AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗಳೇ ಕೊರೊನಾ ಹಾಟ್‌ಸ್ಪಾಟ್; ನಿಯಮ ಉಲ್ಲಂಘಿಸಿ ಮದುವೆ ಮಾಡುತ್ತಿರುವವರ ಮೇಲೆ ಜಿಲ್ಲಾಡಳಿತದಿಂದ ಕಠಿಣ ಕ್ರಮ

ಬಾಗಲಕೋಟೆಯಲ್ಲಿ ಮದುವೆಗಳೇ ಕೊರೊನಾ ಹಾಟ್‌ಸ್ಪಾಟ್ಗಳಾಗಿವೆ. ಜಿಲ್ಲೆಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಮದುವೆಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಉಪವಿಭಾಗದ 13 ಮದುವೆಗಳ ಮೇಲೆ ಕೇಸ್ ದಾಖಲಿಸಲಾಗಿದೆ.

ಮದುವೆಗಳೇ ಕೊರೊನಾ ಹಾಟ್‌ಸ್ಪಾಟ್; ನಿಯಮ ಉಲ್ಲಂಘಿಸಿ ಮದುವೆ ಮಾಡುತ್ತಿರುವವರ ಮೇಲೆ ಜಿಲ್ಲಾಡಳಿತದಿಂದ ಕಠಿಣ ಕ್ರಮ
ಮದುವೆ ಊಟ ಸವಿಯುತ್ತಿರುವ ಜನ
ಆಯೇಷಾ ಬಾನು
|

Updated on: Apr 29, 2021 | 7:25 AM

Share

ಬಾಗಲಕೋಟೆ: ಮಹಾಮಾರಿ ಕೊರೊನಾ ವೈರಸ್ ಸದ್ದಿಲ್ಲದೆ ಇಡೀ ದೇಶವನ್ನು ಆವರಿಸಿದೆ. ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಹೆಚ್ಚು ಮಾಡುತ್ತಿದೆ. ಆದರೆ ಇಷ್ಟೆಲ್ಲಾ ಸಾವು-ನೋವುಗಳನ್ನು ನೀಡುತ್ತಿದ್ದರೂ ನಮ್ಮ ಜನ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಮದುವೆ ಮುಂಚೆಗಳನ್ನು ಮಾಡಿ ಕೊರೊನಾಗೆ ಆಹ್ವಾನ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಬಾಗಲಕೋಟೆಯಲ್ಲಿ ನಿಯಮ ಉಲ್ಲಂಘಿಸಿ ನಡೆಸುವ ಮದುವೆ ಸಮಾರಂಭಗಳ ಮೇಲೆ ದಾಳಿ ನಡೆಸುತ್ತಿದೆ.

ಬಾಗಲಕೋಟೆಯಲ್ಲಿ ಮದುವೆಗಳೇ ಕೊರೊನಾ ಹಾಟ್‌ಸ್ಪಾಟ್ಗಳಾಗಿವೆ. ಜಿಲ್ಲೆಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಮದುವೆಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಉಪವಿಭಾಗದ 13 ಮದುವೆಗಳ ಮೇಲೆ ಕೇಸ್ ದಾಖಲಿಸಲಾಗಿದೆ. ಬಾದಾಮಿ, ಗುಳೇದಗುಡ್ಡ, ಇಳಕಲ್, ಹುನಗುಂದ ಸೇರಿದಂತೆ ಬಾಗಲಕೋಟೆ ತಾಲೂಕಿನಲ್ಲಿ ನಡೆದ ಮದುವೆಗಳ ಮೇಲೆ ಕೇಸ್ ದಾಖಲಿಸಲಾಗಿದೆ. ಕೊವಿಡ್ ನಿಯಮ ಉಲ್ಲಂಘನೆ ಮಾಡಿ ಮದುವೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಲಾಗುತ್ತಿದೆ.

ಮದುವೆಯಲ್ಲಿ ಪಾಲ್ಗೊಂಡ ಅನೇಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅಧಿಕಾರಿಗಳು ಮದುವೆಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ನಡೆದ ಮದುವೆಗಳ ಪೈಕಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹತ್ತಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಮದುವೆಯಲ್ಲಿ 50 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ನಿಯಮಗಳನ್ನು ಮೀರಿ ಮದುವೆಗಳು ಜರಗುತ್ತಿವೆ. ಹೀಗಾಗಿ ಈ ನಿಯಮ ಮೀರಿದ ಮದುವೆಗಳ ಮೇಲೆ ಕೇಸ್ ದಾಖಲಿಸಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಸಿಂಪಲ್​ ಆಗಿ ಮದುವೆ ಆಗಲಿದ್ದಾರೆ ಕಾವ್ಯಾ ಗೌಡ