ಮುಂದಿನ 5 ವರ್ಷದಲ್ಲಿ IAS ಅಧಿಕಾರಿಗಳು ಏನ್ಮಾಡ್ತಾರೆ ಎಂಬುದೇ ಈ ದೇಶಕ್ಕೆ ನಿರ್ಣಾಯಕ: ಸದ್ಗುರು
ಚೆನ್ನೈ: ಇಶಾ ಫೌಂಡೇಶನ್ನ ಸ್ಥಾಪಕ ಸದ್ಗುರು ಅವರು ಭಾರತದ ಉನ್ನತ IAS ಅಧಿಕಾರಿಗಳ ಜೊತೆ ನಿನ್ನೆ ಕೊಯಮತ್ತೂರಿನಲ್ಲಿ ಸುಮಾರು 90 ನಿಮಿಷಗಳ ಕಾಲ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ IAS ಅಧಿಕಾರಿಗಳನ್ನು ದೇಶದ ಬೆನ್ನೆಲುಬು (Spine Of The Nation) ಎಂದು ಕರೆದಿದ್ದಾರೆ. ಆಡಳಿತದ ದಕ್ಷತೆ ಮತ್ತು ಪರಿಣಾಮಕಾರಿಯನ್ನ ಅಭಿವೃದ್ಧಿಪಡಿಸಲು ಆಡಳಿತಗಾರರು ಹಾಗೂ ನಿರ್ವಾಹಕರ ನಡುವೆ ವಿಶ್ವಾಸವನ್ನು ಬೆಳೆಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ದೇಶದಲ್ಲಿ ಬದಲಾವಣೆ ತರಲು ಕಡಿಮೆ ಅವಧಿಯಲ್ಲಿ ಕೆಲಸ ಮಾಡುವ ರಾಜಕೀಯ ನಾಯಕರಿಗಿಂತ […]
ಚೆನ್ನೈ: ಇಶಾ ಫೌಂಡೇಶನ್ನ ಸ್ಥಾಪಕ ಸದ್ಗುರು ಅವರು ಭಾರತದ ಉನ್ನತ IAS ಅಧಿಕಾರಿಗಳ ಜೊತೆ ನಿನ್ನೆ ಕೊಯಮತ್ತೂರಿನಲ್ಲಿ ಸುಮಾರು 90 ನಿಮಿಷಗಳ ಕಾಲ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ IAS ಅಧಿಕಾರಿಗಳನ್ನು ದೇಶದ ಬೆನ್ನೆಲುಬು (Spine Of The Nation) ಎಂದು ಕರೆದಿದ್ದಾರೆ.
ಆಡಳಿತದ ದಕ್ಷತೆ ಮತ್ತು ಪರಿಣಾಮಕಾರಿಯನ್ನ ಅಭಿವೃದ್ಧಿಪಡಿಸಲು ಆಡಳಿತಗಾರರು ಹಾಗೂ ನಿರ್ವಾಹಕರ ನಡುವೆ ವಿಶ್ವಾಸವನ್ನು ಬೆಳೆಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. ದೇಶದಲ್ಲಿ ಬದಲಾವಣೆ ತರಲು ಕಡಿಮೆ ಅವಧಿಯಲ್ಲಿ ಕೆಲಸ ಮಾಡುವ ರಾಜಕೀಯ ನಾಯಕರಿಗಿಂತ 25-30 ವರ್ಷ ನಾಗರಿಕ ಸೇವೆಗಳಲ್ಲಿ ಕೆಲಸ ಮಾಡುವ ನಿಮ್ಮಿಂದ ಸಾಧ್ಯವಾಗುತ್ತೆ ಎಂದರು.
ಮುಂದಿನ 5 ವರ್ಷಗಳಲ್ಲಿ ನಾವು ಏನು ಮಾಡುತ್ತೇವೆ ಎಂಬುದನ್ನು ಈ ನಿರ್ಣಾಯಕ ಸಮಯದಲ್ಲಿ ನಿರ್ಧರಿಸಬಹುದು. ಇದು ಹೊಸ ಪೀಳಿಗೆಯ IAS ಅಧಿಕಾರಿಗಳಿಗೆ ಸ್ಪೋರ್ತಿಯಾಗಲಿದೆ ಎಂದರು. ಈ ಸಂವಾದದಲ್ಲಿ 1985ನೇ ಬ್ಯಾಚ್ನ IAS ಅಧಿಕಾರಿ ಡಾ.ಸಂಜೀವ್ ಚೋಪ್ರಾ, 1992ನೇ ಬ್ಯಾಚ್ನ ರಾಜೇಶ್ ಲಖೋನಿ ಸೇರಿದಂತೆ ಹಲವು IAS ಅಧಿಕಾರಿಗಳು ಭಾಗಿಯಾಗಿದ್ದರು.
ಯೋಗ ಪದದ ಅರ್ಥ ಒಕ್ಕೂಟ ಆಗಿದೆ. ನಿಮ್ಮ ವೈಯಕ್ತಿಕ ಸ್ವಭಾವವನ್ನು ನೀವು ತುಂಬಾ ಗಂಭೀರವಾಗಿ ಪರಿಗಣಿಸದಿದ್ದರೆ, ನೀವು ಸ್ವಾಭಾವಿಕವಾಗಿಯೇ ಯೋಗದಲ್ಲಿದ್ದೀರಿ ಎಂದು ಅರ್ಥ. ನೀವು ಪ್ರಕೃತಿಯೊಂದಿಗೆ ಬೆರೆತಾಗ ಮಾತ್ರ ಒಕ್ಕೂಟ ಸಾಧ್ಯವಾಗುತ್ತದೆ. ನೀವು ಸಂಪೂರ್ಣವಾಗಿ ಪ್ರಕೃತಿಯಲ್ಲಿ ಸೇರಿದ್ದರೆ, ನಿಮ್ಮಿಂದ ಉತ್ತಮವಾದದ್ದು ಹೊರಬರುತ್ತೆ ಎಂದು IAS ಅಧಿಕಾರಿಗಳ ಪ್ರಶ್ನೆಗೆ ಸದ್ಗುರು ಉತ್ತರಿಸಿದರು.
ಇದೇ ರೀತಿ ಐಎಎಸ್ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸದ್ಗುರು ಉತ್ತರಿಸಿದ್ದಾರೆ. ಇದರ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ.
Published On - 3:24 pm, Sun, 31 May 20