ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆತ ಸಚಿವ ಸೋಮಣ್ಣ
ಹಾಸನ: ದಿನದಿಂದ ದಿನಕ್ಕೆ ಲಾಕ್ಡೌನ್ ನಿಯಮಾವಳಿಗಳು ಸಡಿಲಿಕೆ ಆಗುತ್ತಲೇ ಇದೆ. ತಮ್ಮ ನಿರ್ಧಾರವನ್ನು ತಾವೇ ಬದಲು ಮಾಡೋ ಸರ್ಕಾರ ಮತ್ತೊಂದು ಕಡೆಯಿಂದ ಸಾಮಾಜಿಕ ಅಂತರ ಕಾಪಾಡಿ, ಎಚ್ಚರಿಕೆಯಿಂದಿರಿ, ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನೋ ಬುದ್ಧಿ ಮಾತು ಹೇಳುತ್ತೆ. ಆದ್ರೆ ಸರ್ಕಾರ ಹೊರಡಿಸಿರೋ ಆದೇಶವನ್ನ ಸಚಿವರೇ ಅನುಸರಿಸದೆ ಬೇಜವಾಬ್ದಾರಿತನ ತೋರೋದು ಹಲವು ಬಾರಿ ಮರುಕಳಿಸುತ್ತಲೇ ಇದೆ. ಹಾಸನ ಜಿಲ್ಲೆ ಅರಸೀಕೆರೆಗೆ ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಸಾಮಾಜಿಕ ಅಂತರ ಮರೆತು ತಮ್ಮ ಕಾರ್ಯಕರ್ತರನ್ನ ಭೇಟಿಮಾಡಿದ್ರು, ಪರಿಚಿತರೊಬ್ಬರ ಮನೆ […]
ಹಾಸನ: ದಿನದಿಂದ ದಿನಕ್ಕೆ ಲಾಕ್ಡೌನ್ ನಿಯಮಾವಳಿಗಳು ಸಡಿಲಿಕೆ ಆಗುತ್ತಲೇ ಇದೆ. ತಮ್ಮ ನಿರ್ಧಾರವನ್ನು ತಾವೇ ಬದಲು ಮಾಡೋ ಸರ್ಕಾರ ಮತ್ತೊಂದು ಕಡೆಯಿಂದ ಸಾಮಾಜಿಕ ಅಂತರ ಕಾಪಾಡಿ, ಎಚ್ಚರಿಕೆಯಿಂದಿರಿ, ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನೋ ಬುದ್ಧಿ ಮಾತು ಹೇಳುತ್ತೆ. ಆದ್ರೆ ಸರ್ಕಾರ ಹೊರಡಿಸಿರೋ ಆದೇಶವನ್ನ ಸಚಿವರೇ ಅನುಸರಿಸದೆ ಬೇಜವಾಬ್ದಾರಿತನ ತೋರೋದು ಹಲವು ಬಾರಿ ಮರುಕಳಿಸುತ್ತಲೇ ಇದೆ.
ಹಾಸನ ಜಿಲ್ಲೆ ಅರಸೀಕೆರೆಗೆ ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಸಾಮಾಜಿಕ ಅಂತರ ಮರೆತು ತಮ್ಮ ಕಾರ್ಯಕರ್ತರನ್ನ ಭೇಟಿಮಾಡಿದ್ರು, ಪರಿಚಿತರೊಬ್ಬರ ಮನೆ ಗೃಹಪ್ರವೇಶ ನಿಮಿತ್ತ ಬಂದಿದ್ದ ಸಚಿವರನ್ನ ಭೇಟಿಯಾಗೋಕೆ ನೂರಾರು ಜನರು ಕಾದಿದ್ದರು. ತಮ್ಮ ಹಲವು ಸಮಸ್ಯೆಗಳನ್ನ ಹೇಳಿಕೊಳ್ಳೋಕೆ ಸಚಿವರ ಸುತ್ತ ಗುಂಪುಗೂಡಿದಾಗ ಅಂತರ ಕಾಪಾಡಿಕೊಳ್ಳದೆ ಸಚಿವ ಸೋಮಣ್ಣ ಜನರ ಸಮಸ್ಯೆ ಆಲಿಸಿದ್ರು. ಸುಮಾರು ಅರ್ಧಗಂಟೆ ಕಾರ್ಯಕರ್ತರ ಜೊತೆಗಿದ್ದ ಸಚಿವರು ಬಳಿಕ ಬೆಂಗಳೂರಿಗೆ ಮರಳಿದ್ರು.
Published On - 2:54 pm, Sun, 31 May 20