ಕಿಲ್ಲರ್ ಕೊರೊನಾ: ಆ್ಯಂಬುಲೆನ್ಸ್ ಚಾಲಕರಿಂದಲೇ ಅಂತ್ಯಸಂಸ್ಕಾರ, ವಿಡಿಯೋ ನೋಡಿ ವಿದಾಯ ಹೇಳುತ್ತಿರುವ ಕುಟುಂಬಸ್ಥರು

ಮಹಾಮಾರಿ ಕೊರೊನಾದಿಂದ ಮೃತಪಟ್ಟಂತಹ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರು ಭಾಗಿಯಾಗುತ್ತಿಲ್ಲ. ಕೆಲವರು ಮೃತದೇಹವನ್ನೇ ಬಿಟ್ಟು ಹೋಗುತ್ತಿದ್ದಾರೆ. ಮತ್ತೆ ಕೆಲವರು ಮೊಬೈಲ್ ವಿಡಿಯೋದಲ್ಲೇ ಅಂತ್ಯಸಂಸ್ಕಾರವನ್ನು ವೀಕ್ಷಿಸಿ ದೂರದಿಂದಲೇ ಮೃತರ ಅಂತ್ಯಕ್ಕೆ ಶಾಂತಿ ಕೋರುತ್ತಿದ್ದಾರೆ.

ಕಿಲ್ಲರ್ ಕೊರೊನಾ: ಆ್ಯಂಬುಲೆನ್ಸ್ ಚಾಲಕರಿಂದಲೇ ಅಂತ್ಯಸಂಸ್ಕಾರ, ವಿಡಿಯೋ ನೋಡಿ ವಿದಾಯ ಹೇಳುತ್ತಿರುವ ಕುಟುಂಬಸ್ಥರು
Follow us
ಆಯೇಷಾ ಬಾನು
| Updated By: Digi Tech Desk

Updated on:Apr 29, 2021 | 9:12 AM

ಬೆಂಗಳೂರು: ಕಿಲ್ಲರ್ ಕೊರೊನಾಗೆ ಜನ ಬಲಿಯಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಹಾಗೂ ಸಾಯುವವರ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ವಿಪರ್ಯಾಸವೆಂದರೆ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರು ಮೃತರ ಅಂತ್ಯಸಂಸ್ಕಾರವನ್ನು ವಿಡಿಯೋ ಮೂಲಕ ವೀಕ್ಷಿಸುತ್ತಿದ್ದಾರೆ. ತಮ್ಮವರನ್ನು ವಿಡಿಯೋ ಮೂಲಕವೇ ವಿದಾಯ ಹೇಳುತ್ತಿದ್ದಾರೆ.

ಹೌದು ಮಹಾಮಾರಿ ಕೊರೊನಾದಿಂದ ಮೃತಪಟ್ಟಂತಹ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರು ಭಾಗಿಯಾಗುತ್ತಿಲ್ಲ. ಕೆಲವರು ಮೃತದೇಹವನ್ನೇ ಬಿಟ್ಟು ಹೋಗುತ್ತಿದ್ದಾರೆ. ಮತ್ತೆ ಕೆಲವರು ಮೊಬೈಲ್ ವಿಡಿಯೋದಲ್ಲೇ ಅಂತ್ಯಸಂಸ್ಕಾರವನ್ನು ವೀಕ್ಷಿಸಿ ದೂರದಿಂದಲೇ ಮೃತರ ಅಂತ್ಯಕ್ಕೆ ಶಾಂತಿ ಕೋರುತ್ತಿದ್ದಾರೆ. ಸೋಂಕು ತಮಗೂ ತಗುಲಬಹುದೆಂಬ ಭಯಕ್ಕೆ ವಿಡಿಯೋ ಮೂಲಕವೇ ಅಂತಿಮ ವಿದಾಯ ಹೇಳುತ್ತಿದ್ದಾರೆ. ಕೊನೇ ಬಾರಿ ತಮ್ಮವರ ದರ್ಶನ ಭಾಗ್ಯ ಕೂಡ ಸಿಗುತ್ತಿಲ್ಲ.

ಇನ್ನು ಮೃತ ಸೋಂಕಿತರ ಕುಟುಂಬಸ್ಥರು ಕೇವಲ ಆ್ಯಂಬುಲೆನ್ಸ್ ಚಾಲಕನಿಗೆ ಇಂತಿಷ್ಟು ಎಂದು ಹಣ ನೀಡಿ ಅಂತ್ಯಸಂಸ್ಕಾರದ ಹೊಣೆ ನೀಡುತ್ತಿದ್ದಾರೆ. ಚಾಲಕನೇ ಮೃತದೇಹಕ್ಕೆ ಪೂಜೆ ಮಾಡಿ, ಪುರೋಹಿತರಿಂದ ಪೂಜೆ ಮಾಡಿಸಿ ಅಂತ್ಯಸಂಸ್ಕಾರ ಮಾಡುತ್ತಿದ್ದಾನೆ. ಬಳಿಕ ಕುಟುಂಬಸ್ಥರಿಗೆ ಪೂಜೆ ಹಾಗೂ ಅಂತ್ಯಸಂಸ್ಕಾರದ ವಿಡಿಯೋ ಕಳುಹಿಸಿದ್ರೆ ಸಾಕು. ಅಲ್ಲಿಗೆ ಆ ಚಾಲಕನ ಜವಾಬ್ದಾರಿ ಮುಗಿಯುತ್ತೆ. ಜಸ್ಟ್ ಅಂತ್ಯಸಂಸ್ಕಾರದ ವಿಡಿಯೋ ನೋಡಿ ಕುಟುಂಬಸ್ಥರು ಅಂತಿಮ ವಿದಾಯ ಹೇಳ್ತಿದ್ದಾರೆ. ಮೃತಪಟ್ಟ ಸೋಂಕಿತರ ಮುಖ‌ನೋಡಲು ಕುಟುಂಬಸ್ಥರು ಬರ್ತಿಲ್ಲವಂತೆ. ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂತಹದೊಂದು ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಚಿತಾಗಾರದ ಎದುರು ಮೃತದೇಹಗಳ ಮೌನ ರೋಧನೆಪಡುತ್ತಿವೆ.

ಇದನ್ನೂ ಓದಿ: ವೈರಲ್​ ವಿಡಿಯೋ; ಕೊರೊನಾ ವೈರಾಣುವಿಗೆ ವಿದಾಯ ಹೇಳುವುದು ಹೇಗೆ? ಇಲ್ಲಿದೆ ನೋಡಿ ತಮಾಷೆ ದೃಶ್ಯ

Published On - 9:03 am, Thu, 29 April 21