Tv9 Digital Live | ಮನೆಯಲ್ಲೂ ಮಾಸ್ಕ್ ಅನಿವಾರ್ಯನಾ? ವೈದ್ಯರ ಅಭಿಪ್ರಾಯಗಳು ಹೀಗಿವೆ

ಭಾರತದಲ್ಲಿ ಮಾಸ್ಕ್ ಧರಿಸುವ ಸಲಹೆಯನ್ನು ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಡಾ.ಸಂದೀಪ್ಗೆ ಕೇಳಿದಾಗ, ಹೊರಗಡೆ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಸೋಂಕು ತಡೆಗಟ್ಟಲು ಮಾಸ್ಕ್ ಸಹಾಯಕವಾಗುತ್ತದೆ. ಮನೆಯೊಳಗೆ ಎಲ್ಲರಿಗೂ ಎಲ್ಲರೂ ಗೊತ್ತಿರುತ್ತಾರೆ. ಮನೆಯವರ ಆರೋಗ್ಯ ಪರಿಸ್ಥಿತಿ ತಿಳಿದಿರುತ್ತದೆ.

Tv9 Digital Live | ಮನೆಯಲ್ಲೂ ಮಾಸ್ಕ್ ಅನಿವಾರ್ಯನಾ? ವೈದ್ಯರ ಅಭಿಪ್ರಾಯಗಳು ಹೀಗಿವೆ
ಹರಿಪ್ರಸಾದ್, ಡಾ.ಆಂಜನಪ್ಪ
Follow us
sandhya thejappa
|

Updated on: Apr 29, 2021 | 8:39 AM

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಆದರೆ ಜನ ಮಾತ್ರ ಈ ಅನಿವಾರ್ಯತೆಯನ್ನು ಅರಿತಿಲ್ಲ. ಹೀಗಾಗಿ ಸರ್ಕಾರ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಸುಮಾರು 14 ದಿನಗಳ ಕಾಲ ಕರ್ನಾಟಕದಲ್ಲಿ ಕೊರೊನಾ ಕರ್ಫ್ಯೂ ಇರಲಿದೆ. ಬೇರೆ ದೇಶಗಳಲ್ಲಿ ಲಸಿಕೆ ತೆಗೆದುಕೊಂಡ ಜನ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಿದ್ದಂತೆ ಮಾಸ್ಕ್ ಬೇಡ ಎಂದು ಸರ್ಕಾರಗಳೇ ಹೇಳಲು ಪ್ರಾರಂಭಿಸಿವೆ. ಆದರೆ ಭಾರತದಲ್ಲಿ ಮಾತ್ರ ಇದರ ವಿರುದ್ಧ ದಾರಿಯಲ್ಲಿ ಹೋಗಬೇಕಾದ ಸ್ಥಿತಿ ಬಂದಿದೆ. ಸರ್ಕಾರ ಮನೆಯೊಳಗೂ ಮಾಸ್ಕ್ ಧರಿಸಬೇಕೆಂದು ಹೇಳಿದೆ. ಇದನ್ನು ಪಾಲಿಸಲು ಸಾಧ್ಯನಾ? ಹೊರಗಡೆ ಧರಿಸುವುದೇ ಕಷ್ಟ ಎನ್ನುವ ಜನರು ಮನೆಯಲ್ಲೂ ಮಾಸ್ಕ್ ಧರಿಸುತ್ತಾರಾ? ಎಂದು ಇಂದಿನ ಡಿಜಿಟಲ್ ಲೈವ್​ನಲ್ಲಿ ಚರ್ಚಿಸಲಾಗಿದೆ.

ಚರ್ಚೆಯಲ್ಲಿ ಕಿಮ್ಸ್ ವೈದ್ಯಾಧಿಕಾರಿ ಡಾ.ಆಂಜನಪ್ಪ, ಶ್ವಾಸಕೋಶಶಾಸ್ತ್ರಜ್ಞ ಡಾ.ಸಂದೀಪ್ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ.ಸುನೀಲ್ ಭಾಗವಹಿಸಿದ್ದರು. ಚರ್ಚೆಯನ್ನು ಆ್ಯಂಕರ್ ಹರಿಪ್ರಸಾದ್ ನಡೆಸಿಕೊಟ್ಟರು.

ಭಾರತದಲ್ಲಿ ಮಾಸ್ಕ್ ಧರಿಸುವ ಸಲಹೆಯನ್ನು ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಡಾ.ಸಂದೀಪ್ಗೆ ಕೇಳಿದಾಗ, ಹೊರಗಡೆ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಸೋಂಕು ತಡೆಗಟ್ಟಲು ಮಾಸ್ಕ್ ಸಹಾಯಕವಾಗುತ್ತದೆ. ಮನೆಯೊಳಗೆ ಎಲ್ಲರಿಗೂ ಎಲ್ಲರೂ ಗೊತ್ತಿರುತ್ತಾರೆ. ಮನೆಯವರ ಆರೋಗ್ಯ ಪರಿಸ್ಥಿತಿ ತಿಳಿದಿರುತ್ತದೆ. ಹೀಗಾಗಿ ಅಗತ್ಯವೆನಿಸಿದಾಗ ಮಾತ್ರ ಮಾಸ್ಕ್ ಧರಿಸುವುದು ಅವಶ್ಯಕವಾಗಿರುತ್ತದೆ ಹೊರತು ಎಲ್ಲರೂ ಹಾಕಬೇಕು ಎನ್ನುವುದು ಅಷ್ಟರಮಟ್ಟಿಗೆ ಸರಿಯಲ್ಲ ಎಂದು ಹೇಳಿದರು.

ನಂತರ ಮಾತನಾಡಿದ ಸಾಂಕ್ರಾಮಿಕ ರೋಗ ತಜ್ಞ ಡಾ.ಸುನೀಲ್, ಮನೆಯಲ್ಲೂ ಮಾಸ್ಕ್ ಧರಿಸುವುದು ತುಂಬಾ ಕಷ್ಟ. ಟಿವಿ ವೀಕ್ಷಿಸುವಾಗ ಮಾಸ್ಕ್ ಹಾಕಿಕೊಳ್ಳಬಹುದು. ಆದರೆ ಮಲಗುವ ವೇಳೆ ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೆಲವರ ಮನೆಯಲ್ಲಿ ಒಂದು ಕೊಠಡಿ ಇರುತ್ತದೆ. ಹೀಗಿದ್ದಾಗ ಮಾಸ್ಕ್ ಧರಿಸುವುದು ಕಷ್ಟದ ಕೆಲಸ. ಹೊರಗಡೆ ಹೋಗುವಾಗ ಮಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೆ ಸೋಂಕಿದೆ ಎಂದು ಯಾರಿಗೂ ಗೊತ್ತಾಗಲ್ಲ. ಹೀಗಾಗಿ ಮಾಸ್ಕ್ ಹಾಕುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಸ್ಕ್ ಧರಿಸಬೇಕೆಂದು ಹೇಳುವುದು ಸುಲಭ. ಇದನ್ನು ಪಾಲಿಸುವುದು ತೀರಾ ಕಷ್ಟ. ಇಂತಹ ಸಲಹೆಗಳನ್ನು ಮೊದಲು ವಿಜ್ಞಾನಿಗಳೊಂದಿಗೆ ಚರ್ಚಿಸಬೇಕು ಹೊರತು ಜನ ಸಾಮಾನ್ಯರೊಂದಿಗೆ ಚರ್ಚಿಸಬಾರದು. ಹಳ್ಳಿಯ ಜನರಿಗೆ ಈ ಸಲಹೆ ನೀಡಿದಾಗ ಅವರ ಮನಸಲ್ಲಿ ಹತ್ತು ಹಲವು ಗೊಂದಲಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ಸೂಕ್ಷ್ಮ ವಿಚಾರಗಳನ್ನು ಜನ ಸಾಮಾನ್ಯರೊಂದಿಗೆ ಚರ್ಚಿಸಿ ಅವರನ್ನು ಮನವರಿಕೆ ಮಾಡುವುದು ಸಾಧ್ಯವಿಲ್ಲ. ಪಾಲಿಸಲು ಸಾಧ್ಯವಿರುವುದನ್ನು ಪಾಲಿಸಬಹುದು ಆದರೆ ಮನೆಯಲ್ಲೂ ಮಾಸ್ಕ್ ಹಾಕುವುದು ಕಷ್ಟದ ಕೆಲಸ ಎಂದು ಡಾ.ಆಂಜನಪ್ಪ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ

ಕೊರೊನಾ ನೆಗೆಟಿವ್ ಬಂದರೂ ನಿಮ್ಮಲ್ಲಿ ಕೆಲವು ಪ್ರಶ್ನೆಗಳಿರಬಹುದು, ಅವೆಲ್ಲದಕ್ಕೂ ಉತ್ತರ ಇಲ್ಲಿದೆ

ಕೊರೊನಾ ಸೋಂಕಿಗೆ ತುತ್ತಾಗಿದ್ದ ರನ್ನ, ಅಣ್ಣಯ್ಯ, ಬಿಂದಾಸ್ ಸಿನಿಮಾ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್​ ಇನ್ನಿಲ್ಲ

(Doctors expressed their views on wearing mask at home on Tv9 Digital Live)