ಮಂಡ್ಯ: 70 ಮನೆಗಳಿರುವ ಗ್ರಾಮಕ್ಕೆ ದಿಗ್ಬಂಧನ; ರಸ್ತೆಗಳಿಗೆ ಮಣ್ಣು ಸುರಿದು ಸಂಚಾರ ತಡೆ

ವಳಗರೆ ದೇವರಹಳ್ಳಿ 28 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಇಡೀ ಗ್ರಾಮವನ್ನು 14 ದಿನಗಳ ಕಾಲ ದಿಗ್ಬಂಧನದಲ್ಲಿಡಲಾಗಿದೆ. ಈ 14 ದಿನಗಳಲ್ಲಿ ಈ ಗ್ರಾಮದಿಂದ ಯಾರೂ ಹೊರ ಹೋಗದಂತೆ ಮತ್ತು ಹೊರಗಿನವರು ಗ್ರಾಮಕ್ಕೆ ಬಾರದಂತೆ ತಾಲೂಕು ಆಡಳಿತ ನಿರ್ಬಂಧ ವಿಧಿಸಿದೆ.

ಮಂಡ್ಯ: 70 ಮನೆಗಳಿರುವ ಗ್ರಾಮಕ್ಕೆ ದಿಗ್ಬಂಧನ; ರಸ್ತೆಗಳಿಗೆ ಮಣ್ಣು ಸುರಿದು ಸಂಚಾರ ತಡೆ
ವಳಗರೆ ದೇವರಹಳ್ಳಿಗೆ ದಿಗ್ಬಂಧನ
Follow us
sandhya thejappa
|

Updated on: Apr 29, 2021 | 1:14 PM

ಮಂಡ್ಯ: ಕೊರೊನಾ ಎರಡನೇ ಅಲೆಯ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲೂ ಅಪಾರ ಪ್ರಮಾಣದಲ್ಲಿ ಹರಡಿರುವ ಕೊವಿಡ್​ಗೆ ಹಳ್ಳಿಗಳ ಜನ ತತ್ತರಿಸುತ್ತಿದ್ದಾರೆ. ಎರಡನೇ ಅಲೆ ಎನ್ನುವುದು ಕೇವಲ ನಗರಕ್ಕಷ್ಟೇ ಸೀಮಿತವಾಗಿರದೆ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಹರಡಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ವಳಗರೆ ದೇವರಹಳ್ಳಿ ಗ್ರಾಮದ 28 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ವಳಗರೆ ದೇವರಹಳ್ಳಿ ಜನರಿಗೆ ತಾಲೂಕು ಆಡಳಿತ ದಿಗ್ಬಂಧನ ಹಾಕಿದ್ದು, 14 ದಿನಗಳ ಕಾಲ ಗ್ರಾಮದಿಂದ ಯಾರೂ ಹೊರಗೆ ಹೋಗುವ ಹಾಗಿಲ್ಲ. ಗ್ರಾಮಕ್ಕೆ ಯಾರೂ ಕಾಲಿಡುವ ಹಾಗಿಲ್ಲ. ಗ್ರಾಮದ ಸಂಪರ್ಕ ಕಲ್ಪಿಸುವ ನಾಲ್ಕೂ ದಿಕ್ಕುಗಳಲ್ಲಿನ ರಸ್ತೆಗೆ ಮಣ್ಣು ಸುರಿದು ರಸ್ತೆ ಮುಚ್ಚಲಾಗಿದ್ದು, ಪೊಲೀಸ್ ಕಾವಲು ಹಾಕಲಾಗಿದೆ.

ನಾಲ್ಕು ದಿಕ್ಕುಗಳಿಗೆ ಮಣ್ಣು ಸುರಿದು ಸಂಚಾರ ತಡೆ ವಳಗರೆ ದೇವರಹಳ್ಳಿ 28 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಇಡೀ ಗ್ರಾಮವನ್ನು 14 ದಿನಗಳ ಕಾಲ ದಿಗ್ಬಂಧನದಲ್ಲಿಡಲಾಗಿದೆ. ಈ 14 ದಿನಗಳಲ್ಲಿ ಈ ಗ್ರಾಮದಿಂದ ಯಾರೂ ಹೊರ ಹೋಗದಂತೆ ಮತ್ತು ಹೊರಗಿನವರು ಗ್ರಾಮಕ್ಕೆ ಬಾರದಂತೆ ತಾಲೂಕು ಆಡಳಿತ ನಿರ್ಬಂಧ ವಿಧಿಸಿದೆ. ಗ್ರಾಮದ ಸಂಪರ್ಕ ಕಲ್ಪಿಸುವ ನಾಲ್ಕೂ ದಿಕ್ಕುಗಳಲ್ಲಿನ ರಸ್ತೆಗಳಿಗೆ ಮಣ್ಣು ಸುರಿದು ರಸ್ತೆ ಮುಚ್ಚಲಾಗಿದೆ. ಜೊತೆಗೆ ಪೊಲೀಸ್ ಕಾವಲು ಹಾಕಲಾಗಿದೆ. ಗ್ರಾಮದಲ್ಲಿ 70 ಮನೆಗಳಿದ್ದು, ಸುಮಾರು 300 ರಿಂದ 400 ಜನ ಸಂಖ್ಯೆಯನ್ನ ಹೊಂದಿದೆ. ಯುಗಾದಿ ಹಬ್ಬಕ್ಕೆಂದು ಬೆಂಗಳೂರಿನಲ್ಲಿದ್ದ ಕೆಲವರು ಗ್ರಾಮಕ್ಕೆ ಬಂದಿದ್ದರಿಂದ ಗ್ರಾಮದ ಕೆಲವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಇದರಿಂದ 100 ಜನರನ್ನ ಪರೀಕ್ಷಿಸಿದಾಗ 28 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ಪಾಂಡವಪುರ ತಾಲೂಕಿನಲ್ಲಿನ ಹಳ್ಳಿಗಳಲ್ಲಿ ಕೊರೊನಾ ಪಾಸಿಟಿವ್​ಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಲಾರಂಭಿಸಿದೆ. ಒಂದೊಂದು ಗ್ರಾಮದಲ್ಲೂ 20 ಕ್ಕೂ ಹೆಚ್ಚು ಜನರು ಪಾಸಿಟಿವ್ ಬಂದಿರುವ ಗ್ರಾಮಗಳನ್ನ ಗುರುತು ಮಾಡಲಾಗಿದ್ದು, ತಾಲೂಕಿನ ಕ್ಯಾತನಹಳ್ಳಿ, ಶೆಟ್ಟ ಹಳ್ಳಿಗಳಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದಿದೆ. ಆ ಗ್ರಾಮಗಳ ಜನರ ಮೇಲೂ ನಿಗಾವಹಿಸಲಾಗಿದೆ. ಇದರ ಜೊತೆಗೆ ತಾಲೂಕಿನ ಕೋಡಾಲ ಗ್ರಾಮದಲ್ಲೂ 24 ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು, ಎಲ್ಲರಲ್ಲೂ ಆತಂಕವನ್ನುಂಟು ಮಾಡಿದೆ.

ಕೊರೊನಾ ಬಗ್ಗೆ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ ಕೋಡಾಲ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಡೆಯಿಂದ ಮೈಕ್​ನಲ್ಲಿ ಕ್ಯಾನ್ವಸ್ ಮಾಡುತ್ತಿದ್ದಾರೆ. ಗ್ರಾಮದ ಪ್ರತಿಯೊಬ್ಬರಿಗೂ ಕೊರೊನಾ ಪಾಸಿಟಿವ್ ಪರೀಕ್ಷೆ ಮಾಡಲು ನಿರ್ಧರಿಸಿರುವುದರಿಂದ ಭಯ ಪಡದೆ ಗ್ರಾಮಸ್ಥರು ಮುಂದೆ ಬಂದು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್, ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೊವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾದ ಗ್ರಾಮಗಳ ಮೇಲೆ ನಿಗಾವಹಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ

ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ; ಮರಣ ಪ್ರಮಾಣದಲ್ಲಿ 3ನೇ ಸ್ಥಾನ

ಪ್ರಸಕ್ತ ಶೈಕ್ಷಣಿಕ ವರ್ಷದ ಬೋಧನಾ ಶುಲ್ಕ ಮಾತ್ರ ತೆಗೆದುಕೊಳ್ಳಿ; ಬೇರೆ ಯಾವ ಬಾಬತ್ತಿನಲ್ಲೂ ಹಣ ಪಡೆಯಬೇಡಿ: ಸರ್ಕಾರದ ಖಡಕ್ ಆದೇಶ

(Taluk panchayat blocked Valagare Devahalli village due to high number of corona infected people in mandya)

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?