ಸದಾ ಜನಗಳಿಂದ ತುಂಬಿ ತುಳುಕುತ್ತಿದ್ದ ಬೀಚ್ ಈಗ ಖಾಲಿ ಖಾಲಿ
ಉಡುಪಿ: ವೀಕೆಂಡ್ ಬಂದ್ರೆ ಸಾಕು ಈ ಬೀಚಲ್ಲಿ ಸಾವಿರಾರು ಪ್ರವಾಸಿಗರು ಸೇರುತ್ತಿದ್ದರು. ಬಂಡೆಕಲ್ಲಿನ ಮೇಲೆ ನಡೆದಾಡುತ್ತಾ ಮೋಜು-ಮಸ್ತಿ ಮಾಡುತ್ತಿದ್ದ ಬೀಚ್ ಈಗ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಉಡುಪಿ ದೇವಾಲಯಗಳ ನಾಡು ಇದು ಪರಶುರಾಮನ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಭೋರ್ಗರೆಯುವ ಕಡಲು, ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯ, ಸುಂದರವಾದ ತಾಣ ನೋಡಲು ಮೂಲೆಮೂಲೆಗಳಿಂದ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ. ಶಾಲಾ ಮಕ್ಕಳಿಗೆ ರಜೆಯ ಸಮಯ ಮತ್ತು ವೀಕೆಂಡ್ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಉಡುಪಿ ಕಡೆ […]
ಉಡುಪಿ: ವೀಕೆಂಡ್ ಬಂದ್ರೆ ಸಾಕು ಈ ಬೀಚಲ್ಲಿ ಸಾವಿರಾರು ಪ್ರವಾಸಿಗರು ಸೇರುತ್ತಿದ್ದರು. ಬಂಡೆಕಲ್ಲಿನ ಮೇಲೆ ನಡೆದಾಡುತ್ತಾ ಮೋಜು-ಮಸ್ತಿ ಮಾಡುತ್ತಿದ್ದ ಬೀಚ್ ಈಗ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಉಡುಪಿ ದೇವಾಲಯಗಳ ನಾಡು ಇದು ಪರಶುರಾಮನ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಭೋರ್ಗರೆಯುವ ಕಡಲು, ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯ, ಸುಂದರವಾದ ತಾಣ ನೋಡಲು ಮೂಲೆಮೂಲೆಗಳಿಂದ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ.
ಶಾಲಾ ಮಕ್ಕಳಿಗೆ ರಜೆಯ ಸಮಯ ಮತ್ತು ವೀಕೆಂಡ್ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಉಡುಪಿ ಕಡೆ ಆಗಮಿಸುತ್ತಾರೆ. ಮಣಿಪಾಲ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ ಹೊರರಾಜ್ಯದ ವಿದ್ಯಾರ್ಥಿಗಳು ಉಡುಪಿ ಸುತ್ತಮುತ್ತಲಿನ ಬೀಚ್ ಗಳಲ್ಲಿ ಎಂಜಾಯ್ ಮಾಡುತ್ತಾರೆ.
ಲೈಟ್ ಹೌಸ್ ನೋಡೋದೆ ಸುಂದರ: ಉಡುಪಿ ಜಿಲ್ಲೆಯ ಪ್ರಸಿದ್ಧ ಬೀಚ್ಗಳಲ್ಲಿ ಒಂದಾದ ಕಾಪು ಲೈಟ್ ಹೌಸ್ ವೀಕೆಂಡ್ ಬಂದ್ರೆ ಸಾಕು ಸಾವಿರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಈ ಬೀಚ್ ಎಲ್ಲಾ ಬೀಚ್ ಗಳಿಗಿಂತ ವಿಶೇಷವಾಗಿದೆ ಸುಮಾರು 27,12 ಮೀಟರ್ ಎತ್ತರದ ಬಂಡೆಯ ಮೇಲೆ ಅದ್ಭುತ ಕಲ್ಪನೆಯೊಂದಿಗೆ ಬ್ರಿಟಿಷರ ಕಾಲದಲ್ಲಿ ಅಂದ್ರೆ 1901 ರಲ್ಲಿ ನಿರ್ಮಾಣಗೊಂಡಿರುವ ದಾರಿ ಸೂಚಕ ಸಮುದ್ರದಲ್ಲಿ ಸಂಚರಿಸುವ ವಾಣಿಜ್ಯ ಸರಕು, ನಾವೆಗಳಿಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಲಕ್ಷಾಂತರ ಮೀನುಗಾರರಿಗೆ ದಡ ತೋರುವಲ್ಲಿ ನೆರವಾಗುತ್ತೆ. ಈ ಲೈಟ್ ಹೌಸ್ ನೋಡಲು ಪ್ರವಾಸಿಗರು ಆಗಮಿಸುತ್ತಾರೆ.
ಹೆಬ್ಬಂಡೆಗಳಿಗೆ ಅಪ್ಪಳಿಸುವ ಕಡಲ ಅಲೆಗಳು, ಸೂರ್ಯಸ್ತದ ಮೋಹಕ ದೃಶ್ಯ, ಜನರಿಗೆ ಓಡಾಡಲು ವಿಶಾಲವಾದ ಸ್ಥಳವಕಾಶ ಇರುವುದರಿಂದ ಈ ಬೀಚ್ ವಿಭಿನ್ನವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಲಾಕ್ಡೌನ್ನಿಂದಾಗಿ ಪ್ರವಾಸಿಗರು ಇತ್ತ ಮುಖ ಮಾಡುತ್ತಿಲ್ಲ. ಬೀಚ್ ಪರಿಸರದಲ್ಲಿರುವ ಅಂಗಡಿಗಳು ಮುಚ್ಚಿ ಸುಮಾರು ತಿಂಗಳುಗಳು ಕಳೆದಿವೆ. ಪ್ರವಾಸಿಗರನ್ನು ತಿರುಗಾಡಿಸಲು ಉಪಯೋಗಿಸುತ್ತಿದ್ದ ಬೋಟ್ಗಳು ದಡ ಸೇರಿವೆ.
ಇನ್ನು ಮಳೆಗಾಲ ಆರಂಭವಾಗಿರುವುದರಿಂದ ಬೀಚ್ಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬೀಚ್ಗಳ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಿ, ಹೆಚ್ಚು ಹೆಚ್ಚು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಬೇಕು. ಏನೇ ಆಗಲಿ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರೇಕ್ಷಣೀಯ ಸ್ಥಳ ಮತ್ತು ಬೀಚ್ಗಳ ಅಭಿವೃದ್ಧಿ ಆಗಲಿ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತೆ ಆಗಲಿ ಎಂಬುದೇ ನಮ್ಮ ಆಶಯ.
Published On - 2:10 pm, Sun, 31 May 20