ ಒಂದಷ್ಟು ಬೇಸರವಂತೂ ತಂದಿದೆ.

(due to covid curfew marriage done in temple in seshadripuram rather than in choultry)

ಮಾಜಿ ಶಾಸಕರ ಪುತ್ರಿ ಮದುವೆ ಬಳಿಕ 8 ಜನರಿಗೆ ಕೊರೊನಾ ಪಾಸಿಟಿವ್

Published On - 11:48 am, Thu, 29 April 21