ಸಿಲಿಕಾನ್ ಸಿಟಿ ಮಂದಿಗೆ ದರ ದುಪ್ಪಟ್ಟು ಧಮಾಕ: ಗಗನಕ್ಕೆ ಏರಿದ ಹೂವು, ಹಣ್ಣು, ಪಟಾಕಿ ಬೆಲೆ

| Updated By: ಆಯೇಷಾ ಬಾನು

Updated on: Oct 23, 2022 | 10:38 AM

ದೀಪಾವಳಿ ಹಿನ್ನೆಲೆ ತರಕಾರಿ, ದಿನ ನಿತ್ಯ ಬಳಸುವ ಸಾಮಾಗ್ರಿಗಳು, ಪಟಾಕಿಗಳ ದರ ಹೆಚ್ಚಾಗಿದೆ. ಹೀಗಾಗಿ ಭರ್ಜರಿ ಹಬ್ಬ ಮಾಡಬೇಕು ಎಂದಿಕೊಂಡಿರುವವರ ಜೇಬಿಗೆ ಕತ್ತರಿ ಬೀಳುವುದು ಪಕ್ಕ.

ಸಿಲಿಕಾನ್ ಸಿಟಿ ಮಂದಿಗೆ ದರ ದುಪ್ಪಟ್ಟು ಧಮಾಕ: ಗಗನಕ್ಕೆ ಏರಿದ ಹೂವು, ಹಣ್ಣು, ಪಟಾಕಿ ಬೆಲೆ
ಬೆಂಗಳೂರಿನ K.R​.ಮಾರ್ಕೆಟ್​​ನಲ್ಲಿ ಜನವೋ ಜನ
Follow us on

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ(Deepavali 2022) ಸಂಭ್ರಮ ಶುರುವಾಗಿದೆ. ಮನೆ ಮನೆಗಳಲ್ಲಿ ತಯಾರಿ ಜೋರಾಗಿದೆ. ಎಲ್ಲರೂ ಹೂವು-ಹಣ್ಣು, ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ಹಬ್ಬದ ಖುಷಿಯಲ್ಲಿದ್ದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಿನ್ನೆ ಖಾಸಗಿ ಬಸ್​ಗಳ ಟಿಕೆಟ್​ ದರದಿಂದ ಕಂಗಾಲಾಗಿದ್ದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ದೀಪಾವಳಿ ಹಿನ್ನೆಲೆ ತರಕಾರಿ, ದಿನ ನಿತ್ಯ ಬಳಸುವ ಸಾಮಾಗ್ರಿಗಳು, ಪಟಾಕಿಗಳ ದರ ಹೆಚ್ಚಾಗಿದೆ. ಹೀಗಾಗಿ ಭರ್ಜರಿ ಹಬ್ಬ ಮಾಡಬೇಕು ಎಂದಿಕೊಂಡಿರುವವರ ಜೇಬಿಗೆ ಕತ್ತರಿ ಬೀಳುವುದು ಪಕ್ಕ.

ಒಂದೇ ತಿಂಗಳಲ್ಲಿ ಎರಡು ದೊಡ್ಡ ಹಬ್ಬಗಳು ಬಂದಿವೆ. ಆದ್ರೆ ದಸರಾ ಹಬ್ಬದಷ್ಟು ಬೆಲೆ ಏರಿಕೆ ದೀಪಾವಳಿ ಹಬ್ಬಕ್ಕೆ ಇಲ್ಲ. ಸಿಲಿಕಾನ್ ಸಿಟಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಿಂದ ಬೆಳೆ ಹಾನಿಯಾಗಿದ್ದು ಕೊಂಚ ಬೆಲೆ ಏರಿಕೆಯಾಗಿದೆ.

ಕೆಆರ್ ಮಾರ್ಕೆಟ್​ನಲ್ಲಿ ಇಂದಿನ ಹೂವು ಹಣ್ಣುಗಳ ದರ

  • ಮಲ್ಲಿಗೆ ಒಂದು KG- 500-550
  • ಕನಕಾಂಬರ 1200 KG
  • ಸೇವಂತಿಗೆ 200 -250 kg
  • ಗುಲಾಬಿ – 410 kg
  • ಸುಗಂಧರಾಜ 400 kg
  • ಚೆಂಡು ಹೂವು 160-170kg

ಇಂದಿನ ಹಣ್ಣುಗಳ ಬೆಲೆ

  • ಸೇಬು 100 kg
  • ದಾಳಿಂಬೆ 110 kg
  • ಮೂಸಂಬಿ 60 kg
  • ಆರೆಂಜ್ 100 kg
  • ಸಪೋಟ 90kg
  • ಸೀಬೆಹಣ್ಣು 150kg
  • ಏಲಕ್ಕಿ ಬಾಳೆಹಣ್ಣು 70kg

ಅಗತ್ಯ ವಸ್ತುಗಳ ಬೆಲೆ

  • ಮಾವಿನ ಎಲೆ 20 – ಕಟ್ಟು
  • ಬಾಳೆ ಕಂಬ – 60-80rs
  • ಬೇವಿನ ಸೊಪ್ಪು ಕಟ್ಟು – 20rs
  • ತುಳಸಿ ತೋರಣ ಮಾರು -50rs
  • ಬೆಲ್ಲ (ಅಚ್ಚು / ಉಂಡೆ) – 70 ರಿಂದ 80rs

ಈ ವರ್ಷ ಪಾಟಾಕಿಗಳ ಬೆಲೆ ಬಲು ದುಬಾರಿ

ಈ ವರ್ಷ 100 ರಿಂದ‌ 150% ರಷ್ಟು ಪಟಾಕಿಗಳ ಬೆಲೆ ಏರಿಕೆ ಮಾಡಲಾಗಿದೆ. ಪಾಟಾಕಿ ತಾಯಾರಿಸುವ ಕಚ್ಚವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿಗಳ ಉತ್ಬದನೆಯಾಗಿಲ್ಲ. ಜೊತಗೆ ಬೇರೆ ಕಡೆಯಿಂದ ಬೇಡಿಕೆಗೆ ತಕ್ಕಂತೆ ಪಟಾಕಿಗಳು ಸಿಗುತ್ತಿಲ್ಲ. ಈ ಮಧ್ಯೆ ಸರ್ಕಾರ ಹಸಿರು ಪಟಾಕಿಯನ್ನೆ ಹೊಡೆಯಬೇಕು ಅಂತ ಆದೇಶ ಮಾಡಿರುವ ಹಿನ್ನೆಲೆ ಹಸಿರು ಪಾಟಾಕಿ ತಯಾರಿಸಲು ಬೇಕಾಗುವ ಸ್ಟ್ರೋಟಿಯಂ ನೈಟ್ರೇಟ್ ಬೆಲೆ ದುಬಾರಿಯಾಗಿದೆ. ಈ ಸ್ಟ್ರೋಟಿಯಂ ನೈಟ್ರೇಟ್ ಬಳಕೆ ಮಾಡಿಯೇ ಹಸಿರು ಪಟಾಕಿ ತಾಯಾರಿಸಬೇಕು. ಹೀಗಾಗಿ ಪಟಾಕಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಇದ್ದ ಹಿನ್ನೆಲೆ ನಷ್ಟದಿಂದಾಗಿ ಸಾಕಷ್ಟು ಪಾಟಾಕಿ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಹೀಗಾಗಿ ಈ ಪಾಟಾಕಿಗಳ ಉತ್ಪದನಾ ಪ್ರಮಾಣ ಕಡಿಮೆ‌ ಇದ್ದು ಪಟಾಕಿಗಳ‌ ಬೆಲೆ ಗಗನಕ್ಕೆ ಏರಿದೆ.

ಬೆಂಗಳೂರಿನ K.R​.ಮಾರ್ಕೆಟ್​​ನಲ್ಲಿ ಜನವೋ ಜನ

ಹಣ್ಣು-ತರಕಾರಿಗಳ ದರ ಎಷ್ಟೇ ಏರಿಕೆಯಾದರೂ ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ನಾಳೆಯಿಂದ ದೀಪಾವಳಿ ಹಬ್ಬದ ಸಂಭ್ರಮ ಹಿನ್ನೆಲೆ ತರಕಾರಿ, ಹೂವು, ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ. K.R​.ಮಾರ್ಕೆಟ್​​ನಲ್ಲಿ ದೀಪಾವಳಿಯ ರಂಗು ಹೆಚ್ಚಾಗಿದೆ.

ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ಸಿಡಿತ ಪ್ರಕರಣ

ದೀಪಾವಳಿ ಹಬ್ಬಕ್ಕೂ ಮುನ್ನವೇ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಕಲಾಸಿಪಾಳ್ಯದಲ್ಲಿ ನಿನ್ನೆ ಪಟಾಕಿ ಸಿಡಿದು 35 ವರ್ಷದ ವ್ಯಕ್ತಿಯ ಕಣ್ಣಿಗೆ ಗಾಯಗಳಾಗಿದೆ. ಹಾಗೂ ಜೆಪಿ ನಗರದಲ್ಲಿ ಪಟಾಕಿ ಸಿಡಿದು 10 ವರ್ಷದ ಬಾಲಕನಿಗೆ ಗಾಯವಾಗಿದ್ದು ಇಬ್ಬರು ಗಾಯಾಳುಗಳಿಗೂ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Published On - 10:33 am, Sun, 23 October 22