AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಆಸ್ಪತ್ರೆಗಳ ಧನದಾಹ ಬಿಚ್ಚಿಟ್ಟ ಸಚಿವ ಸೋಮಣ್ಣ; ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ ಎಂದ ಮಾಜಿ ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು: ಕೊರೊನಾ ಮಹಾಮಾರಿಯ ಭೀಕರತೆ ಎಷ್ಟಿದೆ ಎಂಬುದರ ಬಿಸಿ ಮಂತ್ರಿ ಮಾಗಧರಿಗೂ ತಟ್ಟುತ್ತಿದೆ. ಮಾಜಿ ಹಾಲಿ ಮಂತ್ರವರ್ಯರೂ ವ್ಯವಸ್ಥೆಯ ಬಗ್ಗೆ ಅಸಹಾಯಕತೆ ತೋರುತ್ತಿದ್ದಾರೆ. ವಿಕಾಸ ಸೌಧದಲ್ಲಿ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ಬಿಬಿಎಂಪಿ ಪೂರ್ವ ವಲಯದ ಕೋವಿಡ್ ನಿರ್ವಹಣೆ ಸಭೆಯಲ್ಲಿ ಈ ಅನಿಸಿಕೆಗಳು ವ್ಯಕ್ತವಾಗಿವೆ. ಸಭೆಯಲ್ಲಿ ಮಾಜಿ ಸಚಿವ ಕೆ ಜೆ ಜಾರ್ಜ್, ಶಾಸಕ ರಿಜ್ವಾನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಸಚಿವ ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದೇ ಲಾಸ್ಟ್ ಸಭೆ ಮತ್ತೆ ಸಭೆ […]

ಖಾಸಗಿ ಆಸ್ಪತ್ರೆಗಳ ಧನದಾಹ ಬಿಚ್ಚಿಟ್ಟ ಸಚಿವ ಸೋಮಣ್ಣ; ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ ಎಂದ ಮಾಜಿ ಸಚಿವ ಕೆ.ಜೆ. ಜಾರ್ಜ್
ವಿಧಾನ ಪರಿಷತ್: ನಾನು 3 ಸಚಿವರ ಮಧ್ಯೆ ಇಕ್ಕಳದಂತೆ ಸಿಕ್ಕಿಹಾಕಿಕೊಂಡಿದ್ದೇನೆ- ವಸತಿ ಸಚಿವ ಸೋಮಣ್ಣ
ಸಾಧು ಶ್ರೀನಾಥ್​
|

Updated on: Apr 29, 2021 | 12:58 PM

Share

ಬೆಂಗಳೂರು: ಕೊರೊನಾ ಮಹಾಮಾರಿಯ ಭೀಕರತೆ ಎಷ್ಟಿದೆ ಎಂಬುದರ ಬಿಸಿ ಮಂತ್ರಿ ಮಾಗಧರಿಗೂ ತಟ್ಟುತ್ತಿದೆ. ಮಾಜಿ ಹಾಲಿ ಮಂತ್ರವರ್ಯರೂ ವ್ಯವಸ್ಥೆಯ ಬಗ್ಗೆ ಅಸಹಾಯಕತೆ ತೋರುತ್ತಿದ್ದಾರೆ. ವಿಕಾಸ ಸೌಧದಲ್ಲಿ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ಬಿಬಿಎಂಪಿ ಪೂರ್ವ ವಲಯದ ಕೋವಿಡ್ ನಿರ್ವಹಣೆ ಸಭೆಯಲ್ಲಿ ಈ ಅನಿಸಿಕೆಗಳು ವ್ಯಕ್ತವಾಗಿವೆ. ಸಭೆಯಲ್ಲಿ ಮಾಜಿ ಸಚಿವ ಕೆ ಜೆ ಜಾರ್ಜ್, ಶಾಸಕ ರಿಜ್ವಾನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಸಚಿವ ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದೇ ಲಾಸ್ಟ್ ಸಭೆ ಮತ್ತೆ ಸಭೆ ಮಾಡೋಲ್ಲ. ಇನ್ನು ಮುಂದೆ ಏನಿದ್ರು ಕೆಲಸ ಮಾಡಬೇಕು ನೀವು ಎಂದು ಸೋಮಣ್ಣ ಆಕ್ರೋಶಭರಿತರಾಗಿ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳ ಧನದಾಹ ಬಿಚ್ಚಿಟ್ಟ ಸಚಿವ ವಿ.ಸೋಮಣ್ಣ: ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಧನದಾಹವನ್ನು ಸಚಿವ ವಿ.ಸೋಮಣ್ಣ ಬಿಚ್ಚಿಟ್ಟರು. ಕೊವಿಡ್‌ ನಿರ್ವಹಣೆ ಸಭೆಯಲ್ಲಿ ತಮ್ಮ ಬೇಸರ ಹೊರಹಾಕಿದ ಸಚಿವ ಸೋಮಣ್ಣ ಕೊವಿಡ್‌ನಿಂದ ಮೃತಪಟ್ಟು 2 ದಿನವಾದ್ರೂ ಶವ ಸಿಗುತ್ತಿಲ್ಲ. ಶವ ಹಸ್ತಾಂತರ ವ್ಯವಸ್ಥೆ ಕೇಂದ್ರಿಕೃತ ಮಾಡಿರುವುದರಿಂದ ಸಮಸ್ಯೆ ಆಗಿದೆ. ಸತ್ತು ಎರಡೂವರೆ ದಿನ ಆದರೂ ಶವ ಸಿಗ್ತಾ ಇಲ್ಲ. 5 ಮಂದಿ ನಮ್ಮವರನ್ನ ಕಳೆದುಕೊಂಡಿದ್ದೀನಿ. ನಮ್ಮ ಕ್ಷೇತ್ರದಲ್ಲಿ ಆಸ್ಪತ್ರೆಯೊಂದು ಬಿಯು ನಂಬರ್ ಬರುವ ಮೊದಲು 2 ಲಕ್ಷ ಕಟ್ಟಿಸಿಕೊಂಡಿದ್ದಾರೆ ಎಂದು ಸಚಿವ ವಿ. ಸೋಮಣ್ಣ ಅಸಹಾಯಕರಾದರು.

ಇದಕ್ಕೆ ದನಿಗೂಡಿಸಿದ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಆಕ್ಸಿಜನ್‌ ಕೊರತೆ ಇದೆ, ನಮ್ಮ ಸಂಬಂಧಿಕರೇ ಸತ್ತಿದ್ದಾರೆ ಎಂದು ಕೊವಿಡ್‌ ನಿರ್ಹವಣೆ ಸಭೆಯಲ್ಲಿ ಅಸಹಾಯಕತೆ ತೋರಿದರು.

medical system prevailing in bengaluru in corona times is poor kj george

ಕೊವಿಡ್‌ ನಿರ್ಹವಣೆ ಸಭೆಯಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅಸಹಾಯಕತೆ

ಆಕ್ಸಿಜನ್ ಸಿಗದಿದ್ದರೆ ರೋಗಿ ಉಳಿಯಲು ಸಾಧ್ಯವಿಲ್ಲ. ಸಚಿವರು ಔಷಧಕ್ಕೆ ಕೊರತೆ ಇಲ್ಲ ಅಂತಾರೆ, ಆದ್ರೆ ಅಲ್ಲಿ ಏನೂ ಸಿಗ್ತಿಲ್ಲ. ಅಧಿಕಾರಿಗಳು ಕೂಡ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ. ಬೆಡ್‌ ಕೇಳಿದ್ರೆ ಎಷ್ಟೋ ಹೊತ್ತಿನ ಬಳಿಕ ರಿಪ್ಲೈ ಮಾಡ್ತಾರೆ. ಬೆಡ್‌ ನಾಟ್‌ ಅವೈಲಬಲ್‌ ಅಂತ ಮೆಸೇಜ್‌ ಹಾಕ್ತಾರೆ. ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ, ಏನು ಉತ್ತರ ನೀಡಲಿ ಎಂದು ತಮ್ಮ ಕ್ಷೇತ್ರದಲ್ಲಿ ಕರಾಳ ಪರಿಸ್ಥಿತಿಯನ್ನು ಕೆ.ಜೆ.ಜಾರ್ಜ್ ಸಭೆಯ ಗಮನಕ್ಕ ತಂದರು.

ಸಭೆಯ ಬಳಿಕ ಸಚಿವ ಸೋಮಣ್ಣ ನಡೆಸಿದ ಪತ್ರಿಕಾಗೋಷ್ಠಿಯ ಸಾರಾಂಶ:

ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳು, 7 ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿದ್ದೇನೆ. ಸಭೆಯಲ್ಲಿ 2-3 ತೀರ್ಮಾನ ಕೈಗೊಂಡಿದ್ದೇವೆ. ಅಂಬೇಡ್ಕರ್ ಮೆಡಿಕಲ್ ಕಾಲೇಜು ನೂರಕ್ಕೆ ನೂರು ಕೋವಿಡ್ ಗೆ ಮೀಸಲು. ಅಂಬೇಡ್ಕರ್ ಕಾಲೇಜಿನ ಆವರಣದಲ್ಲೇ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡುತ್ತೇವೆ. 400 ಬೆಡ್‌ಗಳ ಆಸ್ಪತ್ರೆ, 300 ಆಕ್ಸಿಜನ್ ಬೆಡ್ ನೀಡಲಾಗಿತ್ತು. 150 ಆಕ್ಸಿಜನ್ ಬೆಡ್‌ಗಳನ್ನೂ ಈಗ ತೆಗೆದುಕೊಳ್ಳುತ್ತಿದ್ದೇವೆ. ಚರಕ ಆಸ್ಪತ್ರೆ 20 ಐಸಿಯು ಬೆಡ್ ಇದ್ದರೂ ಕ್ಲೋಸ್ ಮಾಡಿದ್ದರು ಇಂದು ಆರಂಭ ಮಾಡಲು ಸೂಚಿಸಿದ್ದೇನೆ ಎಂದು ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಪುಲಿಕೇಶಿನಗರ, ಸರ್ವಜ್ಞ ನಗರದಲ್ಲಿ ಕೊವಿಡ್ ಕೇರ್ ಸೆಂಟರ್ ಪ್ರಾರಂಭ. ಚರಕ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಮಾಡಲಾಗುವುದು‌. ಎಲ್ಲಾ ರೀತಿಯ ಸಿದ್ಧತೆ ಮಾಡಲಾಗುತ್ತಿದೆ. ಅದರ ಪಕ್ಕದ ಆಸ್ಪತ್ರೆಯಲ್ಲಿ 100 ಬೆಡ್‌ ನೀಡಲು ಹೇಳಿದ್ದಾರೆ. ಶಾಂತಿನಗರದಲ್ಲಿ 175 ಬೆಡ್‌ಗಳ ಕೊವಿಡ್ ಕೇರ್ ಸೆಂಟರ್ ಆರಂಭವಾಗಲಿದೆ. ಸಿ.ವಿ.ರಾಮನ್ ನಗರದಲ್ಲಿ 100 ಬೆಡ್‌ಗಳ ಕೇರ್ ಸೆಂಟರ್ ಬರಲಿದೆ. ಇಂದಿರಾನಗರದಲ್ಲಿ 20-30 ಬೆಡ್‌ ವ್ಯವಸ್ಥೆಗೆ ಸೂಚಿಸಿದ್ದೇವೆ ಎಂದು ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 20 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತದೆ. ಗೋವಿಂದರಾಜನಗರದಲ್ಲಿ ಇಂದು ಸಂಜೆ ಆರಂಭಿಸುತ್ತೇವೆ. ಮೃತದೇಹ ಸಾಗಿಸಲು ವಾಹನ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಈ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

BU ನಂಬರ್ ಇಲ್ಲದಿದ್ರೂ ಅಂಥವರ ಅಡ್ಮಿಟ್‌ಗೆ ಸೂಚನೆ:

ರೆಮ್‌ಡೆಸಿವಿರ್ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚಿಸುವೆ. RTPCR ಟೆಸ್ಟ್‌ನಲ್ಲಿ ನೆಗೆಟಿವ್ ಆದ್ರೂ ಉಸಿರಾಟ ಸಮಸ್ಯೆ ಎದುರಾಗುತ್ತದೆ. BU ನಂಬರ್ ಇಲ್ಲದಿದ್ರೂ ಅಂಥವರನ್ನು ಆಸ್ಪತ್ರೆಗಳಿಗೆ ಸೇರಿಸಿಕೊಂಡು ಟ್ರೀಟ್ಮೆಂಟ್​ ಕೊಡುವುದಕ್ಕೆ ಸೂಚನೆ ನೀಡಿದ ಸಚಿವ ಸೋಮಣ್ಣ, ಈ ಬಗ್ಗೆ ಸಿಎಂ ಜತೆಯೂ ಮಾತನಾಡುತ್ತೇವೆ . ಬೆಡ್, ಔಷಧ ಬಗ್ಗೆ ನಾಳೆಯೊಳಗೆ ಸರಳೀಕರಣ ವ್ಯವಸ್ಥೆ ಮಾಡ್ತೇವೆ ಎಂದರು.

(minister v somanna angry with the medical system prevailing in bengaluru in corona times)

Also Read: ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆತ ಸಚಿವ ಸೋಮಣ್ಣ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!